ದಾವಣಗೆರೆ
ರಾಜ್ಯದ ಜನರು ಹಸಿವಿನಿಂದ ನರಳಬಾರದು ಎನ್ನುವ ಉದ್ದೇಶದಿಂದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿನ ಮುಖ್ಯಮಂತ್ರಿ ಅವಧಿಯಲ್ಲಿಯೇ ಅನ್ನಭಾಗ್ಯ ಎಂಬ ಮಹತ್ವ ಯೋಜನೆಯ ಮೂಲಕ ರಾಜ್ಯದ ಜನರ ಹಸಿವನ್ನು ನೀಗಿಸುವ ಕೆಲಸಕ್ಕೆ ಮುಂದಾಗಿದ್ದರು.ಆದರೆ ಉತ್ತಮ ಆಡಳಿತದ ಜೊತೆಗೆ ಜನರಿಗೆ ಸಿಗಬೇಕಾದ ಸರ್ಕಾರಿ ಸವಲತ್ತುಗಳನ್ನು ಪೂರೈಹಿಸುವ ಜವಾಬ್ದಾರಿ ಹೊತ್ತ ಈ ಸರ್ಕಾರಿ ಅಧಿಕಾರಿಗಳು,ರಾಜ್ಯದಲ್ಲಿ ಜಾರಿಗೋಳಿಸಿರುವ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿರುವ ಪಡಿತರ ಅಕ್ಕಿಯನ್ನು ಸಮರ್ಪಕ ರೀತಿಯಲ್ಲಿ ದೋರಕಿಸುವ ಸೇವೆಗೆ ಮುಂದಾಗದೆ ಕದೀಮರ ಕಳ್ಳ ಸಾಗಾಣಿಕೆ ಸಾಥ್ ನೀಡುತ್ತಿದ್ದಾರೆ ಎನ್ನುವ ಮಾತುಗಳು ರಾಜ್ಯದಲ್ಲೆಡೆ ಚರ್ಚೆಗೆ ಗ್ರಾಸವಾದ ಮಾತುಗಳಾಗಿವೆ.ಇದೀಗ ಓದುಗರ ಗಮನಕ್ಕೆ ತರ ಬಯಸಲು ಹೋರಟಿರುವ ಸುದ್ದಿಯ ಜಾಲವು ಸಹ ಇಂತಹದೊಂದು ಪಡಿತರ ಅಕ್ರಮ ಅಕ್ಕಿ ಸಾಗಾಟಕ್ಕೆ ಕಡಿವಾಣ ಹಾಕದೆ ಮುಖ ಪ್ರೇಕ್ಷಕನಂತೆ ವರ್ತಿಸುತ್ತಿರುವ ಜಿಲ್ಲಾಡಳಿತದ ಬಗ್ಗೆ.ಈಗಾಗಲೇ ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ ಇದೀಗ ಬಡವರಿಗೆ ನೀಡುತ್ತಿರುವ ಪಡಿತರ ಅಕ್ಕಿಯನ್ನು ಅಕ್ರಮ ದಂಧೆಕೊರರು ಸಾಗಾಟ ಮಾಡಲು ಮುಂದಾಗಿರುವುದು ಜಿಲ್ಲೆಯಲ್ಲೆಡೇ ಕಂಡುಬರುತ್ತಿರುವ ದೃಶ್ಯಗಳಾಗಿವೆ.
ದಾವಣಗೆರೆಯ ದಕ್ಷಿಣ ಮತ್ತು ಉತ್ತರ ಭಾಗದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಕರೂರು,ಯರಗುಂಟೆ,ಅಶೋಕನಗರ,ನಿಟ್ಟುವಳ್ಳಿ,ವಿನೋಭನಗರ ಇನ್ನೂ ಮುಂತಾದ ಪ್ರದೇಶಗಳಲ್ಲಿ ಹಗಲು ವೇಳೆಯಲ್ಲಿಯೇ ಯಾವೊಬ್ಬ ಅಧಿಕಾರಿಗೂ ಭಯ ಪಡದೇ ರಾಜಾರೋಷವಾಗಿ ಟಾಟಾ ಎಸ್,ಆಟೋ ಮತ್ತು ಮೋಟಾರು ಬೈಕುಗಳಲ್ಲಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಅಕ್ರಮಕೋರರ ಬಯಲಾಟದ ದೃಶ್ಯಗಳು ಕಣ್ಣೆದುರಲ್ಲೇ ಕಾಣುತಿದ್ದರು ಕಂಡರು ಕಾಣದ ಕುರುಡನಂತೆ ವರ್ತಿಸುತ್ತಿರುವ ಜಿಲ್ಲಾಡಳಿತದ ನಡೆಯಾದರೂ ಏನು?ಈಗಾಗಲೇ ದಾವಣಗೆರೆ ನಗರದ ವ್ಯಾಪ್ತಿಗೆ ಬರುವ ಏರಿಯಾಗಳಲ್ಲಿ ಜಮೀರ್ ಮತ್ತು ಕುಮಾರ್,ಬಾತಿ ಭಾಗದಲ್ಲಿ ಉಮ್ಮಣ್ಣ,ಹರಿಹರ ತಾಲೂಕಿನಾದ್ಯಂತ ಬರುವ ಗ್ರಾಮಗಳ ಮತ್ತು ನಗರ ಪ್ರದೇಶಗಳಲ್ಲಿ ತಾಜ್,ಪಯಜ್,ಅನ್ಸಾರ್,ಯೂನಿಸ್ ಎನ್ನುವ ವ್ಯಕ್ತಿಗಳು ಇಡಿ ಜಿಲ್ಲೆಯನ್ನೇ ಒಂದೋದು ಭಾಗವನ್ನಾಗಿ ಮಾಡಿಕೊಂಡು ಜನರ ಮನೆ ಬಾಗಿಲಿಗೆ ಹೋಗಿ ಜನರಿಗೆ ಹಣದ ಆಮೇಶವನ್ನು ನೀಡಿ ಒಂದು ಕೆಜಿಗೆ ಇಪ್ಪತ್ತು ರೂಪಾಯಿಗಳಂತೆ ಖರೀದಿಸುತ್ತಿರುವುದು ಒಂದಡೆಯಾದರೆ,ಇನ್ನು ಜಿಲ್ಲೆಯ ವ್ಯಾಪ್ತಿಗೆ ಬರುವ ನ್ಯಾಯ ಬೆಲೆ ಅಂಗಡಿಗಳಲ್ಲಿ ನೇರವಾಗಿ ಖರೀದಿಸುವುದು ಮತ್ತೊಂದಡೆಯ ಅಕ್ರಮವಾಗಿದೆ.ಬಡವರ ಹಸಿವನ್ನು ನೀಗಿಸಲು ಜಾರಿಗೊಳಿಸಿರುವ ಅನ್ನಭಾಗ್ಯದ ಯೋಜನೆಯ ಅಕ್ಕಿಯನ್ನು ಜಿಲ್ಲೆಯಲ್ಲಿ ಇಷ್ಟೊಂದು ರಾಜಾರೋಷವಾಗಿ ಹಗಲು ವೇಳೆಯಲ್ಲಿಯೇ ಸಾಗಾಟ ಮಾಡುತ್ತಿರುವುದು ಕಣ್ಣೆದುರಲ್ಲೇ ಕಾಣುತಿದ್ದರು ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಸಂಬಂಧಪಟ್ಟ ಪೊಲೀಸ್ ಮತ್ತು ಆಹಾರ ಇಲಾಖೆ ಅಧಿಕಾರಿಗಳ ಮೌನದ ಹಿಂದಿನ ಮಾರ್ಮವಾದರೂ ಏನು?ಇನ್ನು,ದಾವಣಗೆರೆ ಜಿಲ್ಲಾದ್ಯಂತ ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸಲು ಮುಂದಾಗಿರುವ ಜಮೀರ್ ಎನ್ನುವ ವ್ಯಕ್ತಿಯು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಣಿ ಇಲಾಖೆಯ ಸಚಿವರು ಆದಂತ ಎಸ್.ಎಸ್.ಮಲ್ಲಿಕಾರ್ಜುನ್ ಹೆಸರನ್ನು ಬಳಸಿಕೊಂಡು ದಂಧೆಯನ್ನು ಮುನ್ನೆಡಿಸಿಕೊಂಡು ಹೋಗುತ್ತಿದ್ದಾನೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿವೆ.ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ಮಾತುಗಳಲ್ಲಿ ಆದೇಷ್ಟರ ಮಟ್ಟಿಗೆ ಸತ್ಯ ಅಡಗಿದೆ ಎನ್ನುವುದು ಮುಂದಿನ ಸಂಚಿಕೆಯಲ್ಲಿ ನೋಡೋಣ.ಆದರೆ ತಮ್ಮ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯು ಇದೀಗ ತಮ್ಮ ತವರು ಜಿಲ್ಲೆಯಲ್ಲಿ ದುರ್ಬಳಕೆಯಾಗುತ್ತಿರುವುದು ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗುತ್ತಿದೆ ಎನ್ನುವುದು ಜಿಲ್ಲೆಯ ಬುದ್ದಿ ಜೀವಿಗಳ ಮಾತಾಗಿದೆ.
ಈಗಿನ ಸರ್ಕಾರದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಘೋಷಿಸಿರುವ ಐದು ಭರವಸೆಗಳಲ್ಲಿ ಪ್ರಮುಖವಾದದ್ದು ಹೆಚ್ಚಿನ ಅಕ್ಕಿ ವಿತರಣೆ ಮಾಡುವುದು.ಆದರೆ ವಿರೋಧ ಪಕ್ಷದ ರಾಜಕೀಯ ಕುತಂತ್ರತೆಯಿಂದ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದೆ ವಿರೋಧ ಪಕ್ಷಗಳ ಟೀಕೆಗಳಿಗೆ ಗುರಿಯಾಗಿದ್ದೇವೆ ಎನ್ನುವ ಸಮಜಾಸಿ ಉತ್ತರವನ್ನು ನೀಡುತ್ತಾ ಎರಡೂವರೆ ವರ್ಷ ಅವಧಿ ಮುಗಿಸಿದ ಕಾಂಗ್ರೆಸ್ ಪಕ್ಷವು ಇದೀಗ ವಿರೋಧ ಪಕ್ಷಗಳ ಟಿಕೆಗಳಿಂದ ಋಣಮುಕ್ತವಾಗಲು ಪಡಿತರ ಚಿಟಿ ಹೊಂದಿದ ಮನೆಯ ಪ್ರತಿ ಸದಸ್ಯರಿಗೆ ತಲಾ ಹೈದಿನೈದು ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ ಎಂದು ನೀಡಿರುವ ಹೇಳಿಕೆಯು ಬಡ ಜನರ ಸಂತೋಷಕ್ಕೆ ಕಾರಣವಾಗಿದೆ.ಆದರೆ ಸರ್ಕಾರವು ಬಡವರಿಗೆ ನೀಡುತ್ತಿರುವ ಅನ್ನಭಾಗ್ಯದ ಅಕ್ಕಿಯು ಅಧಿಕಾರಿಗಳ ಭ್ರಷ್ಟತೆಯಿಂದ ಸಮರ್ಪಕ ರೀತಿಯಲ್ಲಿ ಜನರಿಗೆ ಪೂರೈಕೆಯಾಗದಿರುವುದು ಸರ್ಕಾರದ ಆಡಳಿತದ ದೌರ್ಬಲ್ಯಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಸತ್ಯವಾಗಿದೆ.
ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು,ಈಗಾಗಲೇ ಸಾರ್ವಜನಿಕ ವಲಯದಲ್ಲಿ ತಮ್ಮ ಹೆಸರು ದುರ್ಬಳಕೆಯಾಗುತ್ತಿರುವುದನ್ನು ಮನಗಂಡು,ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟಕ್ಕೆ ಮುಂದಾಗಿರುವ ಅಕ್ರಮ ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸುವುದರ ಮೂಲಕ ಈಗಿನ ಮುಖ್ಯಮಂತ್ರಿಗಳ ಕನಸಿನ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಲ್ಲಿ ಸಿಗುವ ಅಕ್ಕಿಯನ್ನು ಸಮರ್ಪಕ ರೀತಿಯಲ್ಲಿ ಜಿಲ್ಲೆಯ ಜನರಿಗೆ ದೋರಕುವಂತೆ ಮಾಡುವುದು ತಮ್ಮ ಜವಾಬ್ದಾರಿಯಾಗಿದೆ.