ಹಾವೇರಿ:ಅಧಿಕಾರಿಗಳಿಗೆ ರಾಜಕೀಯ ನಂಟು,ತುಂಬುತ್ತಿದೆ ಭ್ರಷ್ಟಾಚಾರದ ಗಂಟು..?

ಇನ್ನೇನೂ ಮಳೆಗಾಲದ ಅವಧಿ ಮುಗಿದು,ಬೇಸಿಗೆಯ ಅವಧಿ ಪ್ರಾರಂಭವಾದಗಿನಿಂದಲೂ ಹಾವೇರಿ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಯ ಕುರಿತು ಹಲವು ಪತ್ರಿಕಾ ಮಿತ್ರರು,ಅನೇಕ ಬಾರಿ ಸುದ್ದಿ ಪ್ರಕಟಿಸುವುದರ ಮೂಲಕ ಸಂಬಂಧಪಟ್ಟ ಜಿಲ್ಲೆಯ “ಮರಳು ಟಾಸ್ಕ್ ಫೋರ್ಸ್” ಸಮಿತಿಯ ಅಧಿಕಾರಿಗಳಿಗೆ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸೂಚಿಸಿರುವುದು ಸತ್ಯಕ್ಕೆ ಹತ್ತಿರವಾಗಿದೆ.ಆದರೆ,ಅದ್ಯಾಕೋ? ಜಿಲ್ಲೆಯ ಮರಳು ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದೆ ಬಾರದೇ ಅಕ್ರಮಕೋರರ ಸಂಬಂಧಿಗಳಂತೆ ವರ್ತಿಸುತ್ತಿರುವುದು ವಿಷದಾಯಕ ಸಂಗತಿಯಾಗಿದೆ.

ಕಾನೂನನ್ವಯ ಪರಿಸರ ಸಂರಕ್ಷಣಾ ಕಾಯಿದೆ 1986 ಪ್ರಕಾರ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಬಹುದು.ಇದೆ ನಿಟ್ಟಿನಲ್ಲಿ ಭೂ ಸಂಪತ್ತು 2013 ರ ಕಾಯ್ದೆಯ ಪ್ರಕಾರ ಅನುಮತಿ ಪಡೆಯದೆ ಮುಂದಾಗುವ ವಾಹನಗಳನ್ನು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ಮುಖಾಂತರ ನ್ಯಾಯಾಲಯದ ಬಂದನಕ್ಕೆ ಒಳಪಡಿಸುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ.ಆದರೆ ಹಾವೇರಿ ಜಿಲ್ಲೆಯ ಮರಳು ಸಮಿತಿಯ ಅಧಿಕಾರಿಗಳು ಮಾತ್ರ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟದಲ್ಲಿ ಭಾಗಿಯಾಗಿರುವ ಬಹುತೇಕ ವಾಹನಗಳ ಮೇಲೆ ಯಾವುದೇ ಪ್ರಕರಣವನ್ನು ದಾಖಲಿಸದೆ ಕೇವಲ ದಂಡವನ್ನು ವಿಧಿಸುವುದರ ಮೂಲಕ ಹಿಂಬಂದಿಯಿಂದ ಆಕ್ರಮಕ್ಕೆ ಪ್ರಚೋದನೆ ನೀಡುತ್ತಿರುವುದು ಹತ್ತಾರು ಅನುಮಾನಗಳಿಗೆ ದಾರಿಯಾಗಿದೆ.ಇನ್ನು,ಅಧಿಕಾರಿಗಳ ಇಂಥಹ ದುಷ್ಟ ನಡೆಯನ್ನು ಪ್ರಶ್ನೆಸಿಸಲು ಮುಂದಾದ ನಮಗೆ ಅಧಿಕಾರಿಯಿಂದ ಸಿಕ್ಕ ಉತ್ತರ!ವಾಹಗಳ ಮೇಲೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಕ್ಕೆ ಕಳುಹಿಸಿದರೆ ಇವತ್ತಲ್ಲ,ನಾಳೆ ನ್ಯಾಯಾಲಯ ವಿಧಿಸೀದ ದಂಡವನ್ನು ನೀಡಿ ಹೋರಗಡೆ ಬರುತ್ತಾರೆ.ಕೊನೆ ಪಕ್ಷ ಅಕ್ರಮದಲ್ಲಿ ಭಾಗಿಯಾಗಿರುವ ವಾಹನಗಳ ಮೇಲೆ ಪ್ರಕರಣವನ್ನು ದಾಖಲಿಸದೆ ದಂಡವನ್ನು ವಿಧಿಸಿದರೆ ಸರ್ಕಾರದ ಬೊಕ್ಕಸಕ್ಕೆ ತೆರಿಗೆಯ ರೂಪದಲ್ಲಿ ಹಣವಾದರೂ ಸಂಧಾಯವಾಗುತ್ತೆ ಎನ್ನುವ ಜಾಣ್ಮೆಯ ಉತ್ತರವನ್ನು ನೀಡಿರುತ್ತಾರೆ.ಈ ಅಧಿಕಾರಿ ನೀಡಿರುವ ಉತ್ತರದಲ್ಲಿ ಏನು ಲೋಪದೋಷಗಳು ಕೂಡಿರುವುದು ಕಂಡುಬಂದಿರುವುದಿಲ್ಲ.ಹೇಗೋ,ಸರ್ಕಾರದ ಖಜಾನೆಯ ಬೊಕ್ಕಸಕ್ಕೆ ಆರ್ಥಿಕ ನೇರವು ನೀಡುವ ಅಂಶವು ಅಧಿಕಾರಿ ನೀಡಿರುವ ಉತ್ತರದಲ್ಲಿ ಕಂಡುಬಂದಿರುತ್ತದೆ ಬಿಡಿ.ಆದರೆ ಅಕ್ರಮ ಮರಳು ಸಾಗಾಟದಲ್ಲಿ ಭಾಗಿಯಾಗಿರುವ ವಾಹನಗಳ ಮೇಲೆ ಕೇವಲ ಅಲ್ಪ ಸ್ವಲ್ಪ ದಂಡವನ್ನು ವಿಧಿಸುತ್ತಾ ಹೋದರೆ?ವಿಧಿಸಿದ ದಂಡವನ್ನು ಯಾವುದೇ ತೊಂದರೆಗಳಿಗೆ ಒಳಪಡದೆ ಭರ್ತಿ ಮಾಡಿ,ಭರ್ತಿ ಮಾಡಿದ ದಂಡಕ್ಕೆ ಪ್ರತಿಯಾಗಿ ಮತ್ತೆ ಅಕ್ರಮ ಸಾಗಾಟದ ಮುಖಾಂತರ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಮೊತ್ತದ ನಷ್ಟವನ್ನುಂಟು ಮಾಡುತ್ತಾರೆ ಎನ್ನುವುದನ್ನು ಅರ್ಥೈಹಿಸಿಕೊಳ್ಳುವುದು ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಿದೆ.

ಇನ್ನು,ಇತ್ತೀಚಿನ ದಿನಗಳಲ್ಲಿ ರಾಣೆಬೆನ್ನೂರು ತಾಲೂಕಿನ ಕೋಣನತಂಬಿಗೆ ಗ್ರಾಮದ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳನ್ನು ಗಣಿಗಾರಿಗೆ ಮತ್ತು ಸಾಗಾಟಕ್ಕೆ ಮುಂದಾಗಿರುವ ನಾಲ್ಕು ಜೇಸಿಬಿ,ಒಂದು ಟಿಪ್ಪರ್ ನ್ನು ಜಿಲ್ಲೆಯ ಗಣಿ ಅಧಿಕಾರಿಗಳು ವಶಕ್ಕೆ ಪಡೆದಿರುವುದು ಸಂತಸದ ವಿಷಯ.ಕೋಣನತಂಬಿಗೆಯಲ್ಲಿ ಮಾತ್ರ ಅಕ್ರಮ ಮರಳು ಸಾಗಾಟ ನಡೆಯುತ್ತಿಲ್ಲ ತಾಲೂಕಿನ ಹಲವು ಭಾಗಗಳಲ್ಲಿ ನಡೆಯುತ್ತಿರುವುದು ತಾಲೂಕ ಆಡಳಿತದ ಗಮನಕ್ಕೆ ಬಂದಿರುವ ವಿಷಯವಾಗಿದೆ.ಆದರೆ ಟಾಸ್ಕ್ ಫೋರ್ಸ್ ಸಮಿತಿಯಲ್ಲಿರುವ ಇನ್ಯಾವುದೇ ಅಧಿಕಾರಿಗಳು ಮಾಡದೆ ಇರುವ ಕಾರ್ಯವನ್ನು ಗಣಿ ಇಲಾಖೆಯ ಅಧಿಕಾರಿಗಳು ಮಾಡಿರುವುದು ಸಂತಸದ ವಿಷಯ.ಆದರೆ ರಾತ್ರಿ ವೇಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಮುಂದಾಗಿರುವ ವಾಹನಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ವಾಹನಗಳ ಮೇಲೆ ಪ್ರಕರಣ ಯಾವುದೇ ದಾಖಲಿಸದೆ ಕೇವಲ ದಂಡವನ್ನು ವಿಧಿಸಿ ಮತ್ತೆ ಅಕ್ರಮದಲ್ಲಿ ಭಾಗಿಯಾಗಲು ಅನುಕೂಲ ಮಾಡಿಕೊಟ್ಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಈ ಘಟನೆಯ ಕುರಿತು ನಾವುಗಳು ಜಿಲ್ಲೆಯ ಹಿರಿಯ ಭೂ ವಿಜ್ಞಾನಿಗಳನ್ನು ಪ್ರಶ್ನೆಸಿದಾಗ ಈ ಅಧಿಕಾರಿಯು ಸ್ಥಳಕ್ಕೆ ಬರಬೇಕಿತ್ತು ಸುಮ್ಮನೆ ಕಂಪ್ಲೇಟ್ ಹೇಳುತ್ತಾ ಕುಳಿತರೆ ಸ್ಥಳದಲ್ಲಿ ಇರುವವರಿಗೆ ಮಾತ್ರ ಗೊತ್ತು ನಿಮಗೇನು ಕಂಪ್ಲೇಟ್ ಮಾಡುತ್ತಿರಾ ಎನ್ನುವ ಅರ್ಥಕ್ಕೆ ಬಾರದ ಮಾತುಗಳನ್ನಾಡಿರುತ್ತಾರೆ.ಈ ಅಧಿಕಾರಿ ಮಾತನಾಡಿದ ಮಾತುಗಳನ್ನು ಗಮನಿಸಿದರೇ,ಈಗಾಗಲೇ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ಸುತ್ತಲೂ ಅಲ್ಲಿನ ಸ್ಥಳೀಯ ಶಾಸಕರ ಕರಿನೇರಳು ಸುತ್ತುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಮಾತುಗಳಾಗಿವೆ.ಅದ್ಯಾವ?ರಾಜಕಾರಣಿಯ ಒತ್ತಡಕ್ಕೆ ಮಣಿದು ಕರ್ತವ್ಯದಲ್ಲಿ ಸೋಮಾರಿತನಕ್ಕೆ ಮುಂದಾಗಿದ್ದಾರೆ ಎನ್ನುವುದೇ ಅರ್ಥವಾಗದ ಪ್ರಶ್ನೆಯಾಗಿದೆ.ಆದರೂ ಅಧಿಕಾರ ವರ್ಗದಲ್ಲಿದ್ದುಕೊಂಡು ಮಾಹಿತಿದಾರರಿಗೆ ಸ್ಥಳಕ್ಕೆ ಬನ್ನಿ ಅಂತ ಹೇಳುವುದು ಅಧಿಕಾರ ವರ್ಗಕ್ಕೆ ಶೋಭೆ ತರುವಂತ ಕೆಲಸವಲ್ಲ ಎನ್ನುವುದನ್ನು ಅರ್ಥೈಹಿಸಿಕೊಳ್ಳುವುದು ಈ ಅಧಿಕಾರಿಗಳಿಗೆ ಅನಿವಾರ್ಯವಾಗಿದೆ.

ಕೂಡಲೇ ಮುಖ್ಯಮಂತ್ರಿಗಳು ಹಾವೇರಿ ಜಿಲ್ಲಾದ್ಯಂತ ಸರ್ಕಾರದ ಬೊಕ್ಕಸಕ್ಕೆ ಹಾನಿ ಉಂಟುಮಾಡುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವುದರ ಜೊತೆಗೆ ಅಕ್ರಮದಲ್ಲಿ ಭಾಗಿಯಾಗಿರುವ ವಾಹನಗಳಿಗೆ ದಂಡ ವಿಧಿಸದೆ ಕಾನೂನಿನ ಅಡಿಯಲ್ಲಿ ಮಾಡಿರುವ ಅಕ್ರಮಕ್ಕೆ ಅನುಗೂಣವಾಗಿ ಪ್ರಕರಣವನ್ನು ದಾಖಲಿಸುವಂತೆ ಅಧಿಕಾರಿಗಳಿಗೆ ಆದೇಶಿಸುವುದರ ಮೂಲಕ ಸರ್ಕಾರದ ಖಜಾನೆಗೆ ಆಗುತ್ತಿರುವ ನಷ್ಟವನ್ನು ಸರಿಪಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ.

Spread the love

Leave a Reply

Your email address will not be published. Required fields are marked *