ರಾಣೆಬೆನ್ನೂರು
ಈಗಾಗಲೇ ರಾಜ್ಯದ ಅನೇಕ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟವು ಎಗ್ಗಿಲ್ಲದೆ ನಡೆಯುತ್ತಿರುವ ಸನ್ನಿವೇಶಗಳನ್ನು ನಾವುಗಳು ಕಂಡು,ಕೇಳಿ ಅರಿತಿದ್ದೇವೆ.ಆದರೆ ಇದೀಗ ರಾಣೆಬೆನ್ನೂರು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ದಂಧೆಯೂ ಮುಂಚೂಣಿಯಲ್ಲಿ ಮುನ್ನಲೆಗೆ ಬಂದಿರುವುದು ಕಂಡುಬಂದಿದೆ.ರಾಣೆಬೆನ್ನೂರು ತಾಲೂಕಿನಲ್ಲಿ ಸುಮಾರು ನೂರ ಆರು ಗ್ರಾಮಗಳಿದ್ದು,ಗ್ರಾಮಗಳ ಬಹುತೇಕ ಜನರು ಕೃಷಿ ಮತ್ತು ಕೂಲಿ ಕೆಲಸಕ್ಕೆ ಅವಲಂಭಿತರಾಗಿ ಜೀವನ ಸಾಗಿಸುವ ಜನರಾಗಿದ್ದಾರೆ.ಇನ್ನು ಕೃಷಿ ಮತ್ತು ಕೂಲಿ ಮಾಡಿಕೊಂಡು ಬಂದಿರುವ ಹಣದಲ್ಲಿ ಜೀವನ ಸಾಗಿಸಲು ಹರಸಾಹಸ ಪಡುತ್ತಿರುವ ಜನರಿಗೆ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಜೀವನ ನಡೆಸಲು ಇನ್ನಿಲ್ಲದ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿರುವುದು ಮೇಲ್ನೋಟಕ್ಕೆ ಕಂಡುಕೊಂಡಿರುವ ವಿಷಯವಾಗಿದೆ.
ಅಕ್ರಮ ಮದ್ಯ ಮಾರಾಟಕ್ಕೆ ಮುಂದಾದ ಅಂಗಡಿಗಳು & ಮದ್ಯ ಮಾರಾಟ ಮಾಡುತ್ತಿರುವ ಕಿರಾಣಿ ಅಂಗಡಿಗಳು
ರಾಣೆಬೆನ್ನೂರು ತಾಲೂಕಿನಲ್ಲಿ ಸರ್ಕಾರದಿಂದ ಪರವಾನಿಗೆ ಪಡೆದಿರುವ ಬಹುತೇಕ ಅಂಗಡಿಯ ಮಾಲೀಕರು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರದಲ್ಲಿ ಮುಂದಾಗಿರುವುದು ಒಂದಡೆಯಾದರೆ,ಕೆಲವರು ಸರ್ಕಾರದ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಇನ್ನೊಂದಡೆಯಲ್ಲಿ ಕಂಡುಬರುತ್ತಿರುವ ದೃಶ್ಯಾವಳಿಗಳಾಗಿವೆ.ಈಗಾಗಲೇ ತಾಲೂಕಿನ ಇಟಗಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಮದ್ಯದ ಅಂಗಡಿಯವರು ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವ್ಯಾಪಾರಕ್ಕೆ ಮುಂದಾಗಿರುವುದರ ಜೊತೆಗೆ ತರೆದಹಳ್ಳಿ ಮತ್ತು ಹನುಮನಹಳ್ಳಿ ಗ್ರಾಮಗಳಿಗೆ ಸಂಚಾರ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ನಿರ್ಮಾಣಗೊಂಡಿರುವ ವೆಂಕಟೇಶ್ವರ ಹ್ಯಾಚರಿಸ್ ಮತ್ತು ಎತ್ತನಲ್ ಕಾರ್ಖಾನೆಗಳ ಮುಂಭಾಗದಲ್ಲಿರುವ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಪ್ರಚೋದನೆ ನೀಡುತ್ತಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಮಾತುಗಳಾಗಿವೆ.ಸಾರ್ವಜನಿಕರು ಇಟಗಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಹಾಗೂ ಇನ್ನು ಅಂಗಡಿಯ ಮುಂಭಾಗದಲ್ಲಿ ಹೆಸರಿನ ನಾಮಪಲಕವನ್ನು ಅಳವಡಿಸದೆ ವ್ಯಾಪಾರಕ್ಕೆ ಮುಂದಾಗಿರುವ ಮದ್ಯದ ಅಂಗಡಿಗಳ ಮೇಲೆ ಮಾಡುತ್ತಿರುವ ಆರೋಪ ಎಷ್ಟರ ಮಟ್ಟಿಗೆ ಸತ್ಯಾಂಶದಿಂದ ಅಡಗಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.ಆದರೆ ಇಟಗಿ ಗ್ರಾಮದಲ್ಲಿರುವ ಮದ್ಯದ ಅಂಗಡಿಗಳು ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಸತ್ಯಕ್ಕೆ ಹತ್ತಿರ.
ಕೂಡಲೇ ರಾಣೆಬೆನ್ನೂರು ತಾಲೂಕಿನಾದ್ಯಂತ ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವ್ಯಾಪಾರಕ್ಕೆ ಮುಂದಾಗಿರುವ ಮದ್ಯದ ಅಂಗಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಈಗಾಗಲೇ ತಾಲೂಕಿನಾದ್ಯಂತ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟದ ದಂಧೆಯು ನಡೆಯುತ್ತಿರುವುದು ಕಾಣುತ್ತಿದ್ದರು ಕಾಣದ ಕುರುಡನ ಜಾಣ್ಮೆಯ ಕರ್ತವ್ಯದ ಮೂಲಕ ಭ್ರಷ್ಟಾಚಾರಕ್ಕೆ ಮುಂದಾಗಿರುವ ಅಬಕಾರಿ ನಿರೀಕ್ಷಕ ಮಲ್ಲಪ್ಪನಿಗೆ ಮತ್ತೊಮ್ಮೆ ಅಬಕಾರಿ ನಿಯಮಗಳ ಬಗ್ಗೆ ಸ್ಪೆಷಲ್ ಕ್ಲಾಸ್ ತಗೆದುಕೊಳ್ಳುವುದರ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನಕ್ಕೆ ಕಂಟಕವಾಗಿರುವ ಅಕ್ರಮ ಮದ್ಯ ಮಾರಟಕ್ಕೆ ಕಡಿವಾಣ ಹಾಕುವುದು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕರ್ತವ್ಯವಾಗಿದೆ.