ಕಳೆದ ಮಾರ್ಚ್ ತಿಂಗಳ ಏಳನೇ ತಾರೀಖಿನಂದು ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅಕ್ರಮ ಚಟುವಟಿಕೆಗಳ ಬಗ್ಗೆ “ಅಕ್ರಮ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಹರನಗಿರಿ ಗ್ರಾಮ ಪಂಚಾಯತಿ”ಎಂಬ ಶೀರ್ಷಿಕೆಯಡಿಯಲ್ಲಿ ನಾಯಕನ ನಡುಗೆ ವಾರ ಪತ್ರಿಕೆಯು ಈ ಗ್ರಾಮ ಪಂಚಾಯತಿಯ ಆವರಣದಲ್ಲಿ ಪಂಚಾಯತಿಯ ಸಿಬ್ಬಂದಿಗಳು ಚಿಕ್ಕನ್,ಮಟ್ಟನ್ ಬೋಜನದ ಮುಖಾಂತರ ಮೋಜು ಮಸ್ತಿಗೆ ಮುಂದಾಗಿದ್ದು ಮತ್ತು ನೀರು ಗಂಟೆಯ ಸಿಬ್ಬಂದಿ ಕರ್ತವ್ಯ ಸಮಯದಲ್ಲಿ ಕಛೇರಿಯ ಒಳಭಾಗದಲ್ಲಿ ನಿದ್ರೆಗೆ ಜಾರಿರುವ ದೃಶ್ಯಗಳ ಆಧಾರದ ಮೇರೆಗೆ ಸುದ್ದಿ ಪ್ರಕಟಿಸುವುದರ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಿತ್ತು.
ಸುದ್ದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕರ್ತವ್ಯ ಸಮಯದಲ್ಲಿ ಮೋಜು ಮಸ್ತಿಗೆ ಮುಂದಾದ ನಿಂಗಪ್ಪ ಹೊಳೆಸ್ವಾಮ್ಯಪ್ಪ ಹೌಂಸಿ ಹಾಗೂ ಮೌನೇಶ ವಿ ಅರ್ಕಾಚಾರಿ ಈ ವ್ಯಕ್ತಿಗಳು ಕರ್ತವ್ಯದ ಸಮಯದಲ್ಲಿ ಮಾಂಸದೂಟ,ಮೋಜು ಮಸ್ತಿ,ಅಸಭಯವರ್ತನೆ ಹಾಗೂ ಕರ್ತವ್ಯ ಲೋಪದ ಬಗ್ಗೆ ಸೂಕ್ತ ಕ್ರಮ ಕೈಗೊಂಡಿರುವುದು ಅಧಿಕಾರಿಗಳ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ.ಈಗಾಗಲೇ ಹರನಗಿರಿ ಪಂಚಾಯತಿ ಆವರಣದಲ್ಲಿ ನಡೆದಿರುವ ಘಟನೆಯ ಕುರಿತು ನಾಯಕನ ನಡುಗೆ ವಾರ ಪತ್ರಿಕೆಯು ಸುದ್ದಿ ಪ್ರಕಟಗೊಳ್ಳುಸುವುದರ ಮೂಲಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿರುತ್ತದೆ.ಪತ್ರಿಕೆಯಲ್ಲಿ ಮತ್ತು ಹೋರಾಟಗಾರರ ದೂರಿನ ಮೇರೆಗೆ ಪಂಚಾಯತಿ ಆವರಣದಲ್ಲಿ ನಡೆದಿರುವ ಘಟನೆಯ ಸಾರಾಂಶವನ್ನು ನೀಡುವಂತೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯತಿ ಗ್ರಾಮಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ನ್ನು ನೀಡಿರುತ್ತಾರೆ.ಆದರೆ ನಡೆದಿರುವ ಘಟನೆಯನ್ನು ಮರೆ ಮಾಚುವ ಉದ್ದೇಶದಿಂದ ತಪ್ಪು ಮಾಹಿತಿಯನ್ನು ನೀಡಿದ್ದು,ಸದರಿ ಪಂಚಾಯತ್ 113 ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವೂ ಪಂಚಾಯತಿ ಅಧ್ಯಕ್ಷಕರಿಗೆ ಇರುವ ಹಿನ್ನಲೆಯಲ್ಲಿ ನಿಂಗಪ್ಪನ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ.
ಪಂಚಾಯತಿ ಕಾರ್ಯಾಲದಲ್ಲಿ ಬಿಲ್ ಕಲೆಕ್ಟರ್ ಆಗಿರುವ ನಿಂಗಪ್ಪ ಎನ್ನುವ ವ್ಯಕ್ತಿಯಿಂದ ಪಂಚಾಯತಿ ಆಡಳಿತಕ್ಕೆ ಕಳಂಕ ತರುವಂತ ಕೆಲಸವಾಗಿದೆ ಮುಂದಿನ ದಿನಗಳಲ್ಲಿ ಈ ವ್ಯಕ್ತಿಯು ಅಧಿಕಾರದಲ್ಲಿ ಮುಂದುವರೆದಲ್ಲಿ ಇನ್ನೆಂಥಹ ಅನಾವುತಗಳು ಸಂಭವಿಸಬಹುದು ಎನ್ನುವ ಮುಂದಾಲೋಚನೆಯಿಂದ ಪಂಚಾಯತಿಯ ಅಧ್ಯಕ್ಷರಾಗಿರುವ ರೇಣುಕಾ ಪುಟ್ಟಪ್ಪನವರ್ ಎನ್ನುವ ಮಹಿಳೆಯು ಆವರಣದಲ್ಲಿ ಮೋಜು ಮಾಸ್ತಿ ಮಾಡಿದ ನಿಂಗಪ್ಪ ಹಂಸಿಯ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ.ಅಧ್ಯಕ್ಷರ ಸೂಚನೆಯ ಮೇರೆಗೆ ದಿನಾಂಕ 11-04-2025 ರಿಂದ ಸೇವೆಗೆ ಹಾಜರಾಗದಂತೆ ನಿಂಗಪ್ಪ ಹಂಸಿಗೆ ಆದೇಶಿಸೀರುತ್ತಾರೆ ಅಧ್ಯಕ್ಷರಾಗಿರುವ ರೇಣುಕಾ ಪುಟ್ಟಣ್ಣನವರ ದಿಟ್ಟ ನಿರ್ಧಾರಕ್ಕೆ ಪತ್ರಿಕಾ ತಂಡವು ಮತ್ತು ಗ್ರಾಮದ ಜನರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.