ಅನೇಕ ದಿನಗಳಿಂದ ಹಾವೇರಿ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟದ ಕುರಿತು ನಾಯಕನ ನಡುಗೆ ಪತ್ರಿಕೆಯು ನಡೆಯುತ್ತಿರುವ ಅಕ್ರಮದ ಬಗ್ಗೆ ಸುದ್ದಿ ಪ್ರಕಟಿಸುವುದರ ಮೂಲಕ ನಿದ್ದೆಗೆ ಜಾರಿರುವ ಜಿಲ್ಲೆಯ ಮರಳು ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿತ್ತು.ಆದರೆ ದಪ್ಪ ಚರ್ಮದ ಈ ಅಧಿಕಾರಿಗಳು ಪತ್ರಿಕೆಗಳಲ್ಲಿ ಅದೆಷ್ಟೋ ಬಾರಿ ಸುದ್ದಿ ಪ್ರಕಟಗೊಂಡರು,ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದೆ ಬಾರದೇ ಕರ್ತವ್ಯದಲ್ಲಿ ಭ್ರಷ್ಟತೆ ತೋರುತ್ತಿರುವ ಹಿನ್ನಲೆಯಲ್ಲಿ ಪತ್ರಿಕಾ ತಂಡವು ಲೋಕಾಯುಕ್ತ ಆಯುಕ್ತರಿಗೆ ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಿ ಅಕ್ರಮಕ್ಕೆ ಸಾಥ್ ನೀಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ದೂರನ್ನು ಸಲ್ಲಿಸಿರುತ್ತದೆ.
ಪ್ರಕೃತಿಕವಾಗಿ ಮಳೆಗಾಲದ ಅವಧಿ ಮುಗಿಯುತ್ತಿದ್ದಂತೆ ನದಿಯಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗಿ ನದಿಯು ಬರಿದಾಗುವುದು ಸರ್ವೇ ಸಾಮಾನ್ಯ.ಇಂತಹ ಸಮಯವನ್ನೇ ಕಾದು ಕುಳಿತಿರುವ ಜಿಲ್ಲೆಯ ಮರಳುಚೋರರು ಸರ್ಕಾರದ ಖಜಾನೆಯ ಆಧಾಯ ಹೆಚ್ಚುಸುವಲ್ಲಿ ಒಂದಾದ ಮರಳು ಎಂಬ ಖನಿಜ ಸಂಪತ್ತನ್ನು ದೋಚುತ್ತಿರುವುದು ಕಂಡುಕೊಂಡಿರುವ ಪತ್ರಿಕೆಯು,ಈಗಾಗಲೇ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ,ಕುಮಾರಪಟ್ಟಣಂ ಪೊಲೀಸ್ ಠಾಣೆ,ಹಲಗೇರಿ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಯ ಕುರಿತು ಹಲವು ಬಾರಿ ಸುದ್ದಿ ಪ್ರಕಟಿಸುವ ಮೂಲಕ ಅಕ್ರಮ ಗಣಿಗಾರಿಕೆಗೆ ಹಿಂಬದಿಯಿಂದ ಸಾಥ್ ನೀಡುತ್ತಿರುವ ಅಧಿಕಾರಿಗಳ ಮಾಹಿತಿಯನ್ನು ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುತ್ತದೆ.ಆದರೆ ಅದ್ಯಾಕೋ?ಜಿಲ್ಲಾಧಿಕಾರಿಗಳು ನಡೆಯುತ್ತಿರುವ ಅಕ್ರಮಕ್ಕೆ ಸಾಥ್ ನೀಡಿದ ಅಧಿಕಾರಿಗಳ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದೆ,ಅಕ್ರಮಕೋರರ ಪರವಾಗಿ ನಿಂತಿರುವಂತೆ ವರ್ತಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಕೊಂಡಿರುವ ವಿಷಯವಾಗಿದೆ.ಅದರಲ್ಲೂ ರಾಣೆಬೆನ್ನೂರು ತಾಲೂಕಿನ ರೈತರ ಜೀವನಾಡಿಯಾಗಿರುವ ತುಂಗಾಭದ್ರ ನದಿ ಪ್ರಾಂತ್ಯದ ಇಪ್ಪತ್ತು ಅಡಿಗಳ ಆಳದಲ್ಲಿರುವ ಮರಳನ್ನು ಜೆಸಿಬಿ ಮತ್ತು ಮಷಿನರಿ ಯಂತ್ರಗಳಿಂದ ಅಗೆದು ನದಿಯಲ್ಲಿ ಆಳವಾದ ಗುಂಡಿಗಳನ್ನು ತಗೆಯುವ ಮೂಲಕ ರೈತರಿಗೆ ಮತ್ತು ಸಾರ್ವಜನಿಕರ ಪ್ರಾಣಕ್ಕೆ ಆಪತ್ತು ತಂದೊಡ್ಡುವ ಮಟ್ಟಿಗೆ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ತಕ್ಷಣವೇ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಮಾಹಿತಿ ಪೂರೈಹಿಸುವಂತೆ ಆದೇಶಿಸಿರುತ್ತಾರೆ.
ಆದರೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿನ ಐರಣಿ ಗ್ರಾಮದ ನದಿ ಪಾತ್ರದಲ್ಲಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ತನಿಖೆಗೆ ಮುಂದಾದ ಇಲ್ಲಿನ ಕಂದಾಯ ನಿರೀಕ್ಷಕ ವಾಗೀಶ್ ಮಳಿಮಠ ಎನ್ನುವ ಅಧಿಕಾರಿ,ಐರಣಿ ಸರ್ವೇ ನಂಬರ್ ನಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆದಿರುವುದಿಲ್ಲ.ಐರಣಿ ಎದುರು ಭಾಗವಾದ ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನುವ ಸುಳ್ಳು ಮಾಹಿತಿಯನ್ನು ನೀಡಿ ಅಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿರುತ್ತಾನೆ.ಇನ್ನು,ಜಿಪಿಎಸ್ ವಿಡಿಯೋಗಳ ಮೂಲಕ ಮಾಹಿತಿ ನೀಡಿದ್ದರು ಈ ಅಧಿಕಾರಿಯು ಅಕ್ರಮದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಕರ್ತವ್ಯದಲ್ಲಿ ಭ್ರಷ್ಟತೆ ತೋರುತ್ತಿರುವ ಕುರಿತು ಸಾಕ್ಷಿ ಪೂರಕವಾಗಿ ಸುದ್ದಿ ಪ್ರಕಟಿಸುವ ಮೂಲಕ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತು ಗೊಳಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವುದು ಸತ್ಯಕ್ಕೆ ಹತ್ತಿರವಾಗಿದೆ.ಆದರೆ ಅಧಿಕಾರಿಯ ಭ್ರಷ್ಟತೆಯ ಬಗ್ಗೆ ಸಾಕ್ಷಿ ಪೂರಕವಾಗಿ ಮಾಹಿತಿ ನೀಡಿದರು ಅದ್ಯಾಕೋ?ಜಿಲ್ಲಾಧಿಕಾರಿಗಳು ಈ ಅಧಿಕಾರಿಯ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ವಿಷದಾಯಕವಾಗಿದೆ.ಆದರೆ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಲ್ಲಿ ಈ ಕಂದಾಯ ನಿರೀಕ್ಷಕನ ಪಾತ್ರ ಮುಖ್ಯವಾಗಿದೆ ಎನ್ನುವುದು ಪತ್ರಿಕೆಯ ಅನಿಸಿಕೆಯಲ್ಲ.ಆದರೆ ತಾಲೂಕಿನ ಮರಳು ಸಮಿತಿಯಲ್ಲಿರುವ ಎಲ್ಲಾ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ ಎನ್ನುವುದು ಪತ್ರಿಕೆಯ ಅಭಿಪ್ರಾಯವಾಗಿದೆ.
ಇನ್ನು,ಸರ್ಕಾರದ ಅನುಮತಿ ಮೇರೆಗೆ ರಾಯಚೂರು ಹಟ್ಟಿಗೋಲ್ಡ್ ಮೈನಿಂಗ್ ಕಂಪನಿಯ ಅಧೀನದಲ್ಲಿ ತಾಲೂಕಿನ ಬೇಲೂರು,ಚಿಕ್ಕಕುರುವತ್ತಿ,ಚಂದಾಪುರ ಗ್ರಾಮಗಳ ನದಿ ಪಾತ್ರದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ಪಡೆದಿರುವ ಗುತ್ತಿಗೆದಾರರು ಸರ್ಕಾರವು ವಿಧಿಸಿರುವ ಯಾವುದೇ ಷರತ್ತುಗಳನ್ನು ಪಾಲಿಸದೆ,ನದಿ ಪ್ರಾಂತ್ಯದಲ್ಲಿ ಮನಬಂದಂತೆ ಗಣಿಗಾರಿಕೆ ಮಾಡುವುದಲ್ಲದೆ ಗುತ್ತಿಗೆದಾರರ ಸ್ಟಾಕ್ ಯಾರ್ಡ್ ನಲ್ಲಿ ಯಾವುದೇ ಸಿ.ಸಿ.ಕ್ಯಾಮರಗಳನ್ನು ಅಳವಡಿಸದೆ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ ಮರಳನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೆ,ಗಣಿ ಇಲಾಖೆಯ ಒಬ್ಬ ಅಧಿಕಾರಿ ಹಟ್ಟಿ ಗೋಲ್ಡ್ ಮೈನಿಂಗ್ ಲೀಜ್ ಗಳು ನಮಗೆ ಸಂಬಂಧಪಡುವುದಿಲ್ಲ ಎನ್ನುವ ಅರ್ಥಹೀನಾ ಉತ್ತರವನ್ನು ನೀಡಿರುತ್ತಾನೆ.ಹೌದು,ಬೇಲೂರು.ಚಿಕ್ಕಕುರುವತ್ತಿ.ಚಂದಾಪುರ ಗ್ರಾಮಗಳ ನದಿ ಪಾತ್ರದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ಪಡೆದಿರುವ ಗುತ್ತಿಗೆದಾರರು ತಮ್ಮ ಅಧೀನದಲ್ಲಿ ಬರುವುದಿಲ್ಲ.ಆದರೆ ಹಟ್ಟಿ ಗೋಲ್ಡ್ ಮೈನಿಂಗ್ ಸ್ಟಾಕ್ ಯಾರ್ಡ್ ನಿಂದ ಕದ್ದು ಹೊಯ್ಯುತ್ತಿರುವ ಮರಳನ್ನು ವಶಕ್ಕೆ ಪಡೆಯುವುದು ತಮ್ಮ ಕಾರ್ಯ ವ್ಯಾಪ್ತಿಯಲ್ಲಿಲ್ಲವೇ?ಕೂಡಲೇ ಲೋಕಾಯುಕ್ತ ಆಯುಕ್ತರು ನೀಡಿರುವ ದೂರನ್ನು ಪರಿಗಣಿಸಿ ಅಕ್ರಮ ಮರಳು ಸಾಗಾಟಕ್ಕೆ ಸಾಥ್ ನೀಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಜರುಗಿಸಿ ಜಿಲ್ಲೆಯಲ್ಲಿ ತಾಂಡವಾಡುತ್ತಿರುವ ಭ್ರಷ್ಟತೆಯನ್ನು ಹೋಗಲಾಡಿಸುವಂತೆ ಪತ್ರಿಕೆಯ ಕಳಕಳಿಯಾಗಿದೆ.