ಅಧಿಕಾರಿಗಳ ನಿರ್ಲಕ್ಷತೆ-ಗೊಬ್ಬೆದ್ದು ನಾರುತ್ತಿರುವ ಬಸ್ ತಂಗುದಾಣಗಳು

ವರದಿ:ನಟರಾಜ ದಾಸಲಕುಂಟೆ

ಸಾರ್ವಜನಿಕರು ಸುಗಮವಾಗಿ ಸಂಚರಿಸುವ ಉದ್ದೇಶದಿಂದ ಸರ್ಕಾರವು ಸಾರಿಗೆ ಇಲಾಖೆಯಡಿಯಲ್ಲಿ ಹತ್ತಾರು ಹೊಸ ಯೋಜನೆಗಳನ್ನು ರೂಪಿಸುವುದರ ಜೊತೆಗೆ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಎಂಬ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಹೆಂಗಳೆಯರ ಪ್ರೀತಿಗೆ ಪಾತ್ರವಾಗಿರುವ ಸರ್ಕಾರವಾಗಿದೆ.ಆದರೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಗಲಿರುಳು ಎನ್ನದೆ ಶ್ರಮೀಸುತ್ತಿರುವ ಸರ್ಕಾರದ ಶ್ರಮಕ್ಕೆ ಅಧಿಕಾರಿಗಳು ಕಿಂಚಿತ್ತು ಬೆಲೆ ನೀಡದೆ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರುತ್ತಿರುವುದು ವಿಷದಾಯಕ ಸಂಗತಿಯಾಗಿದೆ.ತುಮಕೂರು ಜಿಲ್ಲೆಯ ಕೋರ ಹೋಬಳಿಯ ಕೆಸ್ತೂರು ಗ್ರಾಮದಲ್ಲಿ ಸರ್ಕಾರದ ಅನುದಾನದಲ್ಲಿ ಬಸ್ ತಂಗುದಾಣವನ್ನು ನಿರ್ಮಾಣ ಮಾಡಿದ್ದು,ಇಲ್ಲಿನ ಆಡಳಿತ ಮಂಡಳಿಯ ದುರಾಡಳಿತದಿಂದ ಬಸ್ಸು ತಂಗುದಾಣದ ಅಕ್ಕಪಕ್ಕದಲ್ಲಿರುವ ಕಸದ ರಾಶಿಗಳಿಂದ ಬರುತ್ತಿರುವ ದುರ್ನಾತದಿಂದ ತಂಗುದಾಣಕ್ಕೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಈಗಾಗಲೇ ಕೆಸ್ತೂರು ಗ್ರಾಮದಲ್ಲಿರುವ ಜನರಿಗೆ ಅನುಕೂಲವಾಗಲೆಂದು ಗ್ರಾಮದಲ್ಲಿ ಬಸ್ ತಂಗುದಾಣವನ್ನು ನಿರ್ಮಾಣ ಮಾಡಿದ್ದು,ತಂಗುದಾಣದ ಪಕ್ಕದಲ್ಲಿಯೇ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮೆಟ್ರಿಕ್ ಪದವಿ ಪೂರ್ವ ವಿದ್ಯಾರ್ಥಿ ನಿಲಯಗಳಿದ್ದು ರಾತ್ರಿ ವೇಳೆಯಲ್ಲಿ ತಂಗುದಾಣದಲ್ಲಿ ಮದ್ಯ ಪ್ರೀಯರು ಸೇವಿಸಿ ಬಿಸಾಡಿದ ಮದ್ಯದ ಬಾಟಲಿಗಳಿಂದ ಹಾಗೂ ತಂಗುದಾಣದ ಪಕ್ಕದಲ್ಲಿ ಕಂಗೊಳಿಸುತ್ತಿರುವ ಕಸದ ರಾಶಿಗಳಿಂದ ಬರುವ ದುರ್ನಾತದ ದುರ್ವಾಸನೆಯಿಂದ ವಿದ್ಯಾರ್ಥಿ ನಿಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಜನರು ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನು,ಸರ್ಕಾರವು ರಾಜ್ಯದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಕೋಟಿಗಟ್ಟಲೆ ಅನುದಾನದ ಅಡಿಯಲ್ಲಿ ಸ್ವಚತೆ ಕಾರ್ಯವನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುತ್ತದೆ.ಆದರೆ ಗ್ರಾಮದಲ್ಲಿರುವ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ದುರಾಡಳಿತದಿಂದ ಸಾರ್ವಜನಿಕರು ಸಂಚರಿಸುವ ಪ್ರದೇಶದಲ್ಲಿ ದುರ್ನಾತದ ವಾರವರಣ ಸೃಷ್ಟಿಯಾಗುವಂತೆ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಇನ್ನು,ಈಗಿನ ರಾಜ್ಯ ಸರ್ಕಾರವು ರಾಜ್ಯದ ಜನರಿಗೆ ಸ್ವಚ್ಚತೆ  ಕಾಪಾಡುವುದರ ಜೊತೆಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜನರು ಕಟ್ಟುವ ತೇರಿಗೆಯ ಹಣದಿಂದ ಮಾಡುವ ಈ ವರ್ಷದ ಬಜೆಟ್ ನಲ್ಲಿ ಗ್ರಾಮೀಣಭಿವೃದ್ದಿ ಇಲಾಖೆಯಡಿಯಲ್ಲಿ ಹತ್ತು ಸಾವಿರದ ಮುನ್ನೂರ ನಾಲ್ಕು  (10,304)ಸಾವಿರ ಕೋಟಿ ಅನುದಾನವನ್ನು ಮಿಸಲಿಟ್ಟಿರುತ್ತದೆ.ಇದೆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ವೇತನ ನೀಡಲು ಎಂಬತ್ತು ಸಾವಿರದ ನಾಲ್ಕುನೂರ ಮೂವತ್ತು ನಾಲ್ಕು (80,434)ಕೋಟಿ ಅನುದಾನವನ್ನು ಮೀಸಲಿಟ್ಟಿರುತ್ತದೆ.ಈಗಾಗಲೇ ಜನರ ಸೇವೆಯ ಜವಾಬ್ದಾರಿ ಹೊತ್ತು ಸರ್ಕಾರಿ ಸೇವೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ಜನರು ಕಟ್ಟುವ ತೇರಿಗೆಯ ಹಣದಲ್ಲಿ ಸಂಬಳ ಪಡೆಯುತ್ತಿರುವುದು ರಾಜ್ಯದ ಜನತೆಗೆ ತಿಳಿದಿರುವ ವಿಷಯ.ಆದರೆ ಜನರು ನಿಡುವ ತೇರಿಗೆ ಹಣದಲ್ಲಿ ಸಂಬಳವನ್ನು ಪಡೆದು,ಜನರಿಗೆ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಫಲರಾಗುವುದರ ಜೊತೆಗೆ ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ನಡೆಯು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕೂಡಲೇ ಕೆಸ್ತೂರು ಗ್ರಾಮದ ಬಸ್ಸು ತಂಗುದಾಣದ ಅಕ್ಕಪಕ್ಕದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ವಿಧ್ಯಾರ್ಥಿ ನಿಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಮತ್ತು ರೋಗಿಗಳಿಗೆ ದುರ್ವಾಸನೆ ಬಿರುತ್ತಿರುವ ಕಸದ ರಾಶಿಗಳನ್ನು ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ.ತಂಗುದಾಣದ ಪಕ್ಕದಲ್ಲಿ ಕಂಗೊಳಿಸುತ್ತಿರುವ ಕಸದ ರಾಶಿಗಳಿಂದ ಗ್ರಾಮದ ಜನರಿಗೆ ಇನ್ನಿಲ್ಲದ ರೋಗಗಳು ಸಂಭವಿಸಬಹುದು ಎನ್ನುವ ವಿವೇಕತೆಯನ್ನು ಅರಿತುಕೊಳ್ಳದೆ ಕರ್ತವ್ಯದಲ್ಲಿ ಬೇಜವಾಬ್ದಾರಿತನಕ್ಕೆ ಮುಂದಾಗಿರುವ ಪಂಚಾಯತಿಯ ಗ್ರಾಮಾಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಅಸ್ವಚ್ಚತೆಯ ವಾತವರ ಸೃಷ್ಟಿಯಾಗದಂತೆ ಕಾಪಾಡಿಕೊಳ್ಳುವುದು ಜಿಲ್ಲಾ ಕಾರ್ಯನಿರ್ವಾಹಣ ಅಧಿಕಾರಿಗಳ ಕರ್ತವ್ಯವಾಗಿದೆ.

Spread the love

Leave a Reply

Your email address will not be published. Required fields are marked *