ಅಕ್ರಮ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಹರನಗಿರಿ ಗ್ರಾಮ ಪಂಚಾಯತಿ

 

 

ರಾಣೆಬೆನ್ನೂರು

ರಾಜ್ಯದ ಜನರಿಗೆ ಉತ್ತಮ ರೀತಿಯ ಆಡಳಿತ ನೀಡುವ ನಿಟ್ಟಿನಲ್ಲಿ ನಮ್ಮ ರಾಜಕಾರಣಿಗಳು,ಜನರ ಸೇವೆ ಮಾಡಲು ಸರ್ಕಾರದ ಅಧೀನದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಜನಸಾಮಾನ್ಯರು ಕಟ್ಟುವ ತೆರಿಗೆ ಹಣದಲ್ಲಿ  ಅಧಿಕಾರಿಗಳಿಗೆ ಸಂಭಳವನ್ನು ನೀಡುತ್ತಾ ಸರ್ಕಾರವನ್ನು ಮುನ್ನೆಡಿಸಿಕೊಂಡು ಹೋಗುತ್ತಿರುವುದು ನಮ್ಮ ರಾಜಕೀಯದ ವ್ಯವಸ್ಥೆಯಾಗಿದೆ.ಆದರೆ ಜನಸಾಮಾನ್ಯರು ಕಟ್ಟುವ ತೇರಿಗೆಯ ಹಣಕ್ಕೆ ಋಣಿಯಾಗಿ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿಗಳು,ಜನರಿಗೆ ಉತ್ತಮ ಆಡಳಿತ ಸೇವೆಯನ್ನು ನೀಡಲು ಮುಂದಾಗದೆ ಅಧಿಕಾರದ ಅಹಂನ ದುರಾಹಂಕಾರದಿಂದ ಸರ್ಕಾರಿ ಸೇವೆಯ ವೇಳೆಯಲ್ಲಿ ಮೋಜು ಮಸ್ತಿಯಲ್ಲಿ ಭಾಗಿಯಾಗಿ ಸರ್ಕಾರದ ಸೇವೆಗೆ ಕಳಂಕ ತಂದೊಡ್ಡಿರುವ ಹಲವಾರು ಘಟನೆಗಳನ್ನು ನಾವುಗಳು ಈಗಾಗಲೇ ಕಂಡು ಕೇಳಿ ಅರಿತಿರುವ ವಿಷಯಗಳಾಗಿವೆ.ಆದರೆ ಇದೀಗ ಸರ್ಕಾರದ ಸೇವೆಯ ಸಮಯದಲ್ಲಿ ಅಧಿಕಾರದ ದುರ್ಭಳಕೆಯಿಂದ ಮೋಜು ಮಸ್ತಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಕಂಡುಬಂದಿರುವುದು ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮ ಪಂಚಾಯತಿ ಆವರಣದಲ್ಲಿ.

ರಾಣೆಬೆನ್ನೂರು ತಾಲೂಕಿನ ವ್ಯಾಪ್ತಿಗೆ ಬರುವ ಹರನಗಿರಿ ಎಂಬ ಗ್ರಾಮದಲ್ಲಿ ಪ್ರತ್ಯೇಕ ಗ್ರಾಮ ಪಂಚಾಯತಿ ಕಾರ್ಯಾಲವಿದ್ದು,ಈ ಪಂಚಾಯತಿಯ ವ್ಯಾಪ್ತಿಗೆ ಕುದುರಿಹಾಳ ಮತ್ತು ಹರನಗಿರಿ ಗ್ರಾಮಗಳ ಜನರ ಸೇವೆಗೆ ಮುಂದಾಗುವುದು ಇಲ್ಲಿನ ಪಂಚಾಯತಿ ಆಡಳಿತ ವರ್ಗದ ಕರ್ತವ್ಯವಾಗಿರುತ್ತದೆ.ಆದರೆ ಜನರಿಗೆ ಉತ್ತಮ ಆಡಳಿತದ ಮೂಲಕ ಸೇವೆ ನೀಡಬೇಕಾದ ಅಧಿಕಾರ ವರ್ಗವು,ಜನರ ಸೇವೆಗೆ ಮುಂದಾಗದೆ ಪಂಚಾಯತಿಯ ಕಾರ್ಯಾಲಯ ಆವರಣದಲ್ಲಿ ಮೋಜು ಮಸ್ತಿಗಾಗಿ ಚಿಕ್ಕನ್ ಮಟನ್ ಊಟದ ಸವಿಯನ್ನು ಸವಿಯುತ್ತಾ ಈ ಕಾರ್ಯಾಲವನ್ನು ಅನೈತಿಕ ಚಟುವಟಿಕೆಗಳ ತಾಣವೆಂಬಂತೆ ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಈಗಾಗಲೇ ಹಲವು ವರ್ಷಗಳ ಹಿಂದೆಯೇ ಗ್ರಾಮದ ಅಭಿವೃದ್ಧಿಯ ಮತ್ತು ಗ್ರಾಮದಲ್ಲಿರುವ ಬಹು ಸಂಖ್ಯೆಯ ರೈತ ಸಂಕುಲಕ್ಕೆ ಅನುಕೂಲವಾಗುವ  ಹಿತದೃಷ್ಟಿಯಿಂದ ಸರ್ಕಾರವು ಹರನಗಿರಿ ಗ್ರಾಮದಲ್ಲಿ ಎರಡು ಹಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಿರುತ್ತದೆ.ಆದರೆ ಈ ಪಂಚಾಯತಿಯ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿ ಮೌನೇಶ್,ಬಿಲ್ ಕಲೆಕ್ಟರ್ ನಿಂಗಪ್ಪ ಹಾಗೂ ಇನ್ನಿತರೆ ಸಹಚರರು ಸರ್ಕಾರದ ಈ ಕಟ್ಟಡವನ್ನು ಜನರಿಗೆ ಉತ್ತಮ ಆಡಳಿತ ನೀಡಲು ಉಪಯೋಗಿಸದೆ,ಊಟದ ನೆಪದಲ್ಲಿ ಚಿಕ್ಕನ್,ಮಟ್ಟನ್ ಸವಿ ರುಚಿಯ ಮೂಲಕ ಮೋಜು ಮಸ್ತಿಯ ಉಪಯೋಗಕ್ಕೆ ಬಳಸಿಕೊಂಡಿರುವುದು ಜಿಲ್ಲಾಡಳಿತದ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ.

ಇನ್ನು,ಈ ಪಂಚಾಯತಿ ವ್ಯಾಪ್ತಿಗೆ ಬರುವ ಹರನಗಿರಿ ಮತ್ತು ಕುದುರಿಹಾಳ ಗ್ರಾಮದ ಬಹುತೇಕ ಜನರು ಕೃಷಿ ನಂಬಿಕೊಂಡು ತಮ್ಮ ಜಮೀನುಗಳಲ್ಲಿ ಕಾಯಕ ಮಾಡಿಕೊಂಡು ಜೀವನ ಸಾಗಿಸುವ ಜನರಾಗಿದ್ದು,ಜಮೀನು ಮತ್ತು ಮನೆಗಳ ತಾಜ್ಯಗಳ ವಿಲೇವಾರಿ ವಿಷಯವಾಗಿ ಈ ಪಂಚಾಯತಿ ಕಾರ್ಯಾಲಕ್ಕೆ ಬರುವುದು ಸರ್ವೇಸಾಮಾನ್ಯ.ಆದರೆ ಪಂಚಾಯತಿ ಕಾರ್ಯಾಲಯಕ್ಕೆ ಬರುವ ಜನರಿಗೆ ಇಲ್ಲಿನ ಆಡಳಿತ ವರ್ಗವು ಸೂಕ್ತ ರೀತಿಯಲ್ಲಿ ಸ್ಪಂಧಿಸದೆ ಇವತ್ತು ಸರ್ವರ್ ಬ್ಯೂಜಿ ಅಥವಾ ಇನ್ಯಾವುದೋ ಕುಂಟು ನೆಪ ಹೇಳಿ ನಾಳೆ ಬಾ ಎನ್ನುವ ಅರ್ಥಹೀನಾ ಉತ್ತರವನ್ನು ನೀಡುತ್ತಾ ಸೇವೆಯಲ್ಲಿ  ಬೇಜವಾಬ್ದಾರಿತನ ತೋರಲು ಮುಂದಾಗಿರುವುದು ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ಮಾತುಗಳಾಗಿವೆ.ಇನ್ನೂ ಸಂವಿಧಾನಾತ್ಮಕವಾಗಿ ಪಂಚಾಯತಿ ಅಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಜನರ ಸೇವೆಗೆ ಮುಂದಾಗದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರೆ ಅಂತಹ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಸೂಚಿಸಲು ಸಂವಿಧಾನದ ಶಾಸಂಕಾದ ಅಡಿಯಲ್ಲಿ ಗ್ರಾಮದ ಜನರು ಮತಗಳ ರೂಪದಲ್ಲಿ ಸದಸ್ಯರನ್ನು ಆಯ್ಕೆ ಮಾಡುವುದು ನಮ್ಮ ಪ್ರಜಾಪ್ರಭುತ್ವದ ಒಂದು ಅಂಗವಾಗಿದೆ.ಆದರೆ ಪಂಚಾಯತಿ ಅಧಿಕಾರಿಗಳು ಕಾರ್ಯಾಲಯ ಆವರಣದಲ್ಲಿ ಚಿಕ್ಕನ್ ಮಟನ್ ತರಿಸಿಕೊಂಡು ಮನಬಂದಂತೆ ಮೋಜು ಮಸ್ತಿ ಮಾಡುತ್ತಿರುವುದರ ಜೊತೆಗೆ ಕಾರ್ಯಾಲಕ್ಕೆ ಬರುವ ಜನರಿಗೆ ಎಲ್ಲೆಂದರಲ್ಲಿ ನಿದ್ರೆ ಮಾಡಲು ಅವಕಾಶ ನೀಡುತ್ತಿರುವುದು ಕಾಣುತ್ತಿದ್ದರು ಇಲ್ಲಿನ ಸದಸ್ಯ ಆಡಳಿತ ಮಂಡಳಿಯು ಅದ್ಯಾಕೆ ಮೌನಕ್ಕೆ ಜಾರಿದೆ ಎನ್ನುವುದೇ ಗ್ರಾಮದ ಜನರಲ್ಲಿ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.

ಈ ಕೂಡಲೇ ಜಿಲ್ಲಾಧಿಕಾರಿಗಳು ಪಂಚಾಯತಿ ಕಾರ್ಯಾಲವನ್ನು ಮೋಜು ಮಸ್ತಿಗೆ ಉಪಯೋಗ ಮಾಡಿಕೊಂಡಿರುವ ಪಂಚಾಯತಿಯ ಕಾರ್ಯದರ್ಶಿ ಮತ್ತು ಇನ್ನಿತರೆ ಆಡಳಿತ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲೆಯಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸಿದಂತೆ ಕಾಪಾಡಿಕೊಳ್ಳಲು ಮುಂದಾಗಬೇಕೆನ್ನುವುದು ಪತ್ರಿಕೆಯ ಕಳಕಳಿಯಾಗಿದೆ.

Spread the love

Leave a Reply

Your email address will not be published. Required fields are marked *