ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅದೆಷ್ಟೋ ಮಹನೀಯರು ಇತಿಹಾಸದ ಪುಟಗಳಲ್ಲಿ ಸೇರುವ ಮೂಲಕ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.ಇಂಥಹ ಮಹನೀಯರು ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆಯು ಇದೀಗ ರಾಜಕಾರಣಿಗಳ ಕೈಗೊಂಬೆಯಾಗಿರುವುದು ವಿಷದಾಯಕವಾಗಿದೆ.ಇನ್ನುಈ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಾಂಗ್ಲಿಯಾನ,ಮಲ್ಲಿಕಾರ್ಜುನ ಬಂಡೆ,ಡಿ.ಬಿ.ಅಶೋಕ್ ಇನ್ನೂ ಮುಂತಾದ ಅಧಿಕಾರಿಗಳು ಕರ್ತವ್ಯದ ಸಮಯದಲ್ಲಿ ನೊಂದ ಜನರಿಗೆ ನ್ಯಾಯ ಒದಗಿಸುವುದರ ಮೂಲಕ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವುದು ರಾಜ್ಯದ ಪೊಲೀಸ್ ಇಲಾಖೆಯೇ ಹೆಮ್ಮೆ ಪಡುವಂತ ವಿಷಯ.ಆದರೆ ಇತ್ತೀಚಿನ ದಿನಗಳ ರಾಜಕೀಯ ವಲಯದಲ್ಲಿ ಕಂಡುಬರುತ್ತಿರುವ ರಾಜಕಾರಣಿಗಳ ದುರಾಡಳಿತದಿಂದ ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿಗಳು ಸೇವೆ ಸಲ್ಲಿಸಲು ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷದಾಯಕ ಸಂಗತಿಯಾಗಿದೆ.
ಆದರೆ ಇದೀಗ ಸರ್ಕಾರವು ಘೋಷಿಸಿರುವ ಭಾಗ್ಯಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಹಣದ ಅವಶ್ಯಕತೆಯ ಹಿನ್ನಲೆಯಲ್ಲಿ ಆಗಿನ ಸರ್ಕಾರವು ಜಾರಿಗೊಳಿಸಿದ ಆದೇಶವನ್ನು ಗಾಳಿಗೆ ತೂರಿ ಮತ್ತೆ ಪೊಲೀಸ್ ಇಲಾಖೆಯ ಮುಖಾಂತರ ಹಗಲು ದರೋಡೆಗೆ ಮುಂದಾಗಿರುವುದು ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ.ಈಗಾಗಲೇ ಸರ್ಕಾರದ ಅಧಿನಲ್ಲಿರುವ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಸರ್ಕಾರಿ ರಜೆಗಳು ಅನ್ವಹಿಸುತ್ತವೆ.ಆದರೆ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಯಾವುದೇ ರೀತಿಯ ರಜೆಗಳ ಘೋಷಣೆ ಇಲ್ಲದಿರುವುದು ಒಂದಡೆಯಾದರೆ ರಾಜ್ಯದಲ್ಲಿ ಯಾವುದೇ ಶುಭ,ಅಶುಭ ಘಟನೆಗಳು ಸಂಭವಿಸಿದರೆ,ಘಟನೆಯ ಸ್ಥಳಕ್ಕೆ ದಾವಿಸಿ ನಡೆದಿರುವ ಘಟನೆಗಳ ಬಗ್ಗೆ ಪರಿಶೀಲಿಸಿ ನೋದವರಿಗೆ ನ್ಯಾಯ ಕೋಡಿಸುವುದು ಈ ಅಧಿಕಾರಿಗಳ ಇನ್ನೊಂದಡೆಯ ಕರ್ತವ್ಯವಾಗಿದೆ.ಇನ್ನು,ಸರ್ಕಾರದ ಅಧೀನದಲ್ಲಿರುವ ಎಲ್ಲಾ ಇಲಾಖೆಗಳು ತಮ್ಮದೇ ಇಲಾಖೆಯ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದರೆ,ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಮಾತ್ರ ಯಾವುದೇ ಷರತ್ತುಗಳನ್ನು ನೀಡದೆ ವರ್ಷದ ಮೂನ್ನೂರ ಅರವತೈದು ದಿನಗಳ ಕಾಲ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುವುದು ಸರ್ಕಾರಗಳ ಮಲತಾಯಿ ದೋರಣೆಗೆ ಸಾಕ್ಷಿಯಾಗಿವೆ ಎಂದರೆ ತಪ್ಪಾಗಲಾರದು.
ಇನ್ನು,ಪೊಲೀಸ್ ಇಲಾಖೆಯ ಅಡಿಯಲ್ಲಿ ಬರುವ ಡಿ.ಎ.ಆರ್ ಮತ್ತು ಸಿ.ಎ.ಆರ್ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಕೇವಲ ಸರ್ಕಾರ ನೀಡಿರುವ ಕರ್ತವ್ಯದ ಆದಾರದ ಮೇಲೆ ಸೇವೆ ಸಲ್ಲಿಸುವುದು ಈ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ.ಆದರೆ ಪೊಲೀಸ್ ಠಾಣೆ ಮತ್ತು ಸಂಚಾರಿ ಠಾಣೆಯಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು,ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ನಾಯಕರು ಸೂಚಿಸುವ ಎಲ್ಲಾ ಕ್ಷೇತ್ರಗಳಲ್ಲಿಯೂ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಈಗಾಗಲೇ ರಾಜ್ಯದಲ್ಲಿರುವ ಪೊಲೀಸ್ ಇಲಾಖೆಗೆ ದೇಶದಲ್ಲಿ ತನ್ನದೇ ಅದ ಘನತೆ ದೋರಕಿರುವುದು ಸಂತಸದ ವಿಷಯ.ಆದರೆ ಇಂಥಹ ಹೆಮ್ಮೆಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ತಮ್ಮ ರಾಜಕಾರಣದ ಲಾಭಕ್ಕೆ ಮನಬಂದಂತೆ ಕರ್ತವ್ಯ ನಿರ್ವಹಿಸುವಂತೆ ಆದೇಶಿಸುತ್ತಿರುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ರಾಜಕೀಯ ನಾಯಕರುಗಳು ಅರ್ಥೈಹಿಸಿಕೊಳ್ಳುವುದು ಅನಿವಾರ್ಯದ ಸಂಗತಿಯಾಗಿದೆ.ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಸಹ ನಮ್ಮ ಹಾಗೆ ಮನುಷ್ಯರಲ್ಲವೇ?ಎನ್ನುವುದನ್ನು ಸರ್ಕಾರಗಳು ಅರ್ಥೈಹಿಸಿಕೊಂಡು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಕರ್ತವ್ಯದಲ್ಲಿ ಪಡುತ್ತಿರುವ ಕಷ್ಟವನ್ನು ಮನಗಂಡು ಮುಂದಿನ ದಿನಗಳಲ್ಲಾದರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ,ತಮ್ಮ ಲಾಭಂಶಕ್ಕಾಗಿ ಹೆಚ್ಚಿನ ಜವಾಬ್ದಾರಿ ನೀಡಿ ಮಾನಸಿಕ ಹಿಂಸೆ ನೀಡುವುದನ್ನು ಕಡಿಮೆ ಮಾಡಬೇಕು ಎನ್ನುವುದನ್ನು ಸರ್ಕಾರವು ಅರ್ಥೈಹಿಸಿಕೊಳ್ಳುವುದು ಸೂಕ್ತವಾಗಿದೆ.