ಕೂಲಿ ಕಾರ್ಮಿಕರ ನೆರವಿಗೆ ಬಾರದ ಸರ್ಕಾರದ ಯೋಜನೆಗಳು

ದೀನೆ,ದಿನೇ ಜಗತ್ತು ಬೆಳೆಯುತ್ತಲೇ ಬರುತ್ತಿದೆ.ಇದೆ ನಿಟ್ಟಿನಲ್ಲಿ ಜಗತ್ತಿನ ಅಗಲಕ್ಕೂ ಅನೇಕ ರೀತಿಯ ವೈವಿದ್ಯಮಯ ಕಟ್ಟಡಗಳು ನಿರ್ಮಾಣಗೊಳ್ಳುತ್ತಲೇ ಬರುತ್ತಿವೆ.ಆದರೆ ಈಗಿನ ದಿನಗಳಲ್ಲಿ ಮನೆ ಅಥವಾ ಇನ್ನಿತರೇ ಕಟ್ಟಡಗಳ ನಿರ್ಮಾಣ ಮತ್ತು ವಿವಿಧ ಕೆಲಸಗಳಿಗೆ ಕೂಲಿ ಕಾರ್ಮಿಕರನ್ನು ಹುಡುಕುವುದು ಮಾಲೀಕರಿಗೆ ಇನ್ನಿಲ್ಲದ ಕಷ್ಟದ ಸಂಗತಿಯಾಗಿದೆ.ಈಗಾಗಲೇ ಜಗತ್ತಿನ ವೈಭೀಕರಣ ಬೆಳೆಯುತ್ತಿರುವ ಬೆನ್ನಲ್ಲೇ ಕೂಲಿ ಕಾರ್ಮಿಕರು ಸಹ ವೈಭೀಕರಣ ಕಡೆ ಒಲವನ್ನು ತೋರುತ್ತಾ ಜಗತ್ತಿಗೆ ಅನುಗೂಣವಾಗಿ ಬದುಕುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.ಕೂಲಿ ಕಾರ್ಮಿಕರ ಇಂಥಹ  ನಡೆಯಿಂದ ಕೂಲಿ ಕಾರ್ಮಿಕರ ಸಂತತಿಯು ಸಹ ಕ್ಷೀಣಿಸುತ್ತಾ ಬರುತ್ತಿರುವುದು ಎಲ್ಲರಿಗೂ ಗೋತ್ತಿರುವ ವಿಷಯ.ಅದೆಷ್ಟೋ ಜನರು ಮನೆ ನಿರ್ಮಾಣ ಮಾಡಿಕೊಳ್ಳಲು ಕೂಲಿ ಕಾರ್ಮಿಕರ ಕೋರತೆಯಿಂದ ಪಡುತ್ತಿರುವ ಕಷ್ಟದ ಪರಿಸ್ಥಿತಿಯನ್ನು ಅರಿತ ಸರ್ಕಾರವು ಅಳಿವಿನಂಚಿನಲ್ಲಿರುವ ಕೂಲಿ ಕಾರ್ಮಿಕರ ಸಂತತಿ ಉಳಿಸುವ ಉದ್ದೇಶದಿಂದ ಕಾರ್ಮಿಕರಿಗೆ ಜೀವನಕ್ಕೆ ಅನುಕೂಲವಾಗುವಂತೆ ಸರ್ಕಾರದ ಅಧೀನದಲ್ಲಿರುವ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಕೂಲಿ ಕಾರ್ಮಿಕರ ನೇರವಿಗೆ ಬಂದಿರುವುದು ಸಂತಸದ ವಿಷಯ.

ಇನ್ನು,ಸರ್ಕಾರವು ರೂಪಿಸಿರುವ ಯೋಜನೆಗಳನ್ನು ಪಡೆಯಬೇಕಾದರೆ ಕಾರ್ಮಿಕ ಕಾರ್ಡನ್ನು ಹೊಂದುವುದು ಕಡ್ಡಾಯವಾಗಿರುತ್ತದೆ.ಆದರೆ ಬಹುತೇಕ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಕಾರ್ಡಿನ ಯೋಜನೆಯ ಮಹತ್ವ ತಿಳಿಯದೆ ವಂಚಿತರಾಗಿದ್ದರೆ,ಕಾರ್ಡ್ ಪಡೆಯುವ ಪಲಾನುಭವಿಗೆ ಸರ್ಕಾರ್ವು ಸೂಚಿಸಿರುವ ಷರತ್ತುಗಳನ್ನು ಪೂರೈಹಿಸಲು ಸಾಧ್ಯವಾಗದೆ ವಂಚಿತರಾಗಿದ್ದಾರೆ.ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಡನ್ನು ಪಡೆಯಬೇಕಾದ ಪಲಾನುಭವಿಯು ಸರ್ಕಾರವು ಸೂಚಿಸಿರುವ ಎಲ್ಲಾ ಮಾನದಂಡನೆಗಳನ್ನು ಪೂರೈಹಿಸಲು ಸಮರ್ಥನಾಗಿರುತ್ತಾನೆ.ಆದರೆ ಉದ್ಯೋಗ ಪ್ರಮಾಣ ಪತ್ರವನ್ನು ಪೂರೈಹಿಸಲು ಅಸಮರ್ಥನಾಗುತ್ತಾನೆ.ಏಕೆಂದರೆ,ಕೆಲಸ ಮಾಡುವ ಕೂಲಿ ಕಾರ್ಮಿಕ ಮತ್ತು ಮಾಲೀಕನ ನಡುವೆ ನಡೆಯುವ ಯಾವುದೊ ಸಣ್ಣ ಪುಟ್ಟ ಬಿನ್ನಾಭಿಪ್ರಾಯಗಳಿಂದ ಕಾರ್ಮಿಕನನ್ನು ಕೆಲಸದಿಂದ ತಗೆದು ಹಾಕಿದರೆ,ಆ ಕೂಲಿ ಕಾರ್ಮಿಕ ಯಾರ ಹತ್ತಿರ ಕೆಲಸ ಮಾಡುತ್ತಿರುವ ಅನುಮತಿ ಪತ್ರವನ್ನು ಪಡೆಯಬೇಕು?ಒಂದು ವೇಳೆ ಮನೆ ಅಥವಾ ಇನ್ನಿತರೆ ಕಟ್ಟಡಗಳನ್ನು ಕಟ್ಟುವ ವೇಳೆಯಲ್ಲಿ ಅನಾವುತಗಳು ಸಂಭವಿಸದರೆ ಆ ಕೂಲಿ ಕಾರ್ಮಿಕನ ಸಂಸಾರದ ಜವಾಬ್ದಾರಿ ಹೋರುವವರು ಯಾರು ಎನ್ನುವುದನ್ನು ಅರಿತು ಸರ್ಕಾರವು ಮನೆ ಕಟ್ಟುವ ಅಥವಾ ಇನ್ನಿತರೆ ಕೆಲಸಗಳನ್ನು ಮಾಡುವ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಹಾಗೂ ಸಂಸಾರ ನಡೆಸಲು ಅನುಕೂಲಕರವಾಗುವಂತೆ ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಅಳಿವಿನಂಚಿನಲ್ಲಿರುವ ಕಾರ್ಮಿಕರ ಸಂತತಿ ಉಳಿಸುವುದು ಅವಶ್ಯಕವಾಗಿದೆ.

Spread the love

Leave a Reply

Your email address will not be published. Required fields are marked *