ಹರಪನಹಳ್ಳಿ
ಜನರನ್ನು ಉದ್ದಾರ ಮಾಡುತ್ತೇವೆ ಎನ್ನುವ ಪಣವನ್ನು ತೊಟ್ಟು ಸಂವಿಧಾನದ ಶಾಸಕಾಂಗದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜಕಾರಣಿಗಳು ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎನ್ನುವ ಕಾರ್ಯದ ಮುಖಾಂತರ ಸಂವಿಧಾನದ ಕಾರ್ಯಾಂಗದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳು ಸರ್ಕಾರದ ಖಜಾನೆಗೆ ನಷ್ಟ ಉಂಟು ಮಾಡುವ ನಿಟ್ಟಿನಲ್ಲಿ ಅಕ್ರಮವನ್ನೇ ಎಸಗುತ್ತಿರುವ ಅಕ್ರಮ ದಂಧೆಕೋರರ ನಡುವೆ ಬದುಕುತ್ತಿರುವುದು ನಮ್ಮ ಜನಸಾಮಾನ್ಯರ ದುಸ್ಥಿತಿಯಾಗಿದೆ.ಈ ಹಿಂದಿನ ದಿನಮಾನಗಳಲ್ಲಿ ದೇಶದಲ್ಲಿ ಆವರಿಸಿದ ಬರಗಾಲದ ಬಿತಿಯಿಂದ ಜನರು ಕೆಲಸ ಕಾರ್ಯವಿಲ್ಲದೆ ತಾವು ವಾಸಿಸುವ ಪ್ರದೇಶವನ್ನು ತೋರೆದು ಕೆಲಸವನ್ನು ಆದರಸಿ ಮತ್ತೊಂದು ಪ್ರದೇಶಕ್ಕೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಆಗಿನ ಸರ್ಕಾರವು ನರೇಗಾ ಎಂಬ ಯೋಜನೆಯನ್ನು ಜಾರಿಗೋಳಿಸುವುದರ ಮೂಲಕ ಜಾರಿಗೆ ತಂದಿರುವ ಯೋಜನೆಯನ್ನು ಪರಿಪೂರ್ಣವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗಳಿಗೆ ನೀಡಿರುತ್ತದೆ.ಇನ್ನೂ ಈ ಯೋಜನೆಯ ಮೂಲ ಉದ್ದೇಶ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮದ ವ್ಯಕ್ತಿಗಳು ಪಂಚಾಯತಿ ವ್ಯಾಪ್ತಿಗೆ ಬರುವ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಗಳಲ್ಲಿ ಕೂಲಿ ಕೆಲಸದ ರೂಪದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸರ್ಕಾರ ನಿಗಧಿ ಪಡಿಸಿದ ಕೂಲಿ ಮೊತ್ತವನ್ನು ಪಡೆಯುವುದು.ಇನ್ನು,ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ನರೇಗಾ ಯೋಜನೆಯ ಕಾಮಗಾರಿಯು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿದೆ ಎನ್ನುವುದನ್ನು ಪರಿಶೀಲನೆ ಮಾಡುವುದು ಪಂಚಾಯತಿಗೆ ಸಂಬಂಧಿಸಿದ ತಾಂತ್ರಿಕ ಇಂಜಿನಿಯರ್ ಕರ್ತವ್ಯವಾದರೆ,ಕಾಮಗಾರಿಯಲ್ಲಿ ಕೆಲಸದ ನೀಮಿತ್ತ ತೊಡಗಿಕೊಂಡವರ ಕೂಲಿಯ ಲೆಕ್ಕಚಾರ ಪರಿಶೀಲಿಸುವುದು ಗ್ರಾಮಾಭಿವೃದ್ಧಿ ಅಧಿಕಾರಿಯ ಕರ್ತವ್ಯವಾಗಿರುತ್ತದೆ.ಈ ಇಬ್ಬರು ಅಧಿಕಾರಿಗಳು ಪರಿಶೀಲನೆ ಮಾಡಿದ ತದನಂತರದಲ್ಲಿ ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲಿಸಿ ಕಾಮಗಾರಿಗೆ ತಗಲುವ ಕಾರ್ಮಿಕರ ಕೂಲಿ ಹಣವನ್ನು ಬಿಡುಗಡೆಗೋಳಿಸುವುದು ಸಂಬಂಧಪಟ್ಟ ಪಂಚಾಯತಿಯ ಅಧ್ಯಕ್ಷ,ತಾಂತ್ರಿಕ ಇಂಜಿನಿಯರ್ ಮತ್ತು ಗ್ರಾಮಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.ಆದರೆ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಬಳಿಗನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರನ್ನು ಬಳಸದೆ ಜೇಸಿಬಿಗಳನ್ನು ಬಳಸಿ ಕಾಮಗಾರಿಯನ್ನು ನಿರ್ಮಾಣ ಮಾಡುತ್ತಿರುವುದು ಪಂಚಾಯತಿ ಅಧಿಕಾರಿಗಳ ಭ್ರಷ್ಟತೆಗೆ ಸಾಕ್ಷಿಯಾಗಿದೆ.
ಇನ್ನು,ಮೈದೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬಳಿಗನೂರು ಎಂಬ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ನಮ್ಮ ಹೊಲ ನಮ್ಮ ದಾರಿ ಎನ್ನುವುದರ ಮೂಲಕ ಬಳಿಗನೂರು ಗ್ರಾಮದ ಮೈದೂರು ಮುಖ್ಯ ರಸ್ತೆಯಿಂದ ಹಳ್ಳದವರೆಗೆ ಸುಮಾರು ಐದು ಲಕ್ಷ ಅಂದಾಜು ಮೊತ್ತದಲ್ಲಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಯನ್ನು ಪಂಚಾಯತಿಯ ಅಧಿಕಾರಿಗಳು ಕೈಗೊಂಡಿರುತ್ತಾರೆ.ಸರ್ಕಾರದನ್ವಯ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣವಾಗುವ ಕಾಮಗಾರಿಗಳಲ್ಲಿ ಯಾವುದೇ ಯಂತ್ರೋಪಕರಣಗಳನ್ನು ಬಳಸದೆ ಕೇವಲ ಕೂಲಿ ಕಾರ್ಮಿಕರನ್ನು ಬಳಸಿ ಕಾಮಾಗಾರಿಗಳನ್ನು ನಿರ್ಮಾಣ ಮಾಡುವುದು ನರೇಗಾ ಯೋಜನೆಯ ಸಿದ್ದಾಂತವಾಗಿರುತ್ತದೆ.ಆದರೆ ಈ ಪಂಚಾಯತಿಯ ವ್ಯಾಪ್ತಿಗೆ ಬರುವ ಬಳಿಗನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ಕಾಮಗಾರಿಯಲ್ಲಿ ಕೂಲಿ ಕೆಲಸಕ್ಕೆ ಜನರನ್ನು ಬಳಸದೆ ಜೇಸಿಬಿಗಳನ್ನು ಬಳಸಿ ಕಾಮಗಾರಿಯನ್ನು ನಿರ್ಮಾಣ ಮಾಡುತ್ತಿರುವುದು ಕಾಣುತ್ತಿದ್ದರು ಕಂಡರು ಕಾಣದ ಕುರುಡನ ರೀತಿಯಲ್ಲಿ ವರ್ತಿಸುತ್ತಿರುವ ಗ್ರಾಮಭಿವೃದ್ಧಿ ಅಧಿಕಾರಿಯ ಕರ್ತವ್ಯವಾದರೂ ಏನು?ಇನ್ನೂ ನಿರ್ಮಾಣವಾಗುತ್ತಿರುವ ರಸ್ತೆಯ ಕಾಮಗಾರಿಯ ಗುಣಮಟ್ಟ ಪರೀಕ್ಷಿಸುವ ಜವಾಬ್ದಾರಿ ಹೊತ್ತಿರುವ ತಾಂತ್ರಿಕ ಇಂಜಿನಿಯರ್ ಗೆ ಕಾಮಗಾರಿಯಲ್ಲಿ ಜೇಸಿಬಿಗಳನ್ನು ಬಳಸಿ ಕಾಮಗಾರಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಪತ್ರಿಕೆಯು ಪ್ರಶ್ನೆಸಿದಾಗ ಈ ಅಧಿಕಾರಿಯೂ ನಮಗೆ ಮಾಹಿತಿ ಬಂದಿದೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನಿಡಿದ್ದೇವೆ ನಡೆಯುತ್ತಿರುವ ಅಕ್ರಮದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿ ಅದ್ಯಾಕೆ ಕಾಮಗಾರಿಗೆ ತಗಲುವ ಮೊತ್ತವನ್ನು ಕೂಲಿ ಕಾರ್ಮಿಕರ ಖಾತೆಗೆ ವರ್ಗಾಹಿಸಲು ಮುಂದಾಗುತ್ತಿದ್ದಾರೋ?ಗೊತ್ತಿಲ್ಲ.ಒಟ್ಟಾರೆ ಪಂಚಾಯತಿಯ ಮುಕ್ಕಣ್ಣರು ಜೋತೆಗೂಡಿ ರಸ್ತೆಯ ನಿರ್ಮಾಣದ ಜವಾಬ್ದಾರಿ ಹೊತ್ತ ವ್ಯಕ್ತಿಯ ಹತ್ತಿರ ಪರ್ಸೆಂಟ್ ಲೆಕ್ಕದಲ್ಲಿ ಪ್ರಸಾದವನ್ನು ಪಡೆದು ಕೂಲಿ ಕಾರ್ಮಿಕರ ಹೊಟ್ಟೆಗೆ ಕನ್ನ ಹಾಕುತ್ತಿರುವುದಂತು ಮೇಲ್ನೋಟಕ್ಕೆ ಕಂಡುಬಂದಿರುವ ಸತ್ಯವಾಗಿದೆ.
ಈ ಹಿಂದೆ ಜನರು ಜೀವನವನ್ನು ಸಾಗಿಸುವ ಸಲುವಾಗಿ ಕೆಲಸವನ್ನು ಆದರಸಿ ತಾವು ವಾಸಿಸುವ ಪ್ರದೇಶಗಳನ್ನು ತೋರೆದು ಮತ್ತೊಂದು ಪ್ರದೇಶಕ್ಕೆ ಹೊಲಸೆ ಹೋಗುವ ಪದ್ದತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರತಿ ರಾಜ್ಯಗಳಲ್ಲಿಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಎಂಬ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಹಸಿದವರ ಹೊಟ್ಟೆಗೆ ಹಿಟ್ಟು ಹಾಕುವ ಕಾರ್ಯಕ್ಕೆ ಮುಂದಾಗಿರುವುದು ಸರ್ಕಾರದ ಹೆಮ್ಮೆಯ ಕೆಲಸ.ಆದರೆ,ಕೇಂದ್ರ ಸರ್ಕಾರವು ಜಾರಿಗೋಳಿಸಿರುವ ಇಂತಹ ಅತ್ಯಮೂಲ್ಯವಾದ ಯೋಜನೆಯನ್ನು ಮೈದೂರ ಗ್ರಾಮ ಪಂಚಾಯತಿ ಅಧಿಕಾರಿಗಳು ತಮ್ಮ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಈ ಕೂಡಲೇ ಜಿಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ನರೇಗಾ ಯೋಜನೆಯಡಿಯಲ್ಲಿ ಅನುಮೋದನೆಗೊಂಡು,ನಿರ್ಮಾಣದ ಹಂತದಲ್ಲಿರುವ ರಸ್ತೆ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರನ್ನು ಬಳಸದೆ ಜೇಸಿಬಿಗಳನ್ನು ಬಳಸಿ ಕಾಮಗಾರಿಯನ್ನು ನಿರ್ಮಾಣ ಮಾಡುತ್ತಿರುವುದು ಕಾಣುತ್ತಿದ್ದರು ಕಾಮಗಾರಿಗೆ ತಗಲುವ ಮೊತ್ತವನ್ನು ತಮ್ಮ ಆಪ್ತರ ಖಾತೆಗೆ ಜಮಾ ಮಾಡುವ ಮೂಲಕ ಭ್ರಷ್ಟತೆಗೆ ಸಾಥ್ ನೀಡುತ್ತಿರುವ ಗ್ರಾಮಭಿವೃದ್ಧಿ ಅಧಿಕಾರಿ ಮತ್ತು ತಾಂತ್ರಿಕ ಇಂಜಿನಿಯರ್ ಮೇಲೆ ಸೂಕ್ತ ಕ್ರಮ ಕೈಗೊಂಡು ಈಗಾಗಲೇ ಸರ್ಕಾರದ ಖಜಾನೆಗೆ ನಷ್ಟವನ್ನುಂಟು ಮಾಡಿ ಅಕ್ರಮವಾಗಿ ಕೂಲಿ ಕಾರ್ಮಿಕರ ಖಾತೆಗೆ ಜಮಾವಾಗಿರುವ ಹಣವನ್ನು ವಾಪಸ್ ಪಡೆಯುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿವುದು ತಮ್ಮ ಜವಾಬ್ದಾರಿಯಾಗಿದೆ.