ಪ್ರಸ್ತುತ ರಾಜ್ಯದ ರಾಜಕಾರಣದಲ್ಲಿ ಹಲವು ರೀತಿಯ ಅಕ್ರಮಗಳು ಬಯಲಿನೆಡೆಗೆ ಬರುವುದರ ಮೂಲಕ ಸರ್ಕಾರದ ಆಡಳಿತ ವ್ಯವಸ್ಥೆಗೆ ಕಳಂಕ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷದಾಯಕ ಸಂಗತಿ.ಈಗಾಗಲೇ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಘೋಷಿಸಿರುವ ಭಾಗ್ಯಗಳನ್ನು ಈಡೇರಿಸುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಮಾಡುತ್ತಿರುವುದರ ಜೊತೆಗೆ ಜನಸಾಮಾನ್ಯರು ದಿನ ಬಳಕೆ ಮಾಡುವ ಸಾಮಗ್ರಿಗಳ ಮೇಲೆ ಹೆಚ್ಚಿನ ತೇರಿಗೆ ವಿಧಿಸುವುದರ ಮೂಲಕ ರಾಜ್ಯದ ಜನರಿಗೆ ಕಗ್ಗಂಟಿನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿರುವುದಂತು ಸತ್ಯ.ದಿನ ಬಳಕೆ ಮಾಡುವ ದಿನಸಿ ಸಾಮಗ್ರಿಗಳ ಮೇಲೆ ಏರಿರುವ ಅಧಿಕ ಬೆಲೆಯಿಂದ ಕಂಗಲಾಗಿರುವ ಜನರಿಗೆ ಸೂಕ್ತ ರೀತಿಯ ಬೆಲೆಯಲ್ಲಿ ಸಾಮಗ್ರಿಗಳನ್ನು ದೋರಕಿಸಿ ಕೊಡುವಲ್ಲಿ ವಿಫಲವಾಗಿರುವ ಸರ್ಕಾರ ಇದೀಗ ಮತ್ತೆ ಶಾಸಕ,ಸಚಿವರ ವೇತನ ಭತ್ಯೆಯನ್ನು ಹೆಚ್ಚಿಗೆ ಮಾಡಿರುವುದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಾರಿಯ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಶಾಸಕರಿಗೆ ಮತ್ತು ಸಚಿವರಿಗೆ ಮೊದಲಿಗೆ ಇರುವಂತ ವೇತನವನ್ನು ಕಡಿತಗೋಳಿಸಿ ವೇತನ ಹಾಗೂ ಮನೆ ಬಾಡಿಗೆ,ಸಂಚಾರದ ಮೊತ್ತ ಮತ್ತು ಇನ್ನಿತರೆ ಖರ್ಚುಗಳಿಗೆ ಹೆಚ್ಚಿನ ಮೊತ್ತವನ್ನು ನೀಡುವಂತೆ ಸುತ್ತೋಲೆಗಳನ್ನು ಹೋರಡಿಸಿರುವುದು ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ.ಇನ್ನು,ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಸಲುವಾಗಿ ಸಾಲದ ಸುಳಿಯಲ್ಲಿ ಸೀಲುಕಿರುವ ಸರ್ಕಾರವು ಇದೀಗ ಮುಖ್ಯಮಂತ್ರಿ,ಶಾಸಕರಿಗೆ,ಸಚಿವರಿಗೆ ಹಿಂದೆ ಇರುವಂತ ವೇತನ ಮತ್ತು ಇತರೆ ವೆಚ್ಚಗಳ ಕಡಿತಗಳನ್ನು ದುಪ್ಪಟ್ಟು ಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವುದು ಬುದ್ದಿವಂತರ ಆಲೋಚನೆಗೆ ಯಕ್ಷ ಪ್ರಶ್ನೆಯಾಗಿದೆ.ಹಲವು ವರ್ಷಗಳಿಂದ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆರು,ಆಶಾ ಕಾರ್ಯಕರ್ತರು,ಶಾಲೆಗಳ ಅಡುಗೆ ತಯಾರಕರು ಈಗಾಗಲೇ ದಿನ ಬಳಕೆ ಸಾಮಗ್ರಿಗಳ ಮೇಲೆ ಏರಿರುವ ಬೆಲೆ ಏರಿಕೆಯಿಂದ ತಾವು ಸಲ್ಲಿಸುವ ಸೇವೆಗೆ ಸರ್ಕಾರ ನೀಡುತ್ತಿರುವ ವೇತನ ಸಾಲದೆ,ವೇತವನ್ನು ಹೆಚ್ಚಿಗೆ ಮಾಡುವಂತೆ ಸರ್ಕಾರಕ್ಕೆ ಮನವಿ ನೀಡುವುದರ ಮೂಲಕ ಸತತ ಹೋರಾಟದ ಮೂಲಕ ಹೆಚ್ಚಿನ ವೇತನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಸಂತಸದ ವಿಷಯ.
ಆದರೆ ಈ ಕಾರ್ಯಕರ್ತೆಯರ ರೂಪದಲ್ಲಿರುವ ಮಹಿಳೆಯರ ಸತತ ಹೋರಾಟದ ಫಲವಾಗಿ ಅದೆಷ್ಟೋ ದಿನಗಳ ನಂತರ ಮೊದಲಿನ ವೇತನಕ್ಕಿಂತ ಸ್ವಲ್ಪ ಪ್ರಮಾಣದ ಹೆಚ್ಚಿನ ವೇತನವನ್ನು ನೀಡುವ ಮೂಲಕ ಸರ್ಕಾರವು ಮತ್ತೆ ಎಲ್ಲಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಕಾರ್ಯಕರ್ತೆಯರಿಗೆ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಮುಂದಾಗಿದ್ದು ವಿಷದಾಯಕ ಸಂಗತಿ.ಈ ಹಿಂದಿನ ದಿನಗಳಲ್ಲಿ ಸರ್ಕಾರವು ರಾಜ್ಯದ ಮುಖ್ಯಮಂತ್ರಿಗಳಿಗೆ 75,000.ಸಚಿವರಿಗೆ 60,000.ಪ್ರತಿಪಕ್ಷ ನಾಯಕರಿಗೆ 60,000.ಶಾಸಕರು 40,000.ವಿಧಾನಸಭಾಧ್ಯಕ್ಷ 75,000.ವಿಧಾನ ಪರಿಷತ್ ಸಭಾಪತಿಗೆ 75,000 ಸಾವಿರ ರೂಪಾಯಿಗಳನ್ನು ನೀಡುತ್ತಿತ್ತು.ಆದರೆ ಇವಾಗ ಮೊದಲಿಗೆ ನೀಡುತ್ತಿರುವ ವೇತನಕ್ಕಿಂತ ದುಪ್ಪಟ್ಟು ವೇತನ ಹೆಚ್ಚಿಗೆ ಮಾಡುವುದರ ಜೊತೆಗೆ ಅತಿಥಿ ಭತ್ಯ.ಮನೆ ಬಾಡಿಗೆ.ಪಿಂಚಣಿ.ಹೆಚ್ಚುವರಿ ಪಿಂಚಣಿಯಲ್ಲೂ ಹೆಚ್ಚಿನ ವೇತನ ನೀಡುವಂತೆ ಮಾಡುವ ಮೂಲಕ ರಾಜ್ಯದ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಿಸಿರುವುದು ಅದೇಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಸರ್ಕಾರವು ಅರ್ಥೈಹಿಸಿಕೊಳ್ಳುವುದು ಸೂಕ್ತವಾಗಿದೆ.
ಈಗಾಗಲೇ ಅಂಗನವಾಡಿ,ಆಶಾ ಕಾರ್ಯಕರ್ತೆರು,ಅಡುಗೆ ಸಹಾಯಕರಿಂದ ಬಂದ ಹೆಚ್ಚಿಗೆ ವೇತನ ಎಂಬ ಕೂಗಿನ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಸರ್ಕಾರವು ಅಲ್ಪ ಪ್ರಮಾಣದಲ್ಲಿ ವೇತನವನ್ನು ಹೆಚ್ಚಿಗೆ ಮಾಡುವ ಮೂಲಕ ಬರುತ್ತಿರುವ ಕೂಗಿನ ಬಾಯನ್ನು ಮುಚ್ಚುವ ಕೆಲಸವನ್ನು ಮಾಡಿತ್ತು.ಆದರೆ ಮಂತ್ರಿಮಂಡಲದ ವೇತವನ್ನು ಹೆಚ್ಚಿಗೆ ಮಾಡುವ ಬದಲು ರಾಜ್ಯದ ಶಿಕ್ಷಣಕ್ಕೆ ಹೊತ್ತು ನೀಡಿದ್ದಾರೆ ಶಿಕ್ಷಣ ರಂಗವು ಮತ್ತಷ್ಟು ಉತ್ತುಂಗದ ಶಿಖರಕ್ಕೆ ಏರುತಿತ್ತು.