ವಿಜಯನಗರ:ಹನುಮಂತಪ್ಪ ದೊಡ್ಡಮನಿ
ಖನಿಜ ಮತ್ತು ವಾಸ್ತು ಶಿಲ್ಪಾ ಕಲೆಗೆ ಹೆಸರುವಾಸಿಯಾಗಿರುವ ವಿಜಯನಗರ ಜಿಲ್ಲೆಯಲ್ಲಿ ಇದೀಗ ಅಕ್ರಮ ಮರಳು ಸಾಗಾಟದ ದಂಧೆಯೂ ಬೆಳಕಿಗೆ ಬಂದಿರುವುದು ವಿಷದಾಯಕ ಸಂಗತಿಯಾಗಿದೆ.ಈಗಾಗಲೇ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರಿನಿಂದ ಜಿಲ್ಲೆಗೆ ಕಬ್ಬಿಣದ ನಗರಿ ಎಂಬ ಹೆಗ್ಗಳಿಗೆ ದೋರೆತಿರುವುದು ಸಂತಸದ ವಿಷಯ.ಆದರೆ ಇದೀಗ ಹರಪನಹಳ್ಳಿ ತಾಲೂಕಿನ ಹಲವಾಗಲು ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಕಡತಿ ಗ್ರಾಮದ ಪಕ್ಕದಲ್ಲಿ ಹರಿದಿರುವ ತುಂಗಾಭದ್ರ ನದಿಯ ಒಡಲಲ್ಲಿ ಅಡಗಿರುವ ಮರಳನ್ನು ಹಗಲು ರಾತ್ರಿ ಎನ್ನದೆ ಇಲ್ಲಿನ ಮರಳು ಚೋರರು ಅಕ್ರಮವಾಗಿ ಅಗೆದು ಸಾಗಾಟ ಮಾಡುತ್ತಿರುವುದು ಜಿಲ್ಲಾಡಳಿತದ ವೈಪಲ್ಯಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯ ಗಡಿ ಭಾಗದಲ್ಲಿ ಹರಿದಿರುವ ತುಂಗಾಭದ್ರ ನದಿಯು ಜಿಲ್ಲೆಯ ರೈತರ ಜೀವನಾಡಿಯಾಗಿದೆ ಎಂದರೆ ತಪ್ಪಾಗಲಾರದು.ತಾಲೂಕಿನ ಗಡಿ ಭಾಗದಲ್ಲಿ ಹರಿದಿರುವ ಈ ನದಿಯ ನೀರಿನಿಂದ ಗಡಿ ಭಾಗದ ಗ್ರಾಮಗಳ ಅದೆಷ್ಟೋ ರೈತರು ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಅವಲಂಭಿತರಾಗಿ ಜೀವನ ಸಾಗಿಸುವುದು ಇಲ್ಲಿನ ರೈತರ ಕಾಯಕವಾಗಿದೆ.ಆದರೆ ಹರಪನಹಳ್ಳಿ ತಾಲೂಕಿನ ಕೊನೆಯ ಭಾಗದಲ್ಲಿರುವ ಕಡತಿ ಗ್ರಾಮದ ಕೆಲವು ಮರಳು ಚೋರರು ರಾಜಾರೋಷವಾಗಿ ಹಗಲು ರಾತ್ರಿ ಎನ್ನದೆ ನದಿ ಪ್ರಾಂತ್ಯದಲ್ಲಿ ಜೆಸಿಬಿಗಳನ್ನು ಬಳಸಿ ಸುಮಾರು ಇಪ್ಪತ್ತು ಅಡಿಗಳ ಆಳದಲ್ಲಿರುವ ಮರಳನ್ನು ಅಗೆದು ಅಕ್ರಮವಾಗಿ ಸಾಗಾಟ ಮಾಡುವುದಲ್ಲದೆ,ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ನೀರು ದೋರಕಂತೆ ಮಾಡುತ್ತಿರುವುದು ಮರಳುಚೋರರ ದುಷ್ಟ ಮನಸ್ಥಿತಿಯಾಗಿದೆ.ಇನ್ನು,ನಡೆಯುತ್ತಿರುವ ಅಕ್ರಮದ ದೃಶ್ಯಾವಳಿಗಳನ್ನು ಈಗಾಗಲೇ ಜಿಲ್ಲೆಯ ಗಣಿ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೆ ಪತ್ರಿಕಾ ತಂಡವು ತಂದಿರುತ್ತೇವೆ.ತಂದಿರುವ ಮಾಹಿತಿ ಮೇರೆಗೆ ಈ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ವಾಹನಗಳನ್ನು ವಶಕ್ಕೆ ಪಡೆದು ಹಲವಾಗಲು ಪೊಲೀಸ್ ಠಾಣೆಯ ಅಧೀನಕ್ಕೆ ಒಳಪಡಿಸಿರುತ್ತೇವೆ ಎನ್ನುವ ಹೇಳಿಕೆಯನ್ನು ನೀಡಿರುತ್ತಾರೆ.ಅಧಿಕಾರಿಗಳು ನೀಡಿರುವ ಹೇಳಿಕೆಯಲ್ಲಿ ಅದೆಷ್ಟರ ಮಟ್ಟಿಗೆ ಸತ್ಯತೆ ಅಡಗಿದೆ ಎನ್ನುವುದನ್ನು ಮುಂದೆ ನೋಡೋಣ.ಆದರೆ ಸಂಬಂಧಪಟ್ಟ ಗಣಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು,ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕದೆ ಅರ್ಥಕ್ಕೆ ಬಾರದ ಮಾತುಗಳನ್ನಾಡುತ್ತಾ ಕರ್ತವ್ಯದಲ್ಲಿ ಭ್ರಷ್ಟತೆ ತೋರುತ್ತಿರುವುದು ಸತ್ಯಕ್ಕೆ ಹತ್ತಿರವಾಗಿದೆ.
ಇನ್ನೂ ಈಗಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಘೋಷಿಸಿರುವ ಭರವಸೆಗಳನ್ನು ಈಡೇರಿಸಲು ಇನ್ನಿಲ್ಲದ ಸಾಹಸಗಳನ್ನು ಪಡುತ್ತಿರುವುದರ ಜೊತೆಗೆ ರಾಜ್ಯದ ಜನರನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡುತ್ತಿರುವುದು ರಾಜ್ಯಕ್ಕೆ ತಿಳಿದಿರುವ ವಿಷಯ.ಇಂಥಹ ಕಷ್ಟಕರವಾದ ಪರಿಸ್ಥಿತಿಯಲ್ಲಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗದಂತೆ ಕಾಪಾಡಿಕೋಳ್ಳುವುದರ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ.ಆದರೆ ವಿಜಯನಗರ ಜಿಲ್ಲೆಯ ಮರಳು ಟಾಸ್ಕ್ ಪೋರ್ಸ್ ಸಮಿತಿಯ ಅಧಿಕಾರಿಗಳ ಕಣ್ಣೆದುರಲ್ಲೇ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟವಾಗುತ್ತಿರುವುದು ಕಂಡುಬಂದಿದ್ದರು ನಡೆಯುತ್ತಿರುವ ಅಕ್ರಮ ಮರಳು ಸಾಗಟವನ್ನು ತಡೆಯಲು ಮುಂದಾಗದೆ ಅಕ್ರಮಕೋರರ ಸಂಬಂಧಿಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಹಿನ್ನಲೆಯಾದರು ಏನು?ಇನ್ನು ತಾಲೂಕಿನ ಗಡಿ ಭಾಗದ ರೈತರ ಜೀವನಾಡಿಯಾಗಿರುವ ತುಂಗಾಭದ್ರ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಿಂದ ರೈತರು ಜಮೀನುಗಳ ಕೃಷಿ ಚಟುವಟಿಕೆಗಳಿಗೆ ಅಳವಡಿಸಿರುವ “ಪಂಪ್ ಲೈನ್” ಗಳಿಗೆ ಸಮರ್ಪಕ ನಿರಿ ದೋರಕದಿರುವುದು ಒಂದಡೆಯಾದರೆ,ಭೂಮಿಯಲ್ಲಿನ ಅಂತರ್ಜಲದ ಮಟ್ಟ ಕುಸಿತವಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಮತ್ತು ಜನಸಾಮಾನ್ಯರಿಗೆ ನೀರಿನ ಅಭಾವ ಉಂಟಾಗುತ್ತದೆ ಎನ್ನುವ ವಿವೇಕತೆಯನ್ನು ಅರಿತುಕೊಳ್ಳುವುದು ಶಾಸಕರಿಗೆ ಅನಿವಾರ್ಯವಾಗಿದೆ.
ಕೂಡಲೇ ಜಿಲ್ಲಾಧಿಕಾರಿಗಳು ಹಲವಾಗಲು ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಕಡತಿ ಗ್ರಾಮದ ಪಕ್ಕದ ನದಿ ಪ್ರಾಂತ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಗೆ ಕಡಿವಾಣ ಹಾಕುವ ಮೂಲಕ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ವಾಹನಗಳ ಮತ್ತು ವ್ಯಕ್ತಿಗಳ ಮೇಲೆ ಕಾನೂನು ಪ್ರಕರಣವನ್ನು ದಾಖಲಿಸಿ,ಹಲವು ತಿಂಗಳುಗಳಿಂದ ಅಕ್ರಮ ನಡೆಯುತ್ತಿರುವುದು ಕಾಣುತ್ತಿದ್ದರು ಕಂಡರು ಕಾಣದ ಕುರುಡನಂತೆ ವರ್ತಿಸುತ್ತಿರುವ ಹಲವಾಗಲು ಪೊಲೀಸ್ ಠಾಣೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಮರಳು ಸಾಗಾಟದ ದಂಧೆಗಳಿಂದ ಜಿಲ್ಲಾಡಳಿತಕ್ಕೆ ಕಳಂಕ ಬಾರದಂತೆ ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದೆ.