ನಮ್ಮ ದೇಶದಲ್ಲಿರುವ ಬಹುತೇಕ ರಾಜಕಾರಣಿಗಳು ತಮ್ಮ ರಾಜಕೀಯ ಕುತಂತ್ರಗಾರಿಕೆಯಿಂದ ಪಕ್ಷಗಳ ವರ್ಚಸ್ ಮತ್ತು ರಾಜಕೀಯ ಭವಿಷ್ಯಕ್ಕಾಗಿ ದೇಶದ ಜನರಿಗೆ ಇನ್ನಿಲ್ಲದ ಆಮೇಶಗಳನ್ನು ನೀಡುತ್ತಾ,ಅಧಿಕಾರದ ಗದ್ದುಗೆ ಏರುವುದು ನಮ್ಮ ರಾಜಕೀಯ ವ್ಯವಸ್ಥೆಯ ಹೀನಾ ಆಡಳಿತಕ್ಕೆ ಸಾಕ್ಷಿಯಾಗಿದೆ.ಇಂತಹದೇ ದಾಟಿಯಲ್ಲಿ ಈಗಿನ ರಾಜ್ಯ ಸರ್ಕಾರದ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಪಕ್ಷವು ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ಐದು ಭಾಗ್ಯಗಳನ್ನು ಜಾರಿಗೊಳಿಸುವ ಆಶ್ವಾಸನೆಗಳ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿತ್ತು.ಆದರೆ ರಾಜ್ಯದ ಜನಾಶ್ರೀವಾದದಿಂದ ಅದ್ಯಾಗೋ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತದೊಂದಿಗೆ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷದ ರಾಜಕೀಯ ದುರಿಣರು ಮಂತ್ರಿಮಂಡಲವನ್ನು ರಚನೆ ಮಾಡಿಕೊಳ್ಳುವುದರ ಮೂಲಕ ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದು ಸತ್ಯಕ್ಕೆ ಹತ್ತಿರ.ಇನ್ನು,ಅಧಿಕಾರದ ದುರಾಸೆಯಿಂದ ಚುನಾವಣೆಯ ಪೂರ್ವದಲ್ಲಿ ಈ ಪಕ್ಷವು,ರಾಜ್ಯದಲ್ಲಿ ತಮ್ಮ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್ ಹೊಂದಿದ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ನೀಡುತ್ತೇವೆ,ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ನೀಡುತ್ತಿರುವ ಐದು ಕೆಜಿ ಅಕ್ಕಿ ಬದಲಾಗಿ ಏಳು ಕೆಜಿ ಅಕ್ಕಿ ನೀಡುತ್ತೇವೆ,ಪ್ರತಿ ಮನೆಗೆ ಎರಡುನೂರು ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ,ರಾಜ್ಯದ ಪ್ರತಿ ಮಹಿಳೆಯು ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಹಾಗೂ ಪದವಿ ಮುಗಿಸಿ ಕೆಲಸವಿಲ್ಲದೆ ನಿರುದ್ಯೋಗಕ್ಕೆ ತುತ್ತಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡುತ್ತೇವೆ ಎನ್ನುವುದು ನೀಡಿರುವ ಭರವಸೆಗಳಾಗಿರುತ್ತವೆ.
ಆದರೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಈ ಕಾಂಗ್ರೆಸ್ ಸರ್ಕಾರವು ಒಂದಾಲ್ಲ ಒಂದು ರೀತಿಯಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಗುರಿಯಾಗುತ್ತಿರುವುದು ಮಾತ್ರ ತಪ್ಪುತ್ತಿಲ್ಲ.ಈ ಹಿಂದಿನ ಅವಧಿಯಲ್ಲಿ ರಾಜ್ಯ ಸರ್ಕಾರದ ಗದ್ದುಗೆಯಲ್ಲಿದ್ದ ಬಿಜೆಪಿ ಸರ್ಕಾರವು ಅವಗಾಗಲೇ ನ್ಯಾಯ ಬೆಲೆ ಅಂಗಡಿಗಳಲ್ಲಿ ರಾಜ್ಯದ ಜನರಿಗೆ ಸದಸ್ಯನಿಗೆ ತಲಾ ಐದು ಕೆಜಿ ಅಕ್ಕಿ,ಎರಡು ಕೆಜಿ ಗೋದಿ ನೀಡುತ್ತಿತ್ತು.ಆದರೆ ಈ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷವು ನೀಡುತ್ತಿದ್ದ ಐದು ಕೆಜಿ ಬದಲಾಗಿ,ಏಳು ಕೆಜಿ ಅಕ್ಕಿಯನ್ನು ನೀಡುತ್ತೇವೆ ಎನ್ನುವ ಬಣ್ಣದ ಮಾತುಗಳಿಂದ ರಾಜ್ಯದ ಜನರ ಮನಸ್ಸನ್ನು ಪುಸಲಾಹಿಸಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಜನರ ಅನುಕಂಪದ ಮೇರೆಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿರುವ ಅನ್ನಭಾಗ್ಯದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ವಿಫಲತೆಗೋಳಗಾಗಿದ್ದು ಸತ್ಯಕ್ಕೆ ಹತ್ತಿರ.ಇನ್ನು,ಅನ್ನಭಾಗ್ಯದ ಯೋಜನೆಯಲ್ಲಿ ವಿಫಲತೆಗೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರವು,ವಿರೋಧ ಪಕ್ಷಗಳ ಟಿಕೆಗಳಿಂದ ಋಣಮುಕ್ತವಾಗುವ ತಂತ್ರಗಾರಿಕೆಯಿಂದ,ಕೇಂದ್ರ ಸರ್ಕಾರ ನಮಗೆ ಹೆಚ್ಚಿನ ಅಕ್ಕಿ ನೀಡಲು ಮಲತಾಯಿ ದೋರಣೆ ತೋರುತ್ತಿದೆ ಆದ್ದರಿಂದ ಹೆಚ್ಚಿನ ಅಕ್ಕಿ ನೀಡುವ ಭರವಸೆಯನ್ನು ಈಡೇರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ಮನೆಯ ಪ್ರತಿ ಸದಸ್ಯನಿಗೆ ತಲಾ ಐದು ಕೆಜಿ ಅಕ್ಕಿ ನೀಡಿ,ಉಳಿದ ಎರಡು ಕೆಜಿ ಅಕ್ಕಿಯ ಬದಲು ಅಕ್ಕಿಗೆ ತಗಲುವ ಹಣವನ್ನು ನೇರವಾಗಿ ಕಾರ್ಡುದಾರರ ಖಾತೆಗೆ ನೀಡುತ್ತೇವೆ ಎನ್ನುವ ಮತ್ತೊಂದು ಭರವಸೆಯ ಮೇರೆಗೆ ವಿರೋಧ ಪಕ್ಷದ ಟೀಕೆಗಳಿಗೆ ವಿರಾಮ ಹೇಳಿದ್ದಂತು ಸತ್ಯ.ಆದರೆ ಇದೀಗ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುತ್ತಿದ್ದ ಐದು ಕೆಜಿ ಅಕ್ಕಿಯಲ್ಲಿ ಕಡಿತಗೋಳಿಸಿ,ತಲಾ ಮೂರು ಕೆಜಿ ಅಕ್ಕಿ ನೀಡುವ ಪರಿಸ್ಥಿತಿಗೆ ನ್ಯಾಯ ಬೆಲೆ ಅಂಗಡಿಗಳನ್ನು ಬಂದೊದಗುವಂತೆ,ಮಾಡುವುದರ ಬೆನ್ನಲ್ಲೇ ಅಕ್ಕಿಯ ಬದಲು ಕಾರ್ಡುದಾರರ ಖಾತೆಗೆ ಜಮವಾಗುತ್ತಿದ್ದ ಮೊತ್ತಕ್ಕೆ ಕಡಿವಾಣ ಹಾಕಿರುವುದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು,ಈಗಿನ ಸರ್ಕಾರವು ರಾಜ್ಯದಲ್ಲಿರುವ ಪ್ರತಿಯೊಬ್ಬ ಮಹಿಳೆಯು ಸದೃಡವಾಗಬೇಕೆನ್ನುವ ಉದ್ದೇಶವೋ ಅಥವಾ ಮಹಿಳೆಯರ ಮತ ಕಬಳಿಸುವ ಉದ್ದೇಶವೋ ಗೊತ್ತಿಲ್ಲ,ಚುನಾವಣಾ ಪೂರ್ವದಲ್ಲಿ ಶಕ್ತಿ ಯೋಜನೆ ಎಂಬ ಯೋಜನೆಯನ್ನು ಜಾರಿಗೋಳಿಸಿರುತ್ತಾರೆ. ಈ ಯೋಜನೆಯ ಮೂಲ ಉದ್ದೇಶ ಬಿಪಿಎಲ್ ಕಾರ್ಡು ಹೊಂದಿದ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ಹಣವನ್ನು ನೀಡುವುದು.ಈಗಾಗಲೇ ಈ ಯೋಜನೆಯಿಂದ ರಾಜ್ಯದಲ್ಲಿರುವ ಅದೆಷ್ಟೋ ಮಹಿಳೆಯರು ತಮ್ಮ ಬದುಕನ್ನು ಹಸನಾಗಿಸಿಕೊಳ್ಳುವುದರ ಮೂಲಕ ಸಾಧನೆಯ ಶಿಖರದತ್ತ ಮುಖ ಮಾಡಿರುವುದು ಸಂತೋಷದಾಯಕ.ಆದರೆ ಈ ಕಾಂಗ್ರೆಸ್ ಸರ್ಕಾರವು ಅಧಿಕಾರದ ಹೊಸತರಹದಲ್ಲಿ ಶಕ್ತಿ ಯೋಜನೆಗೆ ಅರ್ಹರಿರುವ ಪಲಾನುಭವಿಗಳಿಗೆ ಪ್ರತಿ ತಿಂಗಳಿಗೊಮ್ಮೆ ಚಾಚುತಪ್ಪದೆ ಪಲಾನುಭವಿಗಳ ಖಾತೆಗೆ ಎರಡು ಸಾವಿರ ಹಣವನ್ನು ನೀಡುತ್ತಿತ್ತು.ಇದೀಗ ಅದ್ಯಾಕೋ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ವಿಳಂಭ ದೋರಣೆ ತೋರುತ್ತಾ,ಖಜಾನೆಯಲ್ಲಿ ಹಣದ ಕೋರತೆಯಿರುವ ಕುಂಟು ನೆಪವನ್ನು ಹೇಳುತ್ತಾ ರಾಜಕಾರಣದ ಅವಧಿಯನ್ನು ಮುನ್ನೆಡಿಸಿಕೊಳ್ಳುತ್ತಾ ಹೋಗುತ್ತಿದೆ.ಸರ್ಕಾರದ ಈ ವರ್ತನೆಯು ಕೆಲವರಿಗೆ ಆಗಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆದು ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿದೆ ಎನ್ನುವುದನ್ನು ತೋರಲು ಹೊಸತರದಲ್ಲಿ ಮಹಿಳೆಯ ಖಾತೆಗೆ ಚಾಚು ತಪ್ಪದೆ ಎರಡು ಸಾವಿರ ಹಾಕುತಿತ್ತು ಇದೀಗ ಲೋಕಸಭಾ ಚುನಾವಣೆಯಲ್ಲಿ ಹಾಕಿದ ಲೆಕ್ಕಾಚಾರ ತಪ್ಪಾಗಿರುವ ಹಿನ್ನಲೆಯಿಂದ ಖಾತೆಗೆ ಹಣವನ್ನು ಹಾಕಲು ವಿಳಂಭ ನೀತಿ ತೋರುತ್ತಿದೆ ಎಂದು ವ್ಯಕ್ತಪಡುತ್ತಿದ್ದಾರೆ.ಅದು ಏನೇ ಇರಲಿ ರಾಜ್ಯದ ಜನರ ಮತಗಳನ್ನು ಕಬಳಿಸುವ ಹುನ್ನಾರದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರವು ತನ್ನ ಅವಧಿ ಪೂರ್ಣಗೊಳ್ಳುವವರೆಗೂ ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಾ ಉತ್ತಮ ಆಡಳಿತವನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.