ಕೊಪ್ಪಳ:ಬಸವರಾಜು.ಏನ್.ಬೋದೂರು
ಕುಷ್ಟಗಿ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ಶಂಕರ್ ದೊಡ್ಡಮನಿ ಎನ್ನುವ ಅಧಿಕಾರಿಯು ಹಿಂಬದಿಯಿಂದ ಸಾಥ್ ನೀಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಇನ್ನೂ ತಾಲೂಕಿನಲ್ಲಿರುವ ಹಳ್ಳಿಯಿಂದ ಹಿಡಿದು ಸಿಟಿಯವರೆಗೆ ಎಲ್ಲೆಂದರಲ್ಲಿ ಅಂದರೆ ಚಹಾ ಅಂಗಡಿ,ಗೂಡಂಗಡಿ,ಕಿರಾಣಿ ಅಂಗಡಿ,ಪಾನ್ ಶಾಪ್ ಮತ್ತು ಕೆಲವು ಮನೆಗಳಲ್ಲಿಯೂ ಸಹ ಅಕ್ರಮ ಮದ್ಯ ಮಾರಾಟ ಪ್ರತಿನಿತ್ಯ ಹೆಗ್ಗಿಲ್ಲದೆ ನಡೆಯುತ್ತಿದೆ.ಅಧಿಕಾರಿಯ ಈ ನಡೆಯಿಂದ ಹಳ್ಳಿಗಳಲ್ಲಿರುವ ರೈತಾಪಿ ಜನರ ಬಾಳು ಕಣ್ಣೀರಿನ ಗೋಳಾಗಿ ಪರಿಣಮಿಸಿದೆ.ಯುವಕರು,ಕೃಷಿಕರು ಕುಡಿತದ ಚಟಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.ಅದೆಷ್ಟೋ ಯುವಕರು ಈ ಮದ್ಯಪಾನದ ಚಟಕ್ಕೆ ಗುರಿಯಾಗಿ ತಂದೆ,ತಾಯಿ ನೀಡಿರುವ ಜೀವನವನ್ನು ಸಂಪೂರ್ಣ ಮುಗಿಸದೇ ಅರ್ಧ ಹಂತದಲ್ಲಿಯೇ ಪ್ರಾಣ ಕಳೆದುಕೊಂಡಿರುವುದು ವಿಷದಾಯಕ.
ಸರ್ಕಾರದ ಅಬಕಾರಿ ನಿಯಮಗಳನ್ನು ಮೀರಿ ಕಾನೂನು ಬಾಹಿರವಾಗಿ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಯ ಕುರಿತು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಅಬಕಾರಿ ಅಧಿಕಾರಿಗಳಿಗೆ ಪ್ರತಿ ತಿಂಗಳು,ಪ್ರತಿಯೊಂದು ಅಂಗಡಿಗಳಿಂದ ಮಾಮೂಲು ಮುಟ್ಟುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ಕೇಳಿಬರುತ್ತಿರುವ ಮಾತುಗಳಲ್ಲಿ ಅದೆಷ್ಟರ ಮಟ್ಟಿಗೆ ಸತ್ಯಾಂಶ ಅಡಗಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.ಆದರೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವು ಕಂಡರು ಕಾಣದ ಕುರುಡನಂತೆ ವರ್ತಿಸುತ್ತಿರುವ ಅಧಿಕಾರಿಗಳ ನಡೆಯು ಸಾರ್ವಜನಿಕರ ಮಾತುಗಳಲ್ಲಿ ಸತ್ಯಾಂಶ ಅಡಗಿದೆ ಎಂಬಂತೆ ತೋರುತ್ತಿದೆ.ಈಗಾಗಲೇ ತಾಲೂಕಿನಲ್ಲಿ ಸರ್ಕಾರದ ಪರವಾನಿಗೆ ಪಡೆದಿರುವ ಬಹುತೇಕ ಮದ್ಯದ ಅಂಗಡಿಗಳು ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ,ಖರೀದಿಸಿದ ಮದ್ಯಕ್ಕೆ ಯಾವುದೇ ಬಿಲ್ ನೀಡದೆ ವ್ಯಾಪಾರಕ್ಕೆ ಮುಂದಾಗಿದ್ದಾರೆ.ಈ ಅಕ್ರಮ ಮದ್ಯ ಮಾರಾಟ ಕುರಿತು ಕರ್ನಾಟಕ ವಿದ್ಯುತ್ತ್ ವೈರ್ ಮೇನ್ ಮತ್ತು ಕಾರ್ಮಿಕ ಟ್ರೇಡ್ ಯೂನಿಯನ್ ಕೊಪ್ಪಳ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಬೀಮಣ್ಣ ದೊಡ್ಡಮನಿಯವರು ಕುಷ್ಟಗಿ ಅಬಕಾರಿ ಅಧಿಕಾರಿಗೆ ಮದ್ಯದ ಬಿಲ್ ನೀಡದ ಬಾರ್ ಅಂಗಡಿಗಳ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಾರ್ ಗಳ ಪರವಾನಗಿ ರದ್ದು ಮಾಡಬೇಕೆಂದು ಮನವಿ ಸಲ್ಲಿಸಿರುತ್ತಾರೆ.ಮನವಿ ಸಲ್ಲಿಸಿ ಏಳೆಂಟು ತಿಂಗಳಾದರೂ ನಿಯಮ ಉಲ್ಲಂಘನೆ ಮಾಡಿದ ಅಂಗಡಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಯ ನಡೆಯು ಹತ್ತಾರು ಅನುಮಾನಗಳಿಗೆ ದಾರಿಯಾಗುತ್ತಿದೆ.
ಇನ್ನೂ ತಾಲೂಕಿನ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಂಕರ್ ದೊಡ್ಡಮನಿ ಎನ್ನುವ ದುರಾಹಂಕಾರಿ ಅಧಿಕಾರಿಗೆ ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು ಸಲ್ಲಿಸಿದ ಜಿಲ್ಲಾಧ್ಯಕ್ಷ ಬೀಮಣ್ಣ,ದೂರು ಸಲ್ಲಿಸಿ ಏಳೆಂಟು ತಿಂಗಳಾದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರೆ,ನೀನೇನೂ ಎಸಿನಾ? ಡಿಸಿನಾ? ನಿನಗೆ ಮಾಹಿತಿ ನೀಡುವ ಅವಶ್ಯಕತೆ ನನಗಿಲ್ಲ ಎಂದು ಸೊಕ್ಕಿನಿಂದ ವರ್ತಿಸಿದ್ದಾರೆ ಎನ್ನುವ ಹೇಳಿಕೆಯನ್ನು ಪತ್ರಿಕೆಗೆ ನೀಡಿರುತ್ತಾರೆ.ಹೌದು!ಸ್ವಾಮಿ ಈ ಬೀಮಣ್ಣ ಕೇವಲ ಸಾರ್ವಜನಿಕ ಎಸಿನೂ?ಅಲ್ಲ ಡಿಸಿನೂ?ಅಲ್ಲ.ಆದರೆ ಇಂತಹ ಸಾರ್ವಜನಿಕರು ಕಟ್ಟುವ ತೆರಿಗೆಯ ಹಣದಿಂದ ಪಡೆಯುತ್ತಿರುವ ಸರ್ಕಾರದ ಸಂಬಳವು ನಿನಗೂ ಮತ್ತು ನಿನ್ನ ಕುಟುಂಬಕ್ಕೆ ಮೋಜು ಮಸ್ತಿಗೆ ಅನುಕೂಲವಾಗಿದೆ ಎನ್ನುವ ವಿವೇಕತೆಯನ್ನು ಮರೆತರೆ ಹೇಗಯ್ಯಾ?
ಈಗಾಗಲೇ ಕುಷ್ಟಗಿ ನಗರದಲ್ಲಿರುವ ಸಿ.ಎಲ್- 2, ಸಿಎಲ್ – 7 ಮದ್ಯದ ಅಂಗಡಿಗಳಲ್ಲಿ ಮದ್ಯ ಪ್ರಿಯರಿಗೆ ಅಧಿಕ ಬೆಲೆಗೆ ಮದ್ಯವನ್ನು ಮಾರಾಟ ಮಾಡುವುದರ ಜೊತೆಗೆ ಮದ್ಯದ ಅಂಗಡಿಗಳಲ್ಲಿ ರಶಿದಿ ಪುಸ್ತಕವನ್ನು ಸಹ ನಿರ್ವಹಿಸದೆ,ಜಾಹಿರಾತು ಫಲಕವನ್ನು ಸಹ ಪ್ರದರ್ಶಿಸದೆ ಮದ್ಯ ಪ್ರಿಯರಿಗೆ ಮೋಸ ಮಾಡಲಾಗುತ್ತಿದೆ ಎನ್ನುವುದು ಮದ್ಯ ಪ್ರಿಯರ ಕೂಗಾಗಿದೆ.ಇನ್ನು ಶಂಕರ್ ಎನ್ನುವ ಅಧಿಕಾರಿಯು ಕರ್ತವ್ಯದಲ್ಲಿ ತೋರುತ್ತಿರುವ ಮಿತಿಮೀರಿದ ದುರ್ವತನೆಯಿಂದ ಬೀಮಣ್ಣರವರು ಈಗಾಗಲೇ ತಾಲೂಕಿನ ದಂಡಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿರುತ್ತೇನೆ.ಆದರೆ ಅದ್ಯಾಕೋ?ಈ ಅಧಿಕಾರಿಗಳು ಕೂಡ ನಡೆಯುತ್ತಿರುವ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಹಾಕದಿರುವುದು ನೋವಿನ ಸಂಗತಿಯಾಗಿದೆ ಎಂದು ಪತ್ರಿಕೆಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಕೂಡಲೇ ಜಿಲ್ಲಾಧಿಕಾರಿಗಳು,ಜನರಿಗೆ ಉತ್ತಮ ಸೇವೆ ನೀಡದೆ,ನೀನೇನೂ ಡಿಸಿನಾ?ಎನ್ನುವ ಉದ್ದಾಟತನದ ಮಾತುಗಳಿಂದ ಹೋರಾಟಗಾರರ ಮನಸ್ಸಿಗೆ ನೋವುಂಟು ಮಾಡುತ್ತಾ,ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲನಾಗಿರುವ ಶಂಕರ್ ದೊಡ್ಡಮನಿ ಎನ್ನುವ ದುರಾಹಂಕಾರಿ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತುಗೋಳಿಸಿ ಈಗಾಗಲೇ ತಾಲೂಕಿನಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದರ ಜೊತೆಗೆ ತಾಲೂಕಿನಲ್ಲಿರುವ ಜನರು ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ತಮ್ಮ ಕರ್ತವ್ಯವಾಗಿದೆ.
– ಬಸವರಾಜ ಎನ್ ಬೋದೂರು.