ರಾಣೆಬೆನ್ನೂರು
ಈಗಾಗಲೇ ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂತತಿ ಕಾಪಾಡುವ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯ ಅಡಿಯಲ್ಲಿ ಹತ್ತಾರು ಕಾನೂನುಗಳನ್ನು ರೂಪಿಸಿರುವುದರ ಜೊತೆಗೆ ಅರಣ್ಯದಲ್ಲಿರುವ ಸಂಪತ್ತನ್ನು ಕಾಪಾಡಲು ಮುಂದಾಗಿರುವುದು ಸರ್ಕಾರದ ಹೆಮ್ಮೆಯ ಕೆಲಸ.ಒಂದು ವೇಳೆ ಯಾರಾದರು ಅರಣ್ಯ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಅಥವಾ ಗಿಡ ಮರಗಳಿಗೆ ಹಾನಿ ಉಂಟಾಗುವಂತೆ ನಡೆದುಕೊಂಡಲ್ಲಿ ಅಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆದು.ಅಕ್ರಮದಲ್ಲಿ ಭಾಗಿಯಾಗಿರುವ ವಾಹನಗಳಿಗೆ ಜಾಮೀನು ರಹಿತ ಮೊಕದಮ್ಮೆ ದಾಖಲಿಸಿವುದರ ಮೂಲಕ ವಶಕ್ಕೆ ಪಡೆದಿರುವ ವಾಹನಗಳನ್ನು ಬಿಡುಗಡೆಗೊಳಿಸಲು ಅವಕಾಶ ನೀಡದಂತೆ ಅರಣ್ಯ ಇಲಾಖೆಯ ವಶದಲ್ಲಿಟ್ಟುಕೊಳ್ಳುವುದು ಅರಣ್ಯ ಇಲಾಖೆಯ ಅಡಿಯಲ್ಲಿ ನಿರ್ದೇಶಿಸಿರುವ ಸಾಲುಗಳಲ್ಲಿ ಉಲ್ಲೇಖಗಿರುತ್ತದೆ.ಆದರೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ವ್ಯಾಪ್ತಿಗೆ ಬರುವ ಚಳಗೇರಿ,ಕರೂರು ಗ್ರಾಮಗಳಲ್ಲಿರುವ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುವ ನಿಟ್ಟಿನಲ್ಲಿ ಸೀಡಿ ಮದ್ದುಗಳನ್ನು(ಬಾಂಬ್)ಸಿಡಿಸಿ ಅರಣ್ಯದಲ್ಲಿರುವ ಪ್ರಾಣಿಗಳಿಗೆ ತೊಂದರೆಯನ್ನುಂಟು ಮಾಡುತ್ತಾ ಅರಣ್ಯ ನಾಶಕ್ಕೆ ಮುಂದಾಗಿರುವುದು ಕಂಡುಬರುತ್ತಿದ್ದರು ಅದ್ಯಾಕೋ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ನಾಶಕ್ಕೆ ಮುಂದಾಗಿರುವ ವ್ಯಕ್ತಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಲು ಮುಂದೆ ಬಾರದೇ ಕರ್ತವ್ಯದಲ್ಲಿ ಭ್ರಷ್ಟತೆ ತೋರಲು ಮುಂದಾಗಿರುವುದು ಹತ್ತಾರು ಅನುಮಾನಗಳಿಗೆ ದಾರಿಯಾಗಿದೆ.
ಈ ಹಿಂದಿನ ದಿನಮಾನಗಳಿಂದನೂ ಈ ಪ್ರದೇಶಗಳಲ್ಲಿ ಕಲ್ಲು ಗಣಿಕಾರಿಕೆ ನಡೆಯುತ್ತಲೆ ಬರುತ್ತಿದೆ.ಅಂದಿನ ದಿನಗಳಲ್ಲಿ ಸರ್ಕಾರದ ಪರವಾನಿಗೆ ಮೂಲಕ ಸಕ್ರಮವಾಗಿ ನಡೆಯುತ್ತಿದ್ದ ಈ ಕಲ್ಲು ಗಣಿಗಾರಿಕೆ,ತದನಂತರ ಉಚ್ಚ ನ್ಯಾಯಾಲವು ನೀಡಿದ ತೀರ್ಪಿನ ಆದರಿತವಾಗಿ ಅರಣ್ಯ ಪ್ರದೇಶದಲ್ಲಿರುವ ಕಲ್ಲಿನ ಕ್ವಾರಿಗಳ ಪರವಾನಿಗೆ ರದ್ದುಗೊಳಿಸಿ,ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿರುವ ಹಿನ್ನಲೆಯಲ್ಲಿ ಸಕ್ರಮವಾಗಿರುವ ಕಲ್ಲಿನ ಕ್ವಾರಿಗಳು ಅಕ್ರಮವಾಗಿ ಮಾರ್ಪಟ್ಟಿದ್ದು ಸತ್ಯಕ್ಕೆ ಹತ್ತಿರ.ಆದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕರೂರು ಮತ್ತು ಚಳಗೇರಿ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಸುಮಾರು ಹತ್ತರಿಂದ ಹದಿನೈದು ಜನರು ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುವ ನಿಟ್ಟಿನಲ್ಲಿ ಭೂಮಿಯಲ್ಲಿರುವ ಕಲ್ಲುಗಳನ್ನು ಅಗೆಯಲು ಪೊಲೀಸ್ ಇಲಾಖೆಯ ಯಾವುದೇ ಪರವಾನಿಗೆ ಪಡೆಯದೆ ಸಿಡಿ ಮದ್ದುಗಳನ್ನು ಸಿಡಿಸಿ ಅರಣ್ಯ ಸಂಪತ್ತನ್ನು ನಾಶ ಮಾಡಲು ಮುಂದಾಗಿರುವುದು ಕಾಣುತ್ತಿದ್ದರು ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿರುವ ಈ ಭಾಗದ ಅರಣ್ಯ ಅಧಿಕಾರಿ ರಾಜು ಪೂಜಾರ್ ನ ನಡೆಯಾದರು ಏನು?ಇನ್ನೂ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ಈ ಅಧಿಕಾರಿಗೆ ಅನೇಕ ಬಾರಿ ದೂರವಾಣಿ ಮೂಲಕ ಗಮನಕ್ಕೆ ತರುವುದರ ಜೊತೆಗೆ ನಾಯಕನ ನಡುಗೆ ಪತ್ರಿಕೆ ಸುದ್ದಿಯನ್ನು ಪ್ರಕಟಿಸಿದ್ದರು,ಈ ದಪ್ಪ ಚರ್ಮದ ಅಧಿಕಾರಿ ಅಕ್ರಮಕೋರರ ಕಲ್ಲು ಗಣಿಗಾರಿಕೆಯ ಅಕ್ರಮದಿಂದ ನಾಶವಾಗುತ್ತಿರುವ ಅರಣ್ಯದ ಬಗ್ಗೆ ತಿಳಿದಿದ್ದರು “ಇವಾಗ ಬಂದ್ ಮಾಡುತ್ತೇನೆ ನಾಳೆ ಬಂದ್ ಮಾಡಿಸುತ್ತೇನೆ”ಎನ್ನುವ ಕುಂಟು ನೆಪವನ್ನು ಹೇಳುತ್ತಾ ಅಕ್ರಮದಲ್ಲಿ ಭಾಗಿಯಾಗಿರುವ ವಾಹನಗಳನ್ನು ವಶಕ್ಕೆ ಪಡೆಯದೆ ಹಿಂಬದಿಯಿಂದ ಅರಣ್ಯಕೋರರಿಗೆ ಸಾಥ್ ನೀಡುತ್ತಿರುವುದು ಅಧಿಕಾರಿಯ ಭ್ರಷ್ಟತನಕ್ಕೆ ಸಾಕ್ಷಿಯಾಗಿದೆ.
ಇನ್ನು,ಮಾನ್ಯ ಉಚ್ಚ ನ್ಯಾಯಾಲವು ಈಗಾಗಲೇ ಅರಣ್ಯ ಪ್ರದೇಶದಲ್ಲಿ ಆಳವಾಗಿ ತಗೆದಿರುವ ಕಲ್ಲು ಕ್ವಾರಿಗಳಲ್ಲಿ ಪ್ರಾಣಿಗಳು ಆಯಾ ತಪ್ಪಿ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಹಿನ್ನಲೆಯಿಂದ ವನ್ಯಜೀವಿಗಳ ಸಂತತಿಯ ನಾಶಕ್ಕೆ ಕಾರಣವಾಗಬಹುದು ಎನ್ನುವುದನ್ನು ಅರಿತು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಕಲ್ಲಿನ ಕ್ವಾರಿಗಳ ಪರವಾನಿಗೆ ರದ್ದುಗೊಳಿಸುವುದರ ಮೂಲಕ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಯಾವುದೇ ಪರವಾನಿಗೆ ನೀಡದಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.ಈಗಾಗಲೇ ರಾಣೆಬೆನ್ನೂರು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷ್ಣಮೃಗಗಳ ಸಂತತಿ ಅಡಗಿರುವುದರಿಂದ ಈ ತಾಲೂಕನ್ನು ಕೃಷ್ಣಮೃಗ ಅಭಯಾರಣ್ಯ ಎಂಬ ನಾಮಪಲಕದಲ್ಲಿ ಸೇರ್ಪಡೆ ಮಾಡುವುದರೊಂದಿಗೆ ಈ ವನ್ಯ ಜೀವಿಗಳನ್ನು ನೋಡಲು ಬರುವಂತ ಜನರಿಗೆ ಸಫಾರಿ ವ್ಯವಸ್ಥೆ ಕಲ್ಪಿಸಿರುವುದು ತಾಲೂಕಿನ ಹಿರಿಮೆಗೆ ಕಾರಣವಾಗಿದೆ ಎಂದರೆ ತಪ್ಪಾಗಾಲಾರದು.ಆದರೆ ಈಗಾಗಲೇ ಕರೂರು ಮತ್ತು ಚಳಗೇರಿ ಇನ್ನಿತರೆ ಅರಣ್ಯ ಪ್ರದೇಶದಲ್ಲಿ ಹೆಮ್ಮರವಾಗಿ ಬೆಳೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಕಲ್ಲಿನ ಕ್ವಾರಿಗಳ ಆಳವಾದ ಗುಂಡಿಗಳಲ್ಲಿ ಈ ವನ್ಯಜೀವಿಗಳು ಬಿದ್ದು ಪ್ರಾಣವನ್ನು ಕಳೆದುಕೊಂಡರೆ ಆ ಪ್ರಾಣಿಗಳ ಸಂತತಿ ಉಳಿಸುವರು ಯಾರು?ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟಕ್ಕೆ ಹೊಣೆ ಯಾರು?ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವುದು ಸ್ಥಳೀಯ ಶಾಸಕರಿಗೆ ಅನಿವಾರ್ಯವಾಗಿದೆ.
ಈ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿ ಮಾಡುವ ಹಿತದೃಷ್ಟಿಯಿಂದ ಸ್ಥಳೀಯ ಶಾಸಕರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಕೃಷ್ಣಮೃಗಗಳನ್ನು ಸಮೀಪದಿಂದ ಕಣ್ಣಂಚಿನಲ್ಲಿ ಸವಿಯಲು ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರದ ಖಜಾನೆಯಿಂದ ಸಫಾರಿ ವ್ಯವಸ್ಥೆಗೆ ಹಣ ತರುವುದರಲ್ಲಿ ಶಾಸಕರ ಪಾತ್ರ ಅತ್ಯಮೂಲ್ಯ.ಆದರೆ ಶಾಸಕರ ಶ್ರಮಕ್ಕೆ ಕಿಂಚಿತ್ತು ಬೆಲೆ ಕೊಡದೆ ಅರಣ್ಯ ಪ್ರದೇಶದ ಎಲ್ಲೆಂದರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡುವ ನಿಟ್ಟಿನಲ್ಲಿ ಸಿಡಿ ಮದ್ದುಗಳನ್ನು ಸಿಡಿಸುವುದರ ಮೂಲಕ ವನ್ಯ ಜೀವಿಗಳಿಗೆ ಭಯವನ್ನುಂಟು ಮಾಡುತ್ತಾ,ಅಕ್ರಮ ಗಣಿಗಾರಿಕೆಯಿಂದ ಅರಣ್ಯ ಸಂಪತ್ತಿನ ನಾಶಕ್ಕೆ ಮುಂದಾಗಿರುವುದು ಕಂಡರು ಕಾಣದ ಕುರುಡನಂತೆ ವರ್ತಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಶಾಸಕರ ವಿಳಂಭವೇಕೆ?ಈ ಕೂಡಲೇ ಅರಣ್ಯ ಸಚಿವರು ಈಗಾಗಲೇ ತಾಲೂಕಿನಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅರಣ್ಯ ಪ್ರದೇಶದಲ್ಲಿರುವ ವನ್ಯ ಜೀವಿಗಳ ಸಂತತಿಯ ನಾಶಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡು ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅರಣ್ಯ ನಾಶವಾಗುತ್ತಿರುವುದು ಕಾಣುತ್ತಿದ್ದರು ಕಂಡರು ಕಾಣದ ಕುರುಡನ ರೀತಿ ವರ್ತಿಸುತ್ತಾ ಅರಣ್ಯಕೋರರಿಗೆ ಸಾಥ್ ನೀಡುತ್ತಿರುವ ರಾಜು ಪೂಜಾರ್ ಎನ್ನುವ ಭ್ರಷ್ಟ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಜರುಗಿಸಿ ಈಗಾಗಲೇ ಅರಣ್ಯ ನಾಶಕ್ಕೆ ಮುಂದಾಗಿರುವ ವ್ಯಕ್ತಿಗಳ ಮತ್ತು ವಾಹನಗಳ ಮೇಲೆ ಮೊಕದಮ್ಮೆ ದಾಖಲಿಸುವಂತೆ ಜಿಲ್ಲಾ ವಲಯ ಅರಣ್ಯ ಅಧಿಕಾರಿಗಳಿಗಳಿಗೆ ಸೂಚಿಸಿ ನಾಶವಾಗುತ್ತಿರುವ ಅರಣ್ಯ ಸಂಪತ್ತನ್ನು ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದೆ.