ರಾಣೆಬೆನ್ನೂರು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ದಂಧೆ:ಪೊಲೀಸ್ ಇಲಾಖೆ ಮೌನ?

 

 

ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಣೆಬೆನ್ನೂರು ತಾಲೂಕಿನಾದ್ಯಂತ ಅಕ್ರಮ ಚಟುವಟಿಕೆಗಳು ತಾಂಡವಾಡುತ್ತಿರುವುದು ಇಲ್ಲಿನ ರಾಜಕೀಯ ದುರಾಡಳಿತಕ್ಕೆ ಸಾಕ್ಷಿಯಾಗಿದೆ.ಈಗಾಗಲೇ ತಾಲೂಕಿನಲ್ಲಿ ಇಸ್ಪೀಟ್,ಮಟ್ಕಾ,ಅಕ್ರಮ ಮರಳು ಸಾಗಾಟದ ದಂಧೆಗಳು ತಾಲೂಕಿನ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿರುವುದನ್ನು ಅರಿತ ಅನೇಕ ಪತ್ರಿಕಾ ಮಿತ್ರರು,ಸುದ್ದಿ ಪ್ರಕಟಿಸುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಿರುತ್ತಾರೆ.ಆದರೆ ಇದ್ಯಾವುದಕ್ಕೂ ತಲೆ ಕೇಡಿಸಿಕೊಳ್ಳದ ಜಿಲ್ಲಾಡಳಿತವು ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದೆ ಬಾರದೇ ಅಕ್ರಮಕೋರರಿಗೆ ಹಿಂಬದಿಯಿಂದ ಸಾಥ್ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇನ್ನು,ತಾಲೂಕಿನಾದ್ಯಂತ ಹಲವು ದಿನಗಳಿಂದ ಮನೆ ಮಾಡಿರುವ ಮಟ್ಕಾ ಎಂಬ ಜೂಜಾಟದಿಂದ ತಾಲೂಕಿನಲ್ಲಿರುವ ಬಹುತೇಕ ಜನರು ದುಡಿದ ಹಣವೇನ್ನಲ್ಲಾ ಈ ಮಟ್ಕಾ ಜೂಜಾಟಕ್ಕೆ ಸುರಿದು ತಮ್ಮ ಕುಟುಂಬಗಳನ್ನು ಬೀದಿಗೆ ತಂದುಕೊಂಡಿರುವ ಅನೇಕ ಘಟನೆಗಳನ್ನು ಕಂಡುಕೊಂಡಿದ್ದೇವೆ.ಅದರಲ್ಲೂ ರಾಣೆಬೆನ್ನೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮಟ್ಕಾ ಜೂಜಾಟದಿಂದ ಈ ಭಾಗದ ಜನರು ಅನುಭವಿಸುತ್ತಿರುವ ತೊಂದರೆಗಳನ್ನು ಅರಿತ ನಾಯಕನ ನಡುಗೆ ಪತ್ರಿಕೆಯು ನಡೆಯುತ್ತಿರುವ ಜೂಜಾಟದ ಬಗ್ಗೆ ಸುದ್ದಿ ಪ್ರಕಟಿಸುವುದರ ಜೊತೆಗೆ ಸಂಬಂಧಪಟ್ಟ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳ ಗಮನಕ್ಕೆ ತಂದಿಡುವ ಕೆಲಸದ ಮೂಲಕ ಪತ್ರಿಕೆಯ ಜವಾಬ್ದಾರಿಯನ್ನು ತೋರಿತ್ತು.ಆದರೆ ಈ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ನಡೆಯುತ್ತಿರುವ ಈ ಮಟ್ಕಾ ಜೂಜಾಟಕ್ಕೆ ಕಡಿವಾಣ ಹಾಕದೆ ಕರ್ತವ್ಯದಲ್ಲಿ ಭ್ರಷ್ಟತೆ ತೋರುತ್ತಿರುವುದು ಒಂದಡೆ ಕಂಡುಬಂದಿದ್ದರೆ,ಇನ್ನೂ ನಗರ ಪ್ರದೇಶದಲ್ಲಿ ರೀ ಕ್ರೀಯೇಶನ್ ಕ್ಲಬ್ ಗಳ ನೆಪದಲ್ಲಿ ಕ್ಲಬ್ ಗಳ ಮಾಲೀಕರು ನಿರ್ಮಿಸಿಕೊಂಡಿರುವ ಕಟ್ಟಡದಲ್ಲಿ ಹಣವನ್ನು ಪಣಕಿಟ್ಟು ಸದಸ್ಯರನ್ನು ಒರೆತು ಪಡಿಸಿ ಅನ್ಯತಾ ವ್ಯಕ್ತಿಗಳು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವುದು ನಗರ ಪೊಲೀಸ್ ಠಾಣೆಯ ಅಧಿಕಾರಿಗಳ ಭ್ರಷ್ಟತೆಗೆ ಮತ್ತೊಂದಡೆಯಲ್ಲಿ ದೋರಕಿರುವ ಸಾಕ್ಷಿಯಾಗಿದೆ.ಅದು ಏನೇ ಇರಲಿ ತಮ್ಮ ಠಾಣಾ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಜೂಜಾಟಗಳು ನಡೆಯುವುದು ಕಂಡುಬಂದರೆ ಅಂತಹ ಜೂಜಾಟಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶ್ರಮೀಸುವುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ.ಆದರೆ ನಗರ ಪ್ರದೇಶದಲ್ಲಿರುವ ರೀ ಕ್ರಿಯೇಷನ್ ಕ್ಲಬ್ ಗಳ ಕಟ್ಟಡದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಣ್ಣುದರಲ್ಲೇ ಜೂಜಾಟಗಳು ನಡೆಯುತ್ತಿದ್ದರು,ನಡೆಯುತ್ತಿರುವ ಜೂಜಾಟಗಳಿಗೆ ಕಡಿವಾಣ ಹಾಕದೆ ಅದ್ಯಾಕೆ?ನಗರ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರು ಕಂಡರು ಕಾಣದ ಕುರುಡನ ಜಾಣ್ಮೆಗೆ ಮುಂದಾಗಿದ್ದಾರೋ ಗೊತ್ತಿಲ್ಲ.

 

ಈಗಾಗಲೇ ನಗರ ಪ್ರದೇಶದಲ್ಲಿರುವ ರೀ ಕ್ರೀಯೇಶನ್ ಕ್ಲಬ್ ಗಳ ಮಾಲೀಕರು ಕಟ್ಟದಲ್ಲಿ ಅನ್ಯತಾ ವ್ಯಕ್ತಿಗಳನ್ನು ಕೂರಿಸಿಕೊಂಡು ಹಣವನ್ನು ಪಣಕ್ಕಿಟ್ಟು ಜೂಜಾಟವಾಡುತ್ತಿರುವ ಬಗ್ಗೆ ಮಾನ್ಯ ಪೊಲೀಸ್ ಮಾಹಾ ನಿರ್ದೇಶಕರು.ಬೆಂಗಳೂರು ಇವರಿಗೆ ದೂರಿನ ಮೂಲಕ ಗಮನಕ್ಕೆ ತರುವ ಪ್ರಯತ್ನವನ್ನು ಪತ್ರಿಕೆಯು ಮಾಡಿದ್ದು,ದೂರಿನನ್ವಯ ಕ್ಲಬ್ ಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಬಗ್ಗೆ ತನಿಖೆ ಮಾಡಿ ಸೂಕ್ತ ವರದಿ ಸಲ್ಲಿಸುವಂತೆ ತಾಲೂಕಿನ ಪೊಲೀಸ್ ಉಪ ಅಧೀಕ್ಷಕರ ಕಛೇರಿಗೆ ಸೂಚಿಸಿರುವುದು ಸತ್ಯಕ್ಕೆ ಹತ್ತಿರ.ಆದರೆ ತನಿಖೆಗೆ ಮುಂದಾಗಿರುವ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು “ರಾಣೆಬೆನ್ನೂರು ನಗರ ಪ್ರದೇಶದಲ್ಲಿರುವ ಕ್ಲಬ್ ಗಳಲ್ಲಿ ಸದಸ್ಯರನ್ನು ಒರತು ಪಡಿಸಿ ಬೇರೆ ವ್ಯಕ್ತಿಗಳು ಯಾರು ಹಣ ಕಟ್ಟಿ ಜೂಜಾಟವಾಡುತ್ತಿರುವುದು ಕಂಡುಬಂದಿಲ್ಲ ಶಹರ ಠಾಣೆಯಲ್ಲಿ ಎಸ್.ಬಿ ಕರ್ತವ್ಯ ನಿರ್ವಹಿಸುವವರಿಗೆ ಸೂಕ್ತ ಬಾತ್ಮಿ ತಗೆದು ಹಾಗೇನಾದರೂ ಕಂಡುಬಂದಲ್ಲಿ ಅಂತಹವರೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ” ಎನ್ನುವ ಅರ್ಥಹೀನಾ ಹಿಂಬರಹವನ್ನು ನೀಡುವುದರ ಮೂಲಕ ಉನ್ನತ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

 

oppo_2

 

ಇನ್ನೂ ತಾಲೂಕಿನಲ್ಲಿ ನಡೆಯುತ್ತಿರುವ ಮಟ್ಕಾ ಮತ್ತು ರೀ ಕ್ರೀಯೇಶನ್ ಕ್ಲಬ್ ಗಳಲ್ಲಿ ನಡೆಯುವ ಜೂಜಾಟದ ಅಕ್ರಮಗಳು ಒಂದಡೆ ಭಾಗವಾಗಿ ಕಂಡುಬಂದರೆ,ಇನ್ನೊಂದು ಭಾಗವಾಗಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವು ತಾಲೂಕಿನ ಜನರ ನೆಮ್ಮದಿಗೆ ಭಂಗ ತಂದೊಡ್ಡುವ ಕೆಲಸದಲ್ಲಿ ಪ್ರಾಮುಖ್ಯತೆ ಪಡೆದಿರುವುದು ವಿಷದಾಯಕ ಸಂಗತಿಯಾಗಿದೆ.ಈಗಾಗಲೇ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಗಂಗಾಜಲ ಕೆರೆ ಮತ್ತು ದನದ ಮಾರುಕಟ್ಟೆಯ ಆಸುಪಾಸಿನ ಜಾಗಗಳಲ್ಲಿ ಕೆಲವು ವ್ಯಕ್ತಿಗಳು ಫಂಡ್ ಲೆಕ್ಕದಲ್ಲಿ ಬೇರೊಂದಡೆಯಿಂದ ಜನರನ್ನು ಕರೆಹಿಸಿಕೊಂಡು ಮೂರು ಆಟಗಳನ್ನು ಸೋಲದೆ ಗೆದ್ದರೆ ಇಂತಿಷ್ಟೂ ಹಣವನ್ನು ನಮಗೆ ಕೊಡಬೇಕು ಎನ್ನುವ ಮೂಲಕ ಜೂಜಾಟದಲ್ಲಿ ಭಾಗಿಯಾದವರ ಹತ್ತಿರ ವಸೂಲಿಗೆ ಮುಂದಾಗಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿವೆ.ಈ ಒಂದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎನ್ನುವುದು ಪತ್ರಿಕೆಯ ಅನಿಸಿಕೆಯಲ್ಲ.ಇತ್ತೀಚಿಗೆ ಹಲಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ನಂದಿಹಳ್ಳಿ ಗ್ರಾಮದ ಜಾತ್ರೆಯ ಪ್ರಯುಕ್ತ ಸುಮಾರು ಮೂವತ್ತರಿಂದ ನಲವತ್ತು ಲಕ್ಷ ಫಂಡ್ ಲೆಕ್ಕದಲ್ಲಿ ಅಂದರ ಬಾಹರ್ ಇಸ್ಪೀಟ್ ಜೂಜಾಟವನ್ನು ಆಡಿಸಿರುವುದು ಗ್ರಾಮದ ಜನರಿಂದ ಕೇಳಿಬಂದಿರುವ ಮಾತುಗಳಾಗಿವೆ.ಅದು ಬಿಡಿ ಯಾವುದಾದರೂ ಹಬ್ಬಗಳು ಬಂದರೆ ಸಾಕು ಈ ಠಾಣೆಯ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟ ಬೆಳಕಿಗೆ ಬರುವುದೇನು ಹೊಸದಲ್ಲ.ಇನ್ನು,ತಾಲೂಕಿನ ಗಡಿ ಭಾಗದಲ್ಲಿರುವ ಕುಮಾರಪಟ್ಟಣಂ ಠಾಣೆಯ ಸರಹದ್ದಿನಲ್ಲಿಯೂ ಸಹ ಹಾಗೊಮ್ಮೆ,ಈಗೊಮ್ಮೆ ಈ ಇಸ್ಪೀಟ್ ಜೂಜಾಟವು ನಡೆಯುತ್ತಲೆ ಇರುತ್ತದೆ.ಆಟವನ್ನು ಆಡಿಸುವ ಈ ಜೂಜೂಕೊರರು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಆಡಿಸಿದರೆ ಗೊತ್ತಾಗುತ್ತದೆ ಎನ್ನುವುದನ್ನು ತಿಳಿದು,ಆಟವಾಡುವ ಸ್ಥಳಕ್ಕೆ ಯಾರು ಬಾರದಂತೆ ಕಾವಲು ಕಾಯುತ್ತಾ ಆಟವನ್ನು ಆಡಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ವಿಷಯವಾಗಿದೆ.ಈಗಾಗಲೇ ರಾಣೆಬೆನ್ನೂರು ತಾಲೂಕಿನ ಜನರ ಜೀವನಕ್ಕೆ ಕಂಟಕವಾಗಿರುವ ಮಟ್ಕಾ,ಅಂದರ್ ಬಾಹರ್ ಇಸ್ಪೀಟ್ ಜೂಜಾಟಗಳಿಗೆ ಕಡಿವಾಣ ಹಾಕಿ ಜೂಜಾಟಗಳು ನಡೆಯುತ್ತಿರುವುದು ಕಾಣುತ್ತಿದ್ದರು ಕಾಣದ ರೀತಿ ವರ್ತಿಸುತ್ತಿರುವ ಠಾಣೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಜೂಜಾಟಗಳು ಜಿಲ್ಲೆಯಲ್ಲಿ ಬೆಳಕಿಗೆ ಬಾರದಂತೆ ಕಾಪಾಡಿಕೊಳ್ಳಬೇಕು ಎನ್ನುವುದು ಜಿಲ್ಲೆಯ ನೊಂದ ಕುಟುಂಬಗಳ ಕೋರಿಕೆಯಾಗಿದೆ.

 

Spread the love

Leave a Reply

Your email address will not be published. Required fields are marked *