ನಕಲಿ ವೈದ್ಯ ಸೋಮಶೇಖರನ ಕಳ್ಳಾಟಕ್ಕೆ ಬ್ರೇಕ್ ಯಾವಾಗ DHO ಶಂಕ್ರಣ್ಣ…?
ವಿಜಯನಗರ ಜಿಲ್ಲೆ
ರಾಜ್ಯದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸರ್ಕಾರವು ಹತ್ತಾರು ಯೋಜನೆಗಳನ್ನು ಆರೋಗ್ಯ ಇಲಾಖೆಯಡಿಯಲ್ಲಿ ರೂಪಿಸುವುದರ ಜೊತೆಗೆ ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗುತ್ತಿರುವುದು ಸಂತೋಷದಾಯಕದ ಸಂಗತಿ.ಆದರೆ ಸರ್ಕಾರವು ರೂಪಿಸಿರುವ ಯೋಜನೆಗಳಿಗೆ ಕಿಂಚಿತ್ತು ಬೆಲೆ ನೀಡದೆ,ಕೆಲ ವೈದರು ಚಿಕಿತ್ಸೆಯ ನೆಪದಲ್ಲಿ ಜನಸಾಮಾನ್ಯರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವುದು ರಾಜ್ಯದಲ್ಲೆಡೆ ಕಂಡುಬಂದಿರುವ ದೃಶ್ಯಗಳಾಗಿವೆ.ಇದೀಗ ಇಂತಹದೊಂದು ಚಿಕಿತ್ಸೆಯ ನೆಪದಲ್ಲಿ ಜನರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವ ವೈದ್ಯ ವೃಂದ ಕಂಡುಬಂದಿರುವುದು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ.ಈಗಾಗಲೇ ನಕಲಿ ವೈದ್ಯರ ಹಾವಳಿಯಿಂದ ಬೇಸತ್ತಿರುವ ತಾಲೂಕಿನ ಜನರಿಗೆ ಇದೀಗ ತಾಲೂಕಿನೊಳಗೆ ನುಸಲಿರುವ ಆಂದ್ರಪ್ರದೇಶದ ನಕಲಿ ವೈದ್ಯರ ಹಾವಳಿಯಿಂದ ಮತ್ತಷ್ಟು ಭಯದ ವಾತಾವರಣ ಸೃಷ್ಟಿಯಾಗುವಂತೆ ಮಾಡಿರುವುದು ಇಲ್ಲಿನ ಜಿಲ್ಲಾಡಳಿತದ ವೈಪಲ್ಯಕ್ಕೆ ಸಾಕ್ಷಿಯಾಗಿದೆ.
ಈಗಾಗಲೇ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊರ ರಾಜ್ಯ ಆಂದ್ರ ಪ್ರದೇಶದಿಂದ ತಾಲೂಕಿನಲ್ಲಿ ಬಿಡಾರ ಬಿಟ್ಟುಕೊಂಡಿರುವ ಸುಮಾರು ಮೂವತ್ತಕ್ಕಿಂತ ಹೆಚ್ಚು ನಕಲಿ ವೈದ್ಯರು,ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ “ಓವರ್ ಡೋಜ್” ಔಷಧಿಗಳನ್ನು ನೀಡುವ ಮೂಲಕ ತಾಲೂಕಿನ ಜನರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ ಎನ್ನುವುದು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಮಾತುಗಳಾಗಿವೆ.ಇನ್ನೂ ಈ ಹಿಂದೆ ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿರುವ ಈ ನಕಲಿ ವೈದ್ಯರ ಹಾವಳಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಅರಿತ ಆಗಿನ ಆರೋಗ್ಯ ಅಧಿಕಾರಿಗಳು,ಈ ನಕಲಿ ವೈದ್ಯರ ಕ್ಲಿನಿಕ್ ಗಳ ಬಾಗಿಲಿಗೆ ಅನೇಕ ಬಾರಿ ಬೀಗ ಹಾಕುವುದರ ಮೂಲಕ ಈ ನಕಲಿ ವೈದ್ಯರಿಗೆ ಚಿಕಿತ್ಸೆ ನೀಡದಂತೆ ಸೂಚಿಸಿರುವುದು ಸತ್ಯಕ್ಕೆ ಹತ್ತಿರವಾಗಿದೆ.ಆದರೆ ಜಿಲ್ಲೆಯ ಆರೋಗ್ಯಧಿಕಾರಿಗಳು ಚಿಕಿತ್ಸೆ ನೀಡದಂತೆ ಹೊರ ರಾಜ್ಯದ ಈ ನಕಲಿ ವೈದ್ಯರಿಗೆ ಎಷ್ಟೇ ಸೂಚಿಸಿದರು ದಪ್ಪ ಚರ್ಮದ ಈ ವೈದ್ಯರ ಹಾವಳಿ ಮಾತ್ರ ದಿನದಿಂದ ಹೆಚ್ಚಿಗೆಯಾಗುತ್ತಿದೆಯೇ ಒರೆತು,ಕಡಿಮೆಯಾಗುವ ಲಕ್ಷಣಗಳು ಮಾತ್ರ ಕಂಡುಬರುತ್ತಿಲ್ಲ.
ಸರ್ಕಾರದ ವೈದ್ಯಕೀಯ ಕಾಯ್ದೆಗಳನ್ವಯ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಗಳನ್ನು ತೇರೆಯಲು ಮುಂದಾಗುವ ವೈದ್ಯನು,ತಾನು ವೈದ್ಯಕೀಯ ಶಿಕ್ಷಣದಲ್ಲಿ ಪಡೆದಿರುವ ಸ್ತಾನಕೊತ್ತರ ಪದವಿಯ ದಾಖಲಾತಿಗಳನ್ನು ಸರ್ಕಾರದ ಅಧೀನದಲ್ಲಿ ಹಾಜರು ಪಡಿಸಿ,ಪಡೆದಿರುವ ಪದವಿಯ ಅನುಗೂಣವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ತೆರೆಯಲು ಸರ್ಕಾರದಿಂದ ಅನುಮತಿ ಪಡೆಯುಬೇಕು ಎನ್ನುವುದು ನೀಡಿರುವ ಪರವಾನಿಗೆಯ ಸಾಲುಗಳಲ್ಲಿ ಉಲ್ಲೇಖವಾಗಿರುತ್ತದೆ.ಆದರೆ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವ ಈ ಆಂದ್ರಪ್ರದೇಶದ ವೈದ್ಯರು ಅದ್ಯಾವ? ವೈದ್ಯಕೀಯ ಸ್ತಾನಕೊತ್ತರ ಪದವಿ ಆದಾರದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವುದು ಅರ್ಥವಾಗದ ಒಂದಡೆ ಪ್ರಶ್ನೆಯಾಗಿದ್ದರೆ,ಇನ್ನು,ಹಲವು ವರ್ಷಗಳಿಂದ ತಾಲೂಕಿನಲ್ಲಿರುವ ಜನರಿಗೆ ಚಿಕಿತ್ಸೆ ನೀಡಲು ಮುಂದಾಗಿರುವ ಸೋಮಶೇಖರ ಎನ್ನುವ ವೈದ್ಯನು ಅದ್ಯಾವ ಕಾಲೇಜಿನಲ್ಲಿ ಮಾಸ್ಟರ್ ಡಿಗ್ರಿ ಪಡೆದು ಚಿಕಿತ್ಸೆ ನಿಡುತ್ತಿದ್ದಾನೋ ಗೊತ್ತಿಲ್ಲ.ಆದರೆ ಪ್ರಸ್ತುತವಾಗಿ ತಾಲೂಕಿನಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುದಂತು ಸತ್ಯಕ್ಕೆ ಹತ್ತಿರವಾಗಿದೆ.ಈ ಸೋಮಶೇಖರ ಎನ್ನುವ ವ್ಯಕ್ತಿಯು ಹಲವು ವರ್ಷಗಳಿಂದ ತಾಲೂಕಿನ ಕೆಲ ವ್ಯಕ್ತಿಗಳ ಗುಂಪನ್ನು ಕಟ್ಟಿಕೊಂಡು ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡದೆ ರೋಗಿಗಳ ಮನೆಯ ಕಟ್ಟೆಯ ಮೇಲೆ ಚಿಕಿತ್ಸೆ ನೀಡುತ್ತಿರುವುದು ವೈದ್ಯಕೀಯ ಶಿಕ್ಷಣ ಕಾಯ್ದೆಯ ಅದ್ಯಾವ? ಸಾಲುಗಳಲ್ಲಿ ಉಲ್ಲೇಖವಾಗಿದೆ ಎನ್ನುವುದನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳೇ ಹೇಳಬೇಕು! ಈ ವ್ಯಕ್ತಿಯು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ರಾಜಾರೋಷವಾಗಿ ಮನೆ ಮನೆಗೆ ತೆರಳಿ ವೈದ್ಯಕೀಯ ನಿಯಮ ಉಲ್ಲಂಘನೆ ಮಾಡುವುದರ ಜೊತೆಗೆ ಚಿಕಿತ್ಸೆ ನೀಡುತ್ತಿರುವುದು ಕಾಣುತಿದ್ದರು ಅದ್ಯಾಕೆ? ತಾಲೂಕ ಆರೋಗ್ಯ ಅಧಿಕಾರಿಗಳು ಕಂಡರು ಕಾಣದ ಕುರುಡನಂತೆ ಅದ್ಯಾಕೆ?ವರ್ತಿಸುತ್ತಿದ್ದರೋ ಅಥವಾ ಈ ನಕಲಿ ವೈದ್ಯರು ನೀಡುವ ತಿರುಪತಿ ಲಡ್ಡುಗೆ ಶರಣಾಗಿದ್ದಾರ ಎನ್ನುವುದೇ ಅನುಮಾನಕ್ಕೆ ದಾರಿಯಾಗುತ್ತಿದೆ.
ಇನ್ನು,ಸರ್ಕಾರವು ರಾಜ್ಯದ ಜನರ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ಪ್ರತಿ ಬಾರಿ ನಡೆಯುವ ಬಜೆಟ್ ನಲ್ಲಿ ಕೋಟಿಗಟ್ಟಲೆ ಅನುಧಾನವನ್ನು ಮೀಸಲಿಡುತ್ತಿರುವುದರ ಜೊತೆಗೆ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಯಾವುದೇ ರೀತಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗದಂತೆ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಪರವಾನಿಗೆ ಪಡೆದಿರುವ ಪ್ರತಿಯೊಂದು ಆಸ್ಪತ್ರೆ ಮಂಡಳಿಯವರಿಗೆ ಅದೇಶಿಸಿರುತ್ತದೆ .ಸರ್ಕಾರದಿಂದ ಪರವಾನಿಗೆ ಪಡೆದಿರುವ ಆಸ್ಪತ್ರೆ ಅಥವಾ ಕ್ಲಿನಿಕ್ ನ ಮಂಡಳಿಯವರು ಒಂದು ವೇಳೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಆಸ್ಪತ್ರೆಯ ಆವರಣದಲ್ಲಿ ನಾಮಪಲಕದಲ್ಲಿ ಅಳವಡಿಸದೆ,ಆಸ್ಪತ್ರೆಗೆ ಬರುವ ರೋಗಿಗಳ ಹತ್ತಿರ ನಿಗಧಿ ಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಪಡೆಯುವುದರ ಜೊತೆಗೆ ಸರ್ಕಾರ ನೀಡಿರುವ ಷರತ್ತುಗಳನ್ನು ಗಾಳಿಗೆ ತೂರಿ ಮನಬಂದಂತೆ ಆಸ್ಪತ್ರೆಗಳನ್ನು ಮುನ್ನೆಡಿಸುತ್ತಿರುವ ಘಟನೆಗಳು ಕಂಡುಬಂದಲ್ಲಿ ಅಂತಹ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದುಗೋಳಿಸಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ವೈದ್ಯನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಜವಾಬ್ದಾರಿಯು ಆರೋಗ್ಯ ಅಧಿಕಾರಿಗಳದ್ದಾಗಿರುತ್ತದೆ.ಆದರೆ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಪಡೆಯದೇ ಇಷ್ಟೊಂದು ರಾಜಾರೋಷವಾಗಿ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವ ನಕಲಿ ವೈದ್ಯರ ಕಳ್ಳಾಟವು ಕಣ್ಣೆದುರಲ್ಲೇ ಕಾಣುತ್ತಿದ್ದರು,ಅಕ್ರಮವಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವ ಜಿಲ್ಲಾ ಆರೋಗ್ಯ ಅಧಿಕಾರಿಗಳ ನಡೆಯಾದರೂ ಏನು?