ರಾಣೆಬೆನ್ನೂರು
ಕಳೆದ ಸಂಚಿಕೆಯಲ್ಲಿ ರಾಣೆಬೆನ್ನೂರು ನಗರ ಪ್ರದೇಶದಲ್ಲಿರುವ ಕೆಲವು ವ್ಯಕ್ತಿಗಳ ದುರಾಸೆಯಿಂದ ದೇಶದಲ್ಲೆಡೆ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೇಟ್ ಪಂದ್ಯಾವಳಿಗಳು ಬೆಟ್ಟಿಂಗ್ ಜೂಜಾಟದ ಕಡೆಗೆ ಮುಖ ಮಾಡಿರುವ ಬಗ್ಗೆ ನಾಯಕನ ನಡುಗೆ ವಾರ ಪತ್ರಿಕೆಯು ಸುದ್ದಿ ಪ್ರಕಟಿಸುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸಕ್ಕೆ ಮುಂದಾಗಿತ್ತು.ಆದರೆ ಅದ್ಯಾಕೋ? ಗೊತ್ತಿಲ್ಲ ಜನಸಾಮನ್ಯರ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ ಈ ಬೆಟ್ಟಿಂಗ್ ಎಂಬ ಜೂಜಾಟಕ್ಕೆ ಕಡಿವಾಣ ಹಾಕಲು ಮುಂದೆ ಬಾರದೇ,ನಡೆಯುತ್ತಿರುವ ಜೂಜಾಟಕ್ಕೆ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ತಾಲೂಕಾಡಳಿತದ ದುರ್ನಡತೆಗೆ ಸಾಕ್ಷಿಯಾಗಿದೆ.
ಈಗಾಗಲೇ ರಾಣೆಬೆನ್ನೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ದಂಧೆಯೂ ತುಂಬಾ ಸದ್ದು ಮಾಡುತ್ತಿದ್ದು,ಈ ಜೂಜಾಟಕ್ಕೆ ಬಹುತೇಕ ವಿದ್ಯಾರ್ಥಿಗಳು ಮತ್ತು ಯುವಕರು ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ.ಇನ್ನು,ರಾಜ್ಯದ ಜನರು ಇಂಥಹ ಯಾವುದೇ ಜೂಜಾಟಗಳಿಗೆ ಬಲಿಯಾಗದೆ ನೆಮ್ಮದಿಯ ಜೀವನ ನಡೆಸಲು ಮುಂದಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ರಾಜ್ಯದಲ್ಲಿ ನಡೆಯುವ ಜೂಜಾಟಗಳಿಗೆ ನಿಷೇದಾಜ್ಞೆ ಜಾರಿಗೆ ತರುವ ಮೂಲಕ ಜೂಜಾಟಕ್ಕೆ ಮುಂದಾಗುವ ಅಥವಾ ಪ್ರಚೋದನೆ ನೀಡುವ ವ್ಯಕ್ತಿಗಳ ಮೇಲೆ ಮಾಡಿದ ತಪ್ಪಿಗನುಗೂಣವಾಗಿ ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕೈಗೊಳ್ಳುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ನೀಡಿರುತ್ತದೆ.ಆದರೆ ಜಿಲ್ಲೆಯ ಅದೆಷ್ಟೋ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಟ್ಕಾ,ಇಸ್ಪೀಟ್ ಜೂಜಾಟಗಳು ಕಣ್ಣೆದುರಲ್ಲೇ ನಡೆಯುತ್ತಿರುವುದು ಕಾಣುತ್ತಿದ್ದರು ಜಿಲ್ಲೆಯ ಪೊಲೀಸ್ ಇಲಾಖೆಯು ಅದ್ಯಾಕೆ?ಮೌನಕ್ಕೆ ಜಾರಿದೆ ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.
ಇದೀಗ ರಾಣೆಬೆನ್ನೂರು ನಗರ ಪ್ರದೇಶದ ಕೆಲವು ವ್ಯಕ್ತಿಗಳು ಐ.ಪಿ.ಎಲ್ ಕ್ರಿಕೇಟ್ ಪಂದ್ಯಾವಳಿಗಳನ್ನೇ ಬಂಡವಾಳ ಮಾಡಿಕೊಂಡು ಪೊಲೀಸ್ ಇಲಾಖೆಯ ಗಮನಕ್ಕೆ ಬಾರದಂತೆ ಯುವಕರಿಗೆ ಜೂಜಾಟಕ್ಕೆ ಪ್ರಚೋದನೆ ನೀಡುವ ಮೂಲಕ ಯುವಕರ ಮುಂದಿನ ಭವಿಷ್ಯಕ್ಕೆ ಕಂಟಕವಾಗಿರುವುದು ತಾಲೂಕಿನಲ್ಲೆಡೆ ಕೇಳಿ ಬರುತ್ತಿರುವ ಮಾತುಗಳು ಒಂದಡೆಯಾದರೆ,ಈ ಬೆಟ್ಟಿಂಗ್ ದಂಧೆಕೋರರ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಪಟ್ಟ ಠಾಣೆಯ ಪೊಲೀಸ್ ಅಧಿಕಾರಿಗಳ ಕರಿ ನೆರಳು ತಾಕಿದೆ ಎನ್ನುವುದು ಇನ್ನೊಂದಡೆಯಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿವೆ.ಅದು ಏನೇ ಇರಲಿ,ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು ಎಷ್ಟರ ಮಟ್ಟಿಗೆ ಸಂತ್ಯಾಂಶದಿಂದ ಕೂಡಿವೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.ಆದರೆ ಈ ಬೆಟ್ಟಿಂಗ್ ದಂಧೆಕೋರರು ತಾವು ಮಾಡುವ ಜೂಜಾಟದ ವಾಸನೆ ಯಾರಿಗೂ ತಿಳಿಯಬಾರದು ಎನ್ನುವ ಮುಂದಾಲೋಚನೆಯಿಂದ ತಮಗೆ ಆಪ್ತರಾಗಿರುವ ವ್ಯಕ್ತಿಗಳಿಗೆ ಮೊಬೈಲ್ ನಂಬರ್ ಗಳನ್ನು ನೀಡಿ ಆ ವ್ಯಕ್ತಿಗಳಿಂದ ಬರುವ ದೂರವಾಣಿ ಕರೆಯ ಮೂಲಕ ಬೆಟ್ಟಿಂಗ್ ಗೆ ಹಣವನ್ನು ಕಟ್ಟಿಸಿಕೊಳ್ಳುವುದು ಈ ದಂಧೆಕೋರರ ಜಾಣತನದ ದಂಧೆಯಾಗಿದೆ.ಇನ್ನು,ಪರಿಚಯವಿಲ್ಲದ ಅನಾಮಿಕ ವ್ಯಕ್ತಿ ಈ ಜೂಜುಕೋರರಿಗೆ ದೂರವಾಣಿ ಕರೆ ಮಾಡಿ ಬೆಟ್ಟಿಂಗ್ ಗೆ ಹಣವನ್ನು ಕಟ್ಟಿಕೊಳ್ಳುವಂತೆ ಸೂಚಿಸಿದರೆ ಯಾವ?ಬೆಟ್ಟಿಂಗ್ ನೀವು ಯಾರು?ನಮಗೆ ಯಾವ ಕ್ರಿಕೇಟ್ ಬೆಟ್ಟಿಂಗ್ ಗೊತ್ತಿಲ್ಲ ಪೋನ್ ಇಡಿ ಎಂದು ಹೇಳುತ್ತಾರೆ.ಈ ಬೆಟ್ಟಿಂಗ್ ದಂಧೆಕೋರರ ಜಾಣತನದ ಜೂಜಾಟದ ಶೈಲಿಗೆ ಮೆಚ್ಚಲೇಬೇಕು ಬಿಡಿ.
ಆದರೆ ನಮ್ಮ ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿದರೆ ಜೂಜುಕೋರರು ಎಷ್ಟೇ ಜಾಣತನದಿಂದ ಜೂಜಾಟಕ್ಕೆ ಮುನ್ನುಡಿ ಬರೆದಿದ್ದರು,ಆ ಮುನ್ನುಡಿಗೆ ಅಂತ್ಯ ಆಡದೆ ಮಾತ್ರ ಬಿಡಲ್ಲ ಎನ್ನುವುದನ್ನು ಅರ್ಥೈಹಿಸಿಕೊಳ್ಳುವುದು ಜೂಜುಕೋರರರಿಗೆ ಸೂಕ್ತವಾಗಿದೆ.ಇನ್ನು,ಇಷ್ಟೊಂದು ದೊಡ್ಡ ಮಟ್ಟದಲ್ಲಿ ತೆರೆಯ ಹಿಂದೆ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯ ಜವಾಬ್ದಾರಿ ಹೊತ್ತ ಆ ದ್ವಂಸಕೋರರ ಹೆಸರುಗಳ ಜಾಲವನ್ನು ತಿಳಿಯಲು ಹೊರಟ ಪತ್ರಿಕಾ ತಂಡಕ್ಕೆ ಸಾರ್ವಜನಿಕವಲಯದಲ್ಲಿ ಕೇಳಿ ಬಂದಿದ್ದು ಮಾತ್ರ ಅಚ್ಚರಿ ಮೂಡಿಸುವಂತ ಮಾತುಗಳು.ಈ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದ ಜವಾಬ್ದಾರಿ ಹೊತ್ತು ಮತ್ತೊಬ್ಬರ ಮನೆಯ ದೀಪ ಹಾರಿಸುವ ಎಲ್ಲಾ ದ್ವಂಸಕೋರರು ರಾಜಕೀಯ ನಂಟು ಹೊಂದಿರುವರೆ ಎನ್ನುವುದು.ಈಗಾಗಲೇ ನಗರ ಪ್ರದೇಶದಲ್ಲಿರುವ ದೀಲಿಪ್.ವೀರೇಶ್.ಸುನಿಲ.ಸಂತು.ರಘು ಎನ್ನುವ ಈ ವ್ಯಕ್ತಿಗಳು ತಮಗೆ ಬೇಕಾದ ವ್ಯಕ್ತಿಗಳ ಮೂಲಕ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಇನ್ನು ಪ್ರಪಂಚದ ವಿವೇಕತೆ ತಿಳಿಯದ ಯುವಕರನ್ನು ಬೆಟ್ಟಿಂಗ್ ಜೂಜಾಟಕ್ಕೆ ದುಮಕುವಂತೆ ಮಾಡುವುದರ ಜೊತೆಗೆ ಪರ್ಸೆಂಟೆಜ್ ಮಾದರಿಯಲ್ಲಿ ಹಣದ ದುರಾಶೆಯನ್ನು ತೋರಿಸಿ ತಾಲೂಕಿನ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎನ್ನುವ ಮಾತುಗಳು.ಅದು ಏನೇ ಇರಲಿ,ಜನಸಾಮಾನ್ಯರ ಜೀವನಕ್ಕೆ ಮಾರಕವಾಗುವ ಜೂಜಾಟಕ್ಕೆ ಕಡಿವಾಣ ಹಾಕಬೇಕಾದದ್ದು ಜಿಲ್ಲಾಡಳಿತದ ಕರ್ತವ್ಯವಾಗಿದೆ.
ಕೂಡಲೇ ರಾಣೆಬೆನ್ನೂರು ತಾಲೂಕಿನಾದ್ಯಂತ ವಿದ್ಯಾರ್ಥಿಗಳ ಮತ್ತು ಯುವಕರ ಬಾಳಿಗೆ ಮಾರಕವಾಗುವ ಈ ಐಪಿಎಲ್ ಬೆಟ್ಟಿಂಗ್ ಜೂಜಾಟಕ್ಕೆ ಮುಕ್ತಿ ನೀಡುವುದರ ಜೊತೆಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳಲ್ಲಿ ಆದೇಷ್ಟರ ಮಟ್ಟಿಗೆ ಸತ್ಯಾಂಶ ಅಡಗಿದೆ ಎನ್ನುವುದರ ಬಗ್ಗೆ ಸೂಕ್ತ ತನಿಖೆ ನಡೆಸುವುದರ ಮೂಲಕ ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳಿಗೆ ಸೂಚಿಸಿ ಜೂಜಾಟದಿಂದ ಉಜ್ಜಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಯುವಕರ ಭವಿಷ್ಯ ಕಾಪಾಡುವುದು ಶಾಸಕರ ಆದ್ಯ ಕರ್ತವ್ಯವಾಗಿದೆ.