ಹರಿಹರ
ರೈತ ಎಂದರೆ ದೇಶ ಕಾಯುವ ಎರಡನೇ ಸೈನಿಕ ಎನ್ನುವ ರಾಷ್ಟ್ರ ನಮ್ಮದು.ಆದರೆ ಇಂತಹ ರಾಷ್ಟ್ರದಲ್ಲಿ ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎನ್ನುವ ಭರವಸೆಯ ಮೇರೆಗೆ ಜನರ ಸೇವೆಗೆ ಮುಂದಾಗಿರುವ ಅಧಿಕಾರಿಗಳು ರೈತರ ಜೀವನ ಬಂಡಿಯ ಚಕ್ರವನ್ನೇ ಮುರಿಯಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಈಗಾಗಲೇ ಹರಿಹರ ತಾಲೂಕಿನ ಕಂದಾಯ ಇಲಾಖೆಯ ಅನುಮತಿ ಮೇರೆಗೆ ಕೆಲವು ವ್ಯಕ್ತಿಗಳು ರೈತರ ಹೆಸರಿನಲ್ಲಿ ಜಮೀನುಗಳನ್ನು ಸಮತಟ್ಟು ಮಾಡುತ್ತೇವೆ ಎನ್ನುವ ಕಾರಣವನ್ನು ನೀಡಿ,ಕೃಷಿಗೆ ಯೋಗ್ಯವಾಗಿರುವ ಭೂಮಿಯಲ್ಲಿರುವ ಮಣ್ಣನ್ನು ಅಗೆದು ಸಾಗಾಟ ಮಾಡಲು ನಿರೀಕ್ಷಣಾ ಪ್ರಮಾಣ ಪತ್ರವನ್ನು ಪಡೆದಿರುವುದು ವಾಸ್ತವತೆಗೆ ಹತ್ತಿರವಾಗಿದೆ.
ಈಗಾಗಲೇ ಅನೇಕ ವರ್ಷಗಳಿಂದ ತಾಲೂಕಿನ ಗುತ್ತೂರು,ದೀಟೂರು,ಹರಿಹರದಿಂದ ಹೊಸಪೇಟೆ ಮಾರ್ಗವಾಗಿ ಹೋಗುವ ರಸ್ತೆಯ ಪಕ್ಕದ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ನೂರಾರು ಇಟ್ಟಿಗೆ ಭಟ್ಟಿಗಳಲ್ಲಿ ಇಟ್ಟಿಗೆಗಳನ್ನು ತಯಾರಿಸಲು ಮಣ್ಣಿನ ಅವಶ್ಯಕತೆ ಇರುವುದು ಎಲ್ಲರಿಗೂ ಗೋತ್ತಿರುವ ವಿಷಯ.ಆದರೆ ಭಟ್ಟಿಗಳ ಮಾಲೀಕರು ಸಂಬಂಧಪಟ್ಟ ಕೈಗಾರಿಕಾ ಇಲಾಖೆಯ ಅಡಿಯಲ್ಲಿ ಪರವಾನಿಗೆ ಪಡೆಯದೆ ಕೇವಲ ಭಟ್ಟಿಗಳ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿಯ ತಾತ್ಕಾಲಿಕ ಪರವಾನಿಗೆಯನ್ನು ಪಡೆದು ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಒಂದಡೆ ಕಂಡುಬಂದರೆ.ಇನ್ನು,ಈ ಭಟ್ಟಿಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಮನಬಂದಂತೆ ಇಟ್ಟಿಗೆ ಭಟ್ಟಿಗಳಲ್ಲಿ ದುಡಿಸಿಕೊಳ್ಳುತ್ತಿರುವುದು ಕಂಡುಬರುತ್ತಿದ್ದರು ಅದ್ಯಾಕೋ ಸಂಬಂಧಪಟ್ಟ ಕಾರ್ಮಿಕ ಇಲಾಖೆಯ ಅಧಿಕಾರಿಗಳು “ಕಂಡರು ಕಾಣದ ಕುರುಡನ” ರೀತಿ ಈ ಭಟ್ಟಿಗಳ ಮಾಲೀಕರ ಸಹವರ್ತಿಗಳಂತೆ ಅದ್ಯಾಕೆ?ವರ್ತಿಸುತ್ತಿದ್ದಾರೋ ಗೊತ್ತಿಲ್ಲ.ಒಟ್ಟಾರೆ ಈ ಅಧಿಕಾರಿಗಳ ವರ್ತನೆ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೂ,ಕಾರ್ಮಿಕ ಅಧಿಕಾರಿಗಳಿಗಿರುವ ಋಣಾನುಬಂಧಕ್ಕೆ ಸಾಕ್ಷಿ ಎಂಬಂತೆ ತೋರುತ್ತಿದೆ.ಇನ್ನೂ ಗಣಿಗಾರಿಕೆ ಕಾಯ್ದೆಗಳ ಅನ್ವಯ ಪ್ರಕಾರ ಮಣ್ಣು ಅಥವಾ ಗ್ರಾವಲ್ ಗಣಿಗಾರಿಕೆ ಮಾಡಲು ಅನುಮತಿ ಪಡೆದಿರುವ ವ್ಯಕ್ತಿಯು ತನ್ನ ಜಮೀನಿನಲ್ಲಿ ಗಣಿಗಾರಿಕೆ ಮಾಡುವ ಮೂಲಕ ಜಮೀನಿನಲ್ಲಿ ಕೃಷಿಗೆ ಯೋಗ್ಯವಲ್ಲದ ಸ್ಥಳವನ್ನು ಸಮತಟ್ಟು ಮಾಡಿದ ನಂತರದಲ್ಲಿ ಉಳಿದ ಮಣ್ಣನ್ನು ಸಾಗಾಟ ಮಾಡಬೇಕಾದರೆ ಗಣಿ ಇಲಾಖೆಯ ಅಧಿಕಾರಿಗಳು ನಿಗಧಿ ಪಡಿಸಿದ ಮೊತ್ತವನ್ನು ತೇರಿಗೆ ರೂಪದಲ್ಲಿ ಸರ್ಕಾರಕ್ಕೆ ಭರ್ತಿ ಮಾಡಿದ ತದನಂತರದಲ್ಲಿ ಸಾಗಾಟ ಮಾಡಬೇಕು ಎನ್ನುವುದು ಗಣಿ ಇಲಾಖೆಯ ಆದೇಶವಾಗಿರುತ್ತದೆ.
ಹರಿಹರ:ನೆಪಕ್ಕೆ ಜಮೀನುಗಳ ಸಮತಟ್ಟು,ಮಾಡೋದೆಲ್ಲ ಅಕ್ರಮ ಸಾಗಾಟ

ಆದರೆ ಹರಿಹರ ತಾಲೂಕಿನಾದ್ಯಂತ ಜಮೀನುಗಳನ್ನು ಸಮತಟ್ಟು ಮಾಡುವ ಕಾರಣವನ್ನು ನೀಡಿ,ತಾಲೂಕಿನ ಕಂದಾಯ ಇಲಾಖೆಯಿಂದ ನಿರೀಕ್ಷಪಣ ಪತ್ರವನ್ನು ಪಡೆದ ನಂತರದಲ್ಲಿ ಗಣಿಗಾರಿಕೆಯ ಮಾಡಲು ಜಮೀನಿನ ಮಾಲೀಕರ ಹೆಸರಿನಲ್ಲಿ ಪರವಾನಿಗೆ ಪಡೆದಿರುವ ಅನ್ಯತ ವ್ಯಕ್ತಿಗಳು,ಪರವಾನಿಗೆದಾರರ ಜಮೀನುಗಳಲ್ಲಿ ಯಾವುದೇ ರೀತಿಯ ಸಮತಟ್ಟು ಮಾಡದೆ ಅಧಿಕ ಮೊತ್ತಕ್ಕೆ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೆ ಮಾರಾಟ ಮಾಡುವುದನ್ನೇ ಒಂದು ಬ್ಯೂಜಿನೆಸ್ ಮಾಡಿಕೊಂಡು ಕೃಷಿಗೆ ಯೋಗ್ಯವಾದ ಭೂಮಿಯಲ್ಲಿರುವ ಫಲವತ್ತತೆಯ ಮಣ್ಣನ್ನು ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡುತ್ತಿರುವುದು ಕಣ್ಣುದುರಲ್ಲೇ ಕಾಣುತ್ತಿದ್ದರು ತಾಲೂಕಿನ ಕಂದಾಯ ಅಧಿಕಾರಿಗಳು ಜಮೀನುಗಳಲ್ಲಿ ಸಮತಟ್ಟು ನೆಪವನ್ನು ಹೇಳಿ ರಾಜಾರೋಷವಾಗಿ ಇಟ್ಟಿಗೆ ಭಟ್ಟಿಗಳಿಗೆ ಸಾಗಾಟವಾಗುತ್ತಿರುವ ಮಣ್ಣಿಗೆ ಅದ್ಯಾಕೆ?ಕಡಿವಾಣ ಹಾಕಲು ವಿಳಂಭತೆ ತೋರುತಿದ್ದಾರೋ ಗೊತ್ತಿಲ್ಲ!ಇನ್ನು,ಗಣಿಗಾರಿಕೆ ಮಾಡಲು ಅನುಮತಿ ಪಡೆದಯುವ ವ್ಯಕ್ತಿಗೆ ಗಣಿಗಾರಿಕೆ ಸಮಯದಲ್ಲಿ ಮೂರು ಅಡಿ ಆಳಕ್ಕಿಂತ ಹೆಚ್ಚಿನ ಆಳದಲ್ಲಿ ಗಣಿಗಾರಿಕೆ ಮಾಡಬಾರದು ಎನ್ನುವ ಸಾಲುಗಳನ್ನ ನೀಡಿರುವ ಪರವಾನಿಗೆ ಪ್ರತಿಯಲ್ಲಿ ಉಲ್ಲೇಖಿಸಿರುತ್ತಾರೆ.ಒಂದು ವೇಳೆ ಗಣಿ ಇಲಾಖೆಯು ನೀಡಿರುವ ಷರತ್ತುಗಳನ್ನು ಉಲ್ಲಂಘಿಸಿ ಗಣಿಗಾರಿಕೆಗೆ ಮುಂದಾದ ಗುತ್ತಿಗೆದಾರನ ಪರವಾನಿಗೆಯನ್ನು ರದ್ದುಗೊಳಿಸುವುದರ ಜೊತೆಗೆ ಮಾಡಿದ ಅಕ್ರಮಕ್ಕೆ ಅನುಗೂಣವಾಗಿ ದಂಡವನ್ನು ವಿಧಿಸುವುದು ಗಣಿ ಇಲಾಖೆಯ ಕರ್ತವ್ಯವಾಗಿರುತ್ತದೆ.ಆದರೆ ತಾಲೂಕಿನಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದಿರುವ ಹದಿನೈದು ಜನರು ಪರವಾನಿಗೆ ಪ್ರತಿಯಲ್ಲಿ ಉಲ್ಲೇಖಿಸಿರುವ ಆದೇಶದ ಸಾಲುಗಳನ್ನು ಗಾಳಿಗೆ ತೂರಿ ಮನಬಂದಂತೆ ಅಳದಲ್ಲಿರುವ ಮಣ್ಣನ್ನು ಅಗೆಯುವುದರ ಮೂಲಕ ಅಕ್ರಮ ಗಣಿಗಾರಿಕೆಯಲ್ಲಿ ತೋಡಗಿರುವುದು ಕಂಡುಬಂದಿದ್ದರು,ಈ ಗಣಿ ಅಧಿಕಾರಿಗಳು ತಪ್ಪಿಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳದೆ ಮತ್ತೆ ಮಣ್ಣನ್ನು ಅಗೆದು ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡಲು ಅದ್ಯಾಕೆ? ಅನುಮತಿ ನೀಡುತ್ತಿರುವರೋ ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.
ಇನ್ನು,ಜಮೀನುಗಳ ಸಮತಟ್ಟು ಎನ್ನುವ ಕಾರಣವನ್ನಿಟ್ಟುಕೊಂಡು ಕೃಷಿಗೆ ಯೋಗ್ಯವಾದ ಜಮೀನುಗಳಲ್ಲಿ ಗಣಿಗಾರಿಕೆ ಮಾಡಲು ಅನುಮತಿ ಪಡೆಯುವ ವ್ಯಕ್ತಿಗಳಿಗೆ ಈ ಭೂಮಿಯಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡಬಹುದು ಎನ್ನುವ ನಿರೀಕ್ಷಣಾ ಪತ್ರವನ್ನು ನೀಡುವ ಕಂದಾಯ ಇಲಾಖೆಯ ಅಧಿಕಾರಿಗಳು ಆದೇಷ್ಟರ?ಮಟ್ಟಿಗೆ ಜಮೀನಿನ ವೀಕ್ಷಣೆ ಮಾಡಿ.ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ನಿರೀಕ್ಷಣಾ ಪತ್ರವನ್ನು ಮಂಜೂರು ಮಾಡಿದ್ದಾರೋ ಗೊತ್ತಿಲ್ಲ.ಒಟ್ಟಾರೆ ಸಮತಟ್ಟು ಎನ್ನುವ ನೆಪವನ್ನು ನೀಡಿ ಯಾವುದೇ ಸಮತಟ್ಟು ಮಾಡದೆ ರಾಜಾರೋಷವಾಗಿ ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡುತ್ತಿರುವ ಅಕ್ರಮದಲ್ಲಿ ಕಂದಾಯ ಇಲಾಖೆಯ ಅತ್ಯಮೂಲ್ಯವಾಗಿದೆ ಎನ್ನುವುದು ಸತ್ಯಕ್ಕೆ ಕನ್ನಡಿಯಾಗಿದೆ.ಈ ಕೂಡಲೇ ಕಂದಾಯ ಈಗಾಗಲೇ ತಾಲೂಕಿನಲ್ಲಿ ಅಕ್ರಮ ಮಣ್ಣು ಸಾಗಾಟದ ದೃಶ್ಯಗಳು ಕಂಡರು ಕಾಣದ ಕುರುಡನ ರೀತಿ ವರ್ತಿಸುತ್ತಿರುವ ತಾಲೂಕು ದಂಡಾಧಿಕಾರಿಗೆ,ಮತ್ತೊಮ್ಮೆ ಕಂದಾಯ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕೃಷಿಗೆ ಯೋಗ್ಯವಾದ ಅಥವಾ ಯೋಗ್ಯವಲ್ಲದ ಭೂಮಿಗಳ ಬಗ್ಗೆ ತಿಳಿದುಕೊಳ್ಳುವ ಪರಿಜ್ಞಾನದ ಪಾಠವನ್ನು ಮಾಡಿ.ತಾಲೂಕಿನಲ್ಲಿ ಪಾಮೆನಹಳ್ಳಿ,ಸಾರಥಿ,ಹೊಟ್ಟೆಗಾನಹಳ್ಳಿ,ರಾಜನಹಳ್ಳಿ ಭಾಗಗಳಲ್ಲಿ ನಡೆದಿರುವ ಅಕ್ರಮ ಮಣ್ಣು ಗಣಿಗಾರಿಕೆಯ ಬಗ್ಗೆ ಸೂಕ್ತ ತನಿಖೆ ನಡೆಸಿ.ಕೃಷಿಗೆ ಯೋಗ್ಯವಾದ ಜಮೀನಿನ ಮಣ್ಣನ್ನು ಅಗೆದು ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡಲು ಪರವಾನಿಗೆ ಮೂಲಕ ಸಾಥ್ ನೀಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಪತ್ರಿಕೆಯ ಆಶಯವಾಗಿದೆ.