ಹಾವೇರಿ
ಸರ್ಕಾರದನ್ವಯ ಜಿಲ್ಲಾದ್ಯಂತ ಪರವಾನಿಗೆ ಪಡೆದಿರುವ ರೀ ಕ್ರಿಯೇಶನ್ ಕ್ಲಬ್ ಗಳ ಮಂಡಳಿಯವರು ತಮ್ಮ ಕಟ್ಟಡಗಳಲ್ಲಿ ಮನರಂಜನೆಗೆ ಸೀಮಿತವಾಗಿರುವ ಯಾವುದೇ ಆಟದ ಮೈದಾನಗಳನ್ನು ನಿರ್ಮಾಣ ಮಾಡಿಕೊಳ್ಳದೆ ಪರವಾನಿಗೆಯ ಬರವಣಿಗೆ ಸಾಲುಗಳಲ್ಲಿ ಉಲ್ಲೇಖಿಸಿರುವ ಷರತ್ತುಗಳನ್ನು ಗಾಳಿಗೆ ತೂರಿ ಕಟ್ಟಡದಲ್ಲಿ ಸಮಿತಿಯಲ್ಲಿರುವ ವ್ಯಕ್ತಿಗಳನ್ನು ಒರೆತು ಪಡಿಸಿ ಅನ್ಯತ ವ್ಯಕ್ತಿಗಳನ್ನು ಕೂರಿಸಿಕೊಂಡು ಹಣವನ್ನು ಪಣಕ್ಕಿಟ್ಟು ಇಸ್ಪಿಟ್ ಜೂಜಾಟವನ್ನು ಆಡುತ್ತಿರುವುದನ್ನು ಕಂಡುಕೊಂಡ ನಾಯಕನ ನಡುಗೆ ವಾರ ಪತ್ರಿಕೆಯು ನಡೆಯುತ್ತಿರುವ ಜೂಜಾಟದ ಬಗ್ಗೆ ಸುದ್ದಿ ಪ್ರಕಟಿಸುವುದರ ಜೊತೆಗೆ ನೆಪ ಮಾತ್ರಕ್ಕೆ ಮನರಂಜನೆ ಆಟವಾಡುತ್ತೇವೆ ಎನ್ನುವ ಕಾರಣ ನೀಡಿ ಕಟ್ಟಡದ ಆವರಣದಲ್ಲಿ ಜೂಜಾಟಕ್ಕೆ ಪ್ರಚೋದನೆ ನೀಡುತ್ತಿರುವ ರೀ ಕ್ರಿಯೇಶನ್ ಕ್ಲಬ್ ಗಳ ಮಂಡಳಿಗಳ ಪರವಾನಿಗೆಯನ್ನು ರದ್ದುಗೊಳಿಸಿ,ನಡೆಯುತ್ತಿರುವ ಜೂಜಾಟಕ್ಕೆ ಕಡಿವಾಣ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸಕ್ಕೆ ಪತ್ರಿಕೆ ಮುಂದಾಗಿತ್ತು.ಆದರೆ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳು ಅದ್ಯಾಕೋ?ರೀ ಕ್ರಿಯೇಶನ್ ಕ್ಲಬ್ ಗಳಲ್ಲಿ ನಡೆಯುತ್ತಿರುವ ಜೂಜಾಟಕ್ಕೆ ಕಡಿವಾಣ ಹಾಕದೆ “ಕಂಡರು ಕಾಣದ ಕುರುಡನಂತೆ” ವರ್ತಿಸುತ್ತಿರುವುದು ಹತ್ತಾರು ಅನುಮಾನಗಳಿಗೆ ದಾರಿಯಾಗುತ್ತಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶ್ರೀ ವೆಂಕಟೇಶ್ವರ ಸ್ಪೋರ್ಟ್ಸ್ ಕ್ಲಬ್.ವೀರಭದ್ರೇಶ್ವರ ಪ್ರೆಂಡ್ಸ್ ಅಸೋಸಿಯನ್.ರಾಘವೇಂದ್ರ ಸ್ಪೋರ್ಟ್ಸ್ & ಅಸೋಸಿಯನ್.ಪ್ರೀತಿ ಸೋಶಿಯಲ್ ಕ್ಲಬ್ ಗಳು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಅನುಮತಿ ಪಡೆದಿದ್ದರೆ,ಹಿರೇಕೆರೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶ್ರೀ ದುರ್ಗಾದೇವಿ ಕ್ಲಬ್.ಹಿರೇಕೆರೂರು ಪ್ರೆಂಡ್ಸ್ ಸ್ಪೋರ್ಟ್ಸ್ ರೀ ಕ್ರಿಯೇಶನ್ ಕ್ಲಬ್ ಗಳು ಹಾಗೂ ಕುಮಾರಪಟ್ಟಣಂ.ಬ್ಯಾಡಗಿ.ಶಿಗ್ಗಾಂವ್ ಇನ್ನೂ ಮುಂತಾದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅನುಮತಿ ಪಡೆದಿರುವ ರೀ ಕ್ರಿಯೇಶನ್ ಕ್ಲಬ್ ಗಳ ಮಂಡಳಿಯವರು ಕಟ್ಟದಲ್ಲಿ ಮನರಂಜನೆಗೆ ಸೀಮಿತವಾದ ಆಟಗಳನ್ನು ಆಡಿಸುತ್ತೇವೆ ಎನ್ನುವ ಕಾರಣವನ್ನು ನೀಡಿ,ಕಟ್ಟಡದಲ್ಲಿ ಯಾವುದೇ ಆಟದ ಮೈದಾನಗಳನ್ನು ನಿರ್ಮಾಣ ಮಾಡಿಕೊಳ್ಳದೆ ಕೇವಲ ನಾಲ್ಕರಿಂದ ಐದು ಟೇಬಲ್ ಗಳ ವ್ಯವಸ್ಥೆ ಮಾಡಿಕೊಂಡು ಸದಸ್ಯರನ್ನು ಒರೆತು ಪಡಿಸಿ ಬೇರೆ ಕಡೆಗಳಿಂದ ಬರುವ ಅನ್ಯತ ವ್ಯಕ್ತಿಗಳಿಗೆ ಕ್ಲಬ್ ಗಳ ಕಟ್ಟದಲ್ಲಿ ಜೂಜಾಟವಾಡಲು ಕುಮ್ಮಕ್ಕು ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ವಿಷಯವಾಗಿದೆ.ಈ ಹಿಂದಿನ ದಿನಗಳಲ್ಲಿ ರಾಣೆಬೆನ್ನೂರು ನಗರದಲ್ಲಿರುವ ರೀ ಕ್ರಿಯೇಶನ್ ಕ್ಲಬ್ ಗಳ ಕಟ್ಟದ ಆವರಣದಲ್ಲಿ ಬೇರೆ ಭಾಗದಿಂದ ಜನರನ್ನು ಕರೆಹಿಸಿಕೊಂಡು ಹಣವನ್ನು ಪಣಕ್ಕಿಟ್ಟು ಇಸ್ಪಿಟ್ ಜೂಜಾಟವಾಡುತ್ತಿರುವ ಬಗ್ಗೆ ಸಾಕ್ಷಿ ಪೂರಕವಾಗಿ “ನಾಯಕನ ನಡುಗೆ” ವಾರ ಪತ್ರಿಕೆಯು ಸುದ್ದಿ ಪ್ರಕಟಿಸುವುದರ ಜೊತೆಗೆ ಪೊಲೀಸ್ ಮಹಾ ನಿರ್ದೇಶಕರಿಗೆ ದೂರನ್ನು ಸಲ್ಲಿಸಿರುವುದು ವಾಸ್ತವ ಸಂಗತಿ.ಆದರೆ ನೀಡಿದ ದೂರಿನನ್ವಯ ತನಿಖೆಗೆ ಮುಂದಾದ ತಾಲೂಕಿನ ಪೊಲೀಸ್ ಉಪ ಅಧೀಕ್ಷಕರು ತಾವು ದೂರಿನಲ್ಲಿ ನೀಡಿರುವ ರೀ ಕ್ರಿಯೇಶನ್ ಕ್ಲಬ್ ಗಳ ಕಟ್ಟಡದ ಆವರಣದಲ್ಲಿ ಯಾವುದೇ ಜೂಜಾಟದ ದೃಶ್ಯಗಳು ಕಂಡುಬಂದಿರುವುದಿಲ್ಲ,ಒಂದು ವೇಳೆ ಮುಂದಿನ ದಿನಗಳಲ್ಲಿ ಇಂತಹ ಜೂಜಾಟಗಳು ನಡೆಯುತ್ತಿರುವುದು ಕಂಡುಬಂದರೆ ಕ್ಲಬ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಅರ್ಥಕ್ಕೆ ಬಾರದ ಹಿಂಬರವನ್ನು ನೀಡಿರುತ್ತಾರೆ.ಅಧಿಕಾರಿಗಳ ಈ ಭ್ರಷ್ಟ ಜಾಣ ನಡೆಯನ್ನು ಮೆಚ್ಚಲೇಬೇಕು.ಏಕೆಂದರೆ?ಹಣವನ್ನು ಪಣಕ್ಕಿಟ್ಟು ಜೂಜಾಟವಾಡುತ್ತಿರುವ ವಿಡಿಯೋ ದೃಶ್ಯಾವಳಿಗಳನ್ನು ಬಗ್ಗೆ ಸಾಕ್ಷಿ ಪೂರಕವಾಗಿ ಅಧಿಕಾರಿಗಳಿಗೆ ನೀಡಿದರು,ಕಟ್ಟದಲ್ಲಿ ಯಾವುದೇ ರೀತಿಯ ಜೂಜಾಟಗಳು ನಡೆಯುತ್ತಿಲ್ಲ ಎನ್ನುವ ಅರ್ಥಹಿನಾ ಉತ್ತರವನ್ನು ನೀಡಿರುವ ಅಧಿಕಾರಿಗಳು ಅದೆಷ್ಟರ?ಮಟ್ಟಿಗೆ ಕ್ಲಬ್ ಗಳ ಮಂಡಳಿಯವರ ಪ್ರಸಾದಕ್ಕೆ ಋಣಿಯಾಗಿದ್ದಾರೆ ಎನ್ನುವುದನ್ನು ಹೇಳಬೇಕಾಗಿಲ್ಲ,ಅಧಿಕಾರಿಗಳು ನೀಡಿರುವ ಹಿಂಬರವನ್ನು ಗಮನಿಸಿದರೆ ತಿಳಿಯುತ್ತೆ ಬಿಡಿ.
ಅದು ಏನೇ ಇರಲಿ ಮುಂದಿನ ಸಂಚಿಕೆಯಲ್ಲಿ ನೋಡೋಣ.ಆದರೆ ಸರ್ಕಾರದನ್ವಯ ರೀ ಕ್ರಿಯೇಶನ್ ಕ್ಲಬ್ ನ ಪರವಾನಿಗೆ ಪಡೆಯಬೇಕಾದರೆ ಕಟ್ಟದಲ್ಲಿ ನಿರ್ಮಾಣ ಮಾಡಿರುವ ಕ್ರೀಡಾ ಮೈದಾನಗಳ ವಿವರಗಳನ್ನು ನೀಡಿ ಕ್ರೀಡಾ ಇಲಾಖೆಯಿಂದ ನಿರೀಕ್ಷಾಪಣ ಪತ್ರವನ್ನು ಪಡೆದ ನಂತರದಲ್ಲಿ ಸಮಿತಿಯಲ್ಲಿ ನೋಂದಣಿಯಾಗಿರುವ ಸದಸ್ಯರ ಹೆಸರುಗಳ ವಿವರವನ್ನು ನೀಡಿ ಜಿಲ್ಲೆಗೆ ಸಂಬಂಧಿಸಿದ ಸಂಘಗಳ ನೋಂದಣಾಧಿಕಾರಿಯಿಂದ ಪರವಾನಿಗೆ ಪಡೆದ ತದನಂತರದಲ್ಲಿ ನಿರ್ಮಾಣ ಮಾಡಿಕೊಂಡಿರುವ ಕಟ್ಟಡದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದಿರುವ ದಾಖಲೆಗಳನ್ನು ಲಗತ್ತಿಸಿ,ಠಾಣೆಯ ಅಧಿಕಾರಿಯ ಮಾರ್ಗಸೂಚನೆಯ ಮೇರೆಗೆ ಕಟ್ಟಡದಲ್ಲಿ ಸದಸ್ಯರಿಗೆ ಮನರಂಜನೆ ಆಟವಾಡಲು ಅವಕಾಶ ಪಡೆಯುವುದು ಕ್ಲಬ್ ಗಳ ಮಂಡಳಿಯವರ ಅದ್ಯ ಕರ್ತವ್ಯವಾಗಿರುತ್ತದೆ.ಆದರೆ ಜಿಲ್ಲೆಯಲ್ಲಿರುವ ಬಹುತೇಕ ರೀ ಕ್ರಿಯೇಶನ್ ಕ್ಲಬ್ ಗಳ ಮಂಡಳಿಯವರು ಕಟ್ಟದ ಆವರಣದಲ್ಲಿ ಯಾವುದೇ ಕ್ರೀಡಾ ಮೈದಾನಗಳನ್ನು ನಿರ್ಮಾಣ ಮಾಡಿಕೊಳ್ಳದೆ ಸರ್ಕಾರವು ನೀಡಿರುವ ಷರತ್ತುಗಳನ್ನು ಗಾಳಿಗೆ ತೂರಿ ಬೇರೆ ಭಾಗಗಳಿಂದ ಜೂಜುಕೋರರನ್ನು ಕರೆಹಿಸಿಕೊಂಡು ಕ್ಲಬ್ ನ ಕಟ್ಟದ ಆವರಣದಲ್ಲಿ ಜೂಜಾಟವಾಡುತ್ತಿರುವುದು ಕಂಡುಬರುತ್ತಿದ್ದರು “ಕಂಡರು ಕಾಣದ ಕುರುಡರಂತೆ” ವರ್ತಿಸುತ್ತಾ ಜೂಜಾಟಗಳಿಗೆ ಕಡಿವಾಣ ಹಾಕದೆ ಮೌನಕ್ಕೆ ಜಾರಿರುವ ತಾಲೂಕು ಆಡಳಿತದ ನಡೆಯಾದರು ಏನು?ಇನ್ನು,ಪರವಾನಿಗೆ ನೀಡುವ ಮುಂಚಿತವಾಗಿ ಕ್ರೀಡಾ ಇಲಾಖೆಯಿಂದ ನಿರೀಕ್ಷಾಪಣ ಪತ್ರವನ್ನು ಪಡೆಯದಿರುವ ರೀ ಕ್ರಿಯೇಶನ್ ಕ್ಲಬ್ ಗಳಿಗೆ ಅದ್ಯಾವ?ಹಿನ್ನಲೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಪರವಾನಿಗೆ ನೀಡಲು ಸಂಘಗಳ ನೋಂದಣಾಧಿಕಾರಿಗಳು ಮುಂದಾದರು ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಕೂಡಲೇ ಜಿಲ್ಲಾಧಿಕಾರಿಗಳು,ನೆಪ ಮಾತ್ರಕ್ಕೆ ಮನರಂಜನೆ ಆಟವಾಡುವ ಕಾರಣವನ್ನು ನೀಡಿ ಜಿಲ್ಲಾ ಸಂಘಗಳ ನೋಂದಣಿ ಕಾರ್ಯಲದಿಂದ ಪರವಾನಿಗೆ ಪಡೆದು,ಕಟ್ಟದಲ್ಲಿ ಯಾವುದೇ ಆಟದ ಮೈದಾನಗಳನ್ನು ನಿರ್ಮಾಣ ಮಾಡಿಕೊಳ್ಳದೆ ಸದಸ್ಯರನ್ನು ಒರೆತು ಪಡಿಸಿ ಅನ್ಯತ ವ್ಯಕ್ತಿಗಳನ್ನು ಕೂರಿಸಿಕೊಂಡು ಇಸ್ಪಿಟ್ ಜೂಜಾಟಕ್ಕೆ ಕುಮ್ಮಕ್ಕು ನೀಡುತ್ತಿರುವ ಜಿಲ್ಲೆಯ ಒಟ್ಟಾರೆ ರೀ ಕ್ರಿಯೇಶನ್ ಕ್ಲಬ್ ಗಳ ಪರವಾನಿಗೆಯನ್ನು ರದ್ದುಗೋಳಿಸಿ ಈಗಾಗಲೇ ಕ್ಲಬ್ ಗಳಲ್ಲಿ ಅನ್ಯತ ವ್ಯಕ್ತಿಗಳನ್ನು ಕೂರಿಸಿಕೊಂಡು ಚಟುವಟಿಕೆಗಳನ್ನು ನಡೆಸುವ ವೇಳೆಯಲ್ಲಿ ದಾವಣಗೆರೆ ನಗರದ ರೀ ಕ್ರಿಯೇಶನ್ ಕ್ಲಬ್ ನಲ್ಲಿ ನಡೆದಿರುವ ಮಾರಣಾಂತಿಕ ಹತ್ಯೆಯನ್ನು ಗಮನಕ್ಕೆ ತಗೆದುಕೊಳ್ಳುವ ಮೂಲಕ ರೀ ಕ್ರಿಯೇಶನ್ ಕ್ಲಬ್ ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಜಿಲ್ಲೆಯ ಪೊಲೀಸ್ ಇಲಾಖೆಗೆ ಸೂಚಿಸುವುದು ತಮ್ಮ ಕರ್ತವ್ಯವಾಗಿದೆ.