ಈಗಾಗಲೇ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ದೋರಕಿಸುವ ಉದ್ದೇಶದಿಂದ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡುತ್ತಾ,ಆಡಳಿತವನ್ನು ಮುನ್ನೆಡಿಸಿಕೊಂಡು ಹೋಗುತ್ತಿರುವುದು ರಾಜ್ಯದ ಜನರಿಗೆ ತಿಳಿದಿರುವ ವಿಷಯ.ಇದೆ ನಿಟ್ಟಿನಲ್ಲಿ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಪಕ್ಷವು ತಮ್ಮ ಆಡಳಿತ ಅವಧಿಯಿಂದಲೂ ಜನಸಾಮಾನ್ಯರು ದಿನ ಬಳಕೆ ಮಾಡುತ್ತಿರುವ ದಿನಸಿ ಮತ್ತು ಇತರೆ ಸಾಮಾಗ್ರಿಗಳ ಮೇಲೆ ಹೆಚ್ಚಿನ ಬೆಲೆ ನಿಗಧಿ ಮಾಡುವುದರ ಮೂಲಕ ರಾಜ್ಯದ ಜನರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟವನ್ನುಂಟು ಮಾಡಲು ಮುಂದಾಗಿದೆ ಎನ್ನುವುದು ಪ್ರಜ್ಞಾವಂತರ ಮಾತಾಗಿದೆ.ಅದು ಬಿಡಿ.ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ದುರುದ್ದೇಶದಿಂದ ಒಂದಲ್ಲಾ,ಒಂದು ರೀತಿಯ ಜನರ ಜೀವನಕ್ಕೆ ಮಾರಕವಾಗುವಂತ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೋಳಿಸುತ್ತಲೆ ಬರುತ್ತಿವೆ.ಈ ಮೊದಲು ಕಾಂಗ್ರೆಸ್ ಪಕ್ಷವು ಸಹ ಅಧಿಕಾರದ ವ್ಯಾಮೋಹದಿಂದ ರಾಜ್ಯದ ಜನರಿಗೆ ಇನ್ನಿಲ್ಲದ ಭರವಸೆಗಳನ್ನು ನೀಡುವುದರ ಮೂಲಕ ಜನರ ಜೀವನಕ್ಕೆ ಮಾರಕವಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ದೃಶ್ಯಗಳಾಗಿವೆ.
ಇನ್ನು,ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಜನರು ದಿನ ಬಳಕೆ ಮಾಡುವಂತ ಸಾಮಗ್ರಿಗಳು ಕೈಗೆ ಎಟಕುವ ಬೆಲೆಗೆ ಸಿಗುತ್ತಿದ್ದವು ಎನ್ನುವುದು ಎಷ್ಟರ ಮಟ್ಟಿಗೆ ಸತ್ಯವೋ!ಅದೇ ಸಾಮಗ್ರಿಗಳು ಇದೀಗ ಗಗನಕ್ಕೆ ಏರಿದ ಬೆಲೆಗೆ ದೋರಕುತ್ತಿರುವುದು ವಾಸ್ತವತೆ.ಅಧಿಕಾರದ ಗದ್ದುಗೆ ಏರಬೇಕು ಎನ್ನುವ ಹಂಬಲದಿಂದ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ಐದು ಭಾಗ್ಯಗಳನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ರಾಜ್ಯದ ಜನರ ಮತಗಳ ಮನ್ನಣೆಯಿಂದ ಬಹು ಮತಗಳಿಂದ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ರಾಜ್ಯದ ಜನತೆಗೆ ಗೋತ್ತಿರುವ ವಿಷಯ.ನೀಡಿರುವ ಭಾಗ್ಯಗಳಲ್ಲಿ ಕೆಲವು ಜನರ ಉಪಯೋಗಕ್ಕೆ ಬಂದರೆ.ಇನ್ನು ಕೆಲವು ಭಾಗ್ಯಗಳು ಉಪಯೋಗಕ್ಕೆ ಬಾರದಂತಾಗಿವೆ.ಈಗಾಗಲೇ ನೀಡಿರುವ ಭಾಗ್ಯಗಳಲ್ಲಿ ಒಂದಾದ ಯಜಮಾನಿಗೆ ಎರಡು ಸಾವಿರ ನೀಡುವುದು,ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವುದು ಸರ್ಕಾರದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ,ಈ ಭಾಗ್ಯಗಳನ್ನು ನೀಡುವ ಬದಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣ ದೋರಕಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರೆ ರಾಜ್ಯವು ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತ ಮಟ್ಟಕ್ಕೆ ತಲುಪುತ್ತಿತ್ತು ಎನ್ನುವುದು ಪ್ರಜ್ಞಾವಂತರ ಮಾತಾಗಿದೆ.
ಈಗೀನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಯೋಜನೆಯಾದ ಅನ್ನಭಾಗ್ಯ ಯೋಜನೆಯಲ್ಲಿ ಜನರಿಗೆ ನೀಡುತ್ತಿರುವ ಅಕ್ಕಿಯು,ಭ್ರಷ್ಟ ಅಧಿಕಾರಿಗಳ ಕೃಪಾಕಟಾಕ್ಷದಿಂದ ಕದೀಮರ ಜೇಬು ತುಂಬಿಸುವ ಯೋಜನೆಯಾಗುತ್ತಿರುವುದು ರಾಜ್ಯದಲ್ಲೆಡೆ ಕಂಡು,ಕೇಳಿರುವ ದೃಶ್ಯಗಳಾಗಿವೆ.ಇನ್ನೂ ಅಧಿಕಾರದ ಗದ್ದುಗೆ ಏರುವ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷವು ಜನರಿಗೆ ಉಪಯೋಗಕ್ಕೆ ಬಾರದ ಆಶ್ವಾಸನೆಗಳನ್ನು ಈಡೇರಿಸುವ ಉದ್ದೇಶದಿಂದ ಬೆಲೆ ಏರಿಕೆಯ ಮುಖಾಂತರ ಹಗಲು ದರೋಡೆಗೆ ಮುಂದಾಗಿರುವುದು ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ ಎಂಬಂತೆ ತೋರುತ್ತಿದೆ.ಈಗಾಗಲೇ ಪ್ರತಿ ಬಾರಿ ನಡೆಯುವ ಅಧಿವೇಶನಗಳಲ್ಲಿ ಸರ್ಕಾರವು ರಾಜ್ಯದ ಜನರ ಬದುಕಿಗೆ ಅನುಕೂಲ ಮಾಡುವ ಹಿತದೃಷ್ಟಿಯಿಂದ ಘೋಷಿಸಿರುವ ಭಾಗ್ಯಗಳನ್ನು ಸಮರ್ಪಕವಾಗಿ ದೋರಕಿಸುವ ಉದ್ದೇಶದಿಂದ ಹೆಚ್ಚಿನ ತೇರಿಗೆ ಮತ್ತು ಸಾಲದ ಹೊರೆಯನ್ನು ತೋರುತ್ತಾ ಬರುತ್ತಿರುವುದು ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಗೋತ್ತಿರುವ ವಿಷಯ.ಈಗಾಗಲೇ ಸರ್ಕಾರವು ಜನರು ದಿನನಿತ್ಯ ಉಪಯೋಗಿಸುವ ವಾಹನಗಳ ನೋಂದಣಿ,ಮದ್ಯಪಾನದ ತೇರಿಗೆ,ಆಸ್ತಿ ನೋಂದಣಿ ಮತ್ತು ದಿನ ಬಳಸುವ ದಿನಸಿ ಸಾಮಗ್ರಿಗಳ ಮೇಲೆ ಶೇಕಡ 20% ಹೆಚ್ಚಿನ ತೇರಿಗೆ ವಿಧಿಸುವುದರ ಮೂಲಕ ಜನರನ್ನ ಆರ್ಥಿಕ ಸಂಕಷ್ಟಕ್ಕೆ ಸೀಲುಕಿಸಿರುವುದು ಸತ್ಯಕ್ಕೆ ಹತ್ತಿರ.
ಇದೀಗ ಸರ್ಕಾರವು ಹಾಲು,ಮೊಸರು,ವಿದ್ಯುತ್ ದರಗಳಲ್ಲಿ ಮತ್ತೆ ಹೆಚ್ಚಳ ಮಾಡಿರುವುದು ದುಬಾರಿ ಪ್ರಪಂಚದಲ್ಲಿ ಬೇಯುತ್ತಿರುವ ಜನರಿಗೆ ಮತ್ತಷ್ಟು ಬಿಸಿ ತಟ್ಟುವ ಹಾಗೆ ಮಾಡಿದೆ.ಇನ್ನೂ ಹೆಚ್ಚಳವಾಗಿರುವ ದರದ ಬಗ್ಗೆ ಪಕ್ಷದ ಕೆಲ ರಾಜಕೀಯ ನಾಯಕರುಗಳು ಹಾಲಿನ ದರ ಹೆಚ್ಚಳ ಮಾಡಿರುವುದು ಸರ್ಕಾರದ ಲಾಭಕ್ಕಾಗಿ ಅಲ್ಲ.ರೈತರ ಅನುಕೂಲಕ್ಕೆ ಎನ್ನುವ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರದ ಮೇಲೆ ಬರುತ್ತಿರುವ ವಿರೋಧ ಮಾತುಗಳಿಗೆ ತೆರೆ ಎಳೆಯುವಂತ ಕೆಲಸಕ್ಕೆ ಮುಂದಾಗಿದ್ದಾರೆ.ಈ ಪಕ್ಷದವರು ಹೇಳುವುದೇನೂ ಹೊಸ ಮಾತುಗಳಲ್ಲಾ ಬಿಡಿ.ಪ್ರತಿಯೊಂದು ರಾಜಕೀಯ ಪಕ್ಷದವರು ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದು,ರೈತರಿಗೆ ಎಷ್ಟರ ಮಟ್ಟಿಗೆ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೋತ್ತಿರುವ ವಿಷಯ.ಆದರೆ ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರದ ಹಮಲಿನಿಂದ ಘೋಷಿಸಿರುವ ಭರವಸೆಗಳನ್ನು ಈಡೇರಿಸುವ ಉದ್ದೇಶದಿಂದ ಜನರು ದಿನ ನಿತ್ಯ ಉಪಯೋಗಿಸುವ ಸಾಮಗ್ರಿಗಳ ಮೇಲೆ ಹೆಚ್ಚಿನ ದರವನ್ನು ಏರುವುದರ ಬದಲು ಶಾಸಕ,ಸಚಿವರ ವೇತನ ಭತ್ಯೆವನ್ನು ಕಡಿತಗೊಳಿಸಿ,ಜನರಿಗೆ ಉತ್ತಮ ಆಡಳಿತ ನೀಡದೆ ಹಗಲು ದರೋಡೆಗೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅರ್ಥಹಿಸಿಕೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.