ಹರಿಹರ:ಇಟ್ಯಲ್ಲಪ್ಪೋ ಗುರುಬಸವ ರೈತರ ಬಾಳಿಗೆ ಬೆಂಕಿ!

ರಾಜಕಾರಣದ ಚುಕ್ಕಾಣಿ ಹಿಡಿಯಲು ಮುಂದಾಗುವ ಪ್ರತಿಯೊಂದು ರಾಷ್ಟ್ರೀಯ ಪಕ್ಷಗಳು,ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬರುವುದು ಸರ್ವೇ ಸಾಮಾನ್ಯ.ಆದರೆ ರಾಜಕಾರಣಿಗಳ ರಾಜಕೀಯ ಶ್ಲೋಘಕ್ಕೆ ಕಿಂಚಿತ್ತು ಬೆಲೆ ನೀಡದೆ ಇಲ್ಲೊಬ್ಬ ಭ್ರಷ್ಟ ಅಧಿಕಾರಿ ಹಣದ ದುರಾಸೆಯಿಂದ ಕೃಷಿಗೆ ಯೋಗ್ಯವಾದ ಭೂಮಿಗಳ ನಾಶಕ್ಕೆ ಮುಂದಾಗುವುದರ ಮೂಲಕ ರೈತರ ಮುಂದಿನ ಉಜ್ಜಲ ಭವಿಷ್ಯಕ್ಕೆ ನಾಂಧಿ  ಆಡಲು ಹೋರಟಿರುವ ಘಟನೆಯು ಹರಿಹರ ತಾಲೂಕಿನಲ್ಲಿ ಕಂಡುಬಂದಿದೆ.ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿರುವ ಇಟ್ಟಿಗೆ ಭಟ್ಟಿಗಳ ಮಾಲೀಕರ ದುರಾಡಳಿತದಿಂದ ತಾಲೂಕಿನ ಅದೆಷ್ಟೋ ರೈತರು ಫಸಲಿಗೆ ಬಂದ ಬೆಳೆಗಳನ್ನು ನಾಶ ಮಾಡಿಕೊಳ್ಳುವುದರ ಜೊತೆಗೆ ಹುಳುಮೆ ಮಾಡಲು ಯೋಗ್ಯವಾದ ಭೂಮಿಯನ್ನೇ ನಾಶ ಮಾಡಿಕೊಳ್ಳುತ್ತಿರುವ ಹಿನ್ನಲೆಯನ್ನ ಅರಿತ ಹಲವು ಪತ್ರಿಕಾ ಮಿತ್ರರು,ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸುವುದರ ಮೂಲಕ ನಡೆಯುತ್ತಿರುವ ಅಕ್ರಮವನ್ನು ತಡೆಯುವಂತೆ ಜಿಲ್ಲಾಡಳಿತದ ಗಮನಕ್ಕೆ ತಂದಿರುವುದು ಸತ್ಯಕ್ಕೆ ಹತ್ತಿರವಾಗಿದೆ.

ಈ ಹಿಂದಿನ ದಿನಗಳಿಂದಲೂ ಹರಿಹರ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆ ಬರುವ ದಿಟೂರು.ಪಾಮೇನಹಳ್ಳಿ.ಸಾರಥಿ.ಗುತ್ತೂರು.ಚಿಕ್ಕಬಿದರೆ.ವಟ್ನಹಳ್ಳಿ ಗ್ರಾಮಗಳಲ್ಲಿ ಕೃಷಿಗೆ ಯೋಗ್ಯವಾದ ಜಮೀನುಗಳ ಭೂಮಿಯೋಳಗೆ ಅಡಗಿರುವ ಫಲವತ್ತತೆಯ ಮಣ್ಣನ್ನು ಅಗೆದು ರಾಜಾರೋಷವಾಗಿ ಯಾವೊಬ್ಬ ಅಧಿಕಾರಿಗೂ ಭಯ ಪಡದೇ ಕಮರ್ಷಿಯಲ್ ಅಂದರೆ ಇಟ್ಟಿಗೆಗಳ ತಯಾರಿಕಾ ಉದ್ಯಮಕ್ಕೆ ಸಾಗಾಟ ಮಾಡುತ್ತಿರುವುದು ಇಲ್ಲಿನ ತಾಲೂಕಾಡಳಿತದ ದುರಾಡಳಿತಕ್ಕೆ ಸಾಕ್ಷಿಯಾಗಿದೆ.ಭೂಸುದಾರಣಾ ಕಾಯ್ದೆಯ ಕಾನೂನಾತ್ಮಕವಾಗಿ ರೈತರ ಕೃಷಿಗೆ ಅವಶ್ಯಕತೆಯಿರುವ ಭೂಮಿಯಲ್ಲಿರುವ ಮಣ್ಣನ್ನು ಅಗೆದು ಸಾಗಾಟ ಮಾಡುವ ಅವಕಾಶವಿಲ್ಲದಿರುವ ಅಂಶವನ್ನು ಮನಗಂಡ ಪತ್ರಿಕಾ ತಂಡವು ಕೃಷಿಗೆ ಯೋಗ್ಯವಾದ ಭೂಮಿಯಯಲ್ಲಿರುವ ಮಣ್ಣನ್ನು ಗಣಿಗಾರಿಕೆ ಮಾಡಲು ಅದ್ಯಾವ?ಕಾನೂನಿನಲ್ಲಿ ಅವಕಾಶವಿದೆ,ಅದು ಹೇಗೆ?ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನಿಡಿದ್ದೀರಾ ಎಂದು ಜಿಲ್ಲೆಯ ಗಣಿ ಅಧಿಕಾರಿಗಳನ್ನು ಪ್ರಶ್ನಿಸಲು ಮುಂದಾದಗ,ಕಂದಾಯ ಇಲಾಖೆಯಿಂದ ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ನೀಡಿರುವ ನಿರೀಕ್ಷಪಣಾ ಪತ್ರದ ಮೇರೆಗೆ ಗಣಿಗಾರಿಕೆ ಮಾಡಲು ಅನುಮತಿ ನಿಡಿದ್ದೇವೆ ಎನ್ನುವ ಮಾಹಿತಿಯನ್ನು ಗಣಿ ಇಲಾಖೆಯ ಅಧಿಕಾರಿಗಳು ಪತ್ರಿಕಾ ತಂಡಕ್ಕೆ ಹಂಚಿಕೊಂಡಿದ್ದು ಸತ್ಯಕ್ಕೆ ಹತ್ತಿರ.ಹೌದು!ಈ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ  ಭೂಸುದಾರಣೆ ಕಾಯ್ದೆಯಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡುವುದು ಮಾತ್ರ ಗಣಿ ಇಲಾಖೆಯ ಕರ್ತವ್ಯ.ಆದರೆ ಭೂಮಿ ಕೃಷಿಗೆ ಯೋಗ್ಯವೋ ಅಥವಾ ಯೋಗ್ಯವಲ್ಲವೋ ಎನ್ನುವುದನ್ನು ನಿರ್ಧರಿಸುವುದು ಕಂದಾಯ ಇಲಾಖೆ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ.

ಇನ್ನು,ತಾಲೂಕಿನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಾಲೂಕ್ ದಂಡಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಗುರುಬಸವರಾಜ್ ಎಂಬ ಅಧಿಕಾರಿಯು ಸೇವೆಯಲ್ಲಿ ಜಾಣ್ಮೆಯ ಭ್ರಷ್ಟತೆಯ ಸಾಕ್ಷಿಪೂರಕವಾಗಿ,ರೈತರು ಜಮೀನುಗಳಲ್ಲಿರುವ ತಗ್ಗು ಪ್ರದೇಶಗಳಿಗೆ ಮಣ್ಣನ್ನು ಹಾಕಿ ಸಮತಟ್ಟು ಮಾಡಿಕೊಳ್ಳಬೇಕು,ಒಂದು ವೇಳೆ ಸಮತಟ್ಟು ಮಾಡಿದ ನಂತರದಲ್ಲಿ ಜಮೀನಿಗೆ ಹೆಚ್ಚಿಗೆಯಾದ ಮಣ್ಣನ್ನು ಸಾಗಾಟ ಮಾಡಲು ಸರ್ಕಾರವು ನಿಗಧಿ ಪಡಿಸಿದ ತೇರಿಗೆಯ ಮೊತ್ತವನ್ನು ಸರ್ಕಾರದ ಖಜಾನೆಗೆ ಭರಿಸಿ ಮಣ್ಣನ್ನು ಸಾಗಾಟ ಮಾಡಬೇಕು ಇಲ್ಲವಾದರೆ ನಡೆದಿರುವ ಅಕ್ರಮ ಸಾಗಾಟದ ಮಣ್ಣಿಗೆ ಅನುಗೂಣವಾಗಿ ದಂಡವನ್ನು ವಿಧಿಸಲಾಗುತ್ತದೆ ಎನ್ನುವ ಕಠಿಣ ಸಾಲುಗಳನ್ನು ಅನುಮತಿ ಪತ್ರದಲ್ಲಿ ಉಲ್ಲೇಖಿಸಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಸೂಚಿಸಿರುವುದು ಪತ್ರದ ಸಾಲುಗಳಲ್ಲಿ ಉಲ್ಲೇಖವಾಗಿರುತ್ತದೆ.ಈ ದಂಡಾಧಿಕಾರಿಗಳು ಅನುಮತಿ ಪತ್ರದಲ್ಲಿ ಉಲ್ಲೇಖಿಸಿರುವ ಸಾಲುಗಳು ಕಾನೂನಾತ್ಮಕವಾಗಿ ಕೂಡಿರುವುದು ವಾಸ್ತವದ ಸಂಗತಿ.ಆದರೆ,ಉಲ್ಲೇಖಿಸಿರುವ ಸಾಲುಗಳನ್ನು ಗಾಳಿಗೆ ತೂರಿ ಬಹುತೇಕ ಮಣ್ಣುಚೋರರು ರೈತರ ಹೆಸರಿನ ಮೇಲೆ ಅನುಮತಿ ಪಡೆದುಕೊಂಡು ಜಮೀನುಗಳಲ್ಲಿ ಯಾವುದೇ ಸಮತಟ್ಟು ಮಾಡದೆ,ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದರು “ಕಂಡರು ಕಾಣದ ಕುರುಡನಂತೆ” ವರ್ತಿಸುತ್ತಿರುವ ಈ ದಂಡಾಧಿಕಾರಿಯ ಹಿಂದಿನ ಮರ್ಮವಾದರೂ ಏನು?ರೈತರ ಸಂತತಿ ಉಳವಿಗಾಗಿ ಶ್ರಮೀಸಬೇಕಾದ ಈ ಅಧಿಕಾರಿಯೇ,ಸಂತತಿಯ ನಾಶಕ್ಕೆ ಮುಂದಾಗುತ್ತಿರುವುದನ್ನು ಗಮನಿಸಿದರೆ ಎಲ್ಲೋ ಈ ಇಟ್ಟಿಗೆ ಭಟ್ಟಿಗಳ ಮಾಲೀಕರು ನೀಡುವ ಪ್ರಸಾದಕ್ಕೆ ಶರಣನಾಗಿ ದಂಡಾಧಿಕಾರಿ ಸೇವೆಯನ್ನೆ ಮರೆತು ರೈತರ ಮತ್ತು ಭಟ್ಟಿಗಳ ಮಾಲೀಕರ ಮದ್ಯವರ್ತಿಯ ಸೇವೆಗೆ ಮುಂದಾಗಿರುವಂತೆ ತೋರುತ್ತಿದೆ.

ಈಗಾಗಲೇ ರಾಜ್ಯ ಸರ್ಕಾರವು ರೈತರ ಮುಂದಿನ ಭವಿಷ್ಯವನ್ನು ಉಜ್ಜಲಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ರೈತರಿಗೆ ಅನುಕೂಲಕರವಾಗುವ ಹತ್ತಾರು ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಸೂಕ್ತ ರೀತಿಯಲ್ಲಿ ರೈತರಿಗೆ ಜಾರಿಗೊಳಿಸಿರುವ ಯೋಜನೆಗಳನ್ನು ದೋರಕಿಸಿ ಕೋಡುವ ನಿಟ್ಟಿನಲ್ಲಿ ಶ್ರಮೀಸುತ್ತಿದೆ.ಆದರೆ ಹರಿಹರ ತಾಲೂಕು ದಂಡಾಧಿಕಾರಿಯಾಗಿರುವ ಗುರುಬಸವರಾಜ್ ಎನ್ನುವ ಭ್ರಷ್ಟ ಅಧಿಕಾರಿ,ಸರ್ಕಾರ ನೀಡುವ ಸಂಬಳಕ್ಕೆ ರೈತರಿಗೆ ಉತ್ತಮ ಸೇವೆ ಮಾಡುವ ಬದಲು ರೈತರ ಜೀವನಕ್ಕೆ ಆಸರೆಯಾಗಿರುವ ಕೃಷಿ ಜಮೀನುಗಳಲ್ಲಿರುವ ಫಲವತ್ತತೆಯ ಮಣ್ಣನ್ನು ಇಟ್ಟಿಗೆ ಭಟ್ಟಿಗಳಲ್ಲಿ ಇಟ್ಟಿಗೆಗಳನ್ನು ತಯಾರಿಸುವ ಉದ್ಯಮಕ್ಕೆ ಸಾಗಾಟ ಮಾಡಲು ಸಾಥ್ ನೀಡುತ್ತಿರುವುದು ಅದೇಷ್ಟರ ಮಟ್ಟಿಗೆ ಸರಿ? ಎನ್ನುವುದನ್ನು ಅರ್ಥೈಹಿಸಿಕೊಳ್ಳುವುದು ಶಾಸಕರಿಗೆ ಅನಿವಾರ್ಯವಾಗಿದೆ.ಕೂಡಲೇ ಅನಧಿಕೃತವಾಗಿ ನಿರ್ಮಾಣವಾಗಿರುವ ಇಟ್ಟಿಗೆ ಭಟ್ಟಿಗಳ ಉದ್ಯಮದಿಂದ ರೈತರ ಜಮೀನುಗಳಿಗೆ ಕಂಟಕವಾಗುತ್ತಿರುವುದನ್ನು ಅರಿತು,ಕೃಷಿಗೆ ಯೋಗ್ಯವಾದ ಜಮೀನುಗಳಲ್ಲಿರುವ ಫಲವತ್ತತೆಯ ಮಣ್ಣನ್ನು ಅಗೆಯಲು ಸಾಥ್ ನೀಡುತ್ತಿರುವ ಇಂಥಹ ಭ್ರಷ್ಟ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತುಗೋಳಿಸಿ,ಮುಂದೆಂದೂ ರೈತರ ಜಮೀನುಗಳಲ್ಲಿರುವ ಫಲವತ್ತತೆಯ ಮಣ್ಣನ್ನು ಗಣಿಗಾರಿಕೆ ಮಾಡಲು ಅವಕಾಶ ನೀಡದಂತೆ ಗಣಿ ಇಲಾಖೆಗೆ ಆದೇಶಿಸಿ ಜಿಲ್ಲೆಯ ರೈತರ ಸಂತತಿ ಉಳಿಸುವುದು ಕಂದಾಯ ಸಚಿವರಿಗೆ ಅನಿವಾರ್ಯವಾಗಿದೆ.

Spread the love

Leave a Reply

Your email address will not be published. Required fields are marked *