ಹರಿಹರ:ಅಕ್ರಮ ಮದ್ಯ ಮಾರಾಟ,ಅಬಕಾರಿ ನಿರೀಕ್ಷಕನ ರಂಗುರಂಗಿನಾಟ ಬಯಲು..!

ಹರಿಹರ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ನಾಯಕನ ನಡುಗೆ ಪತ್ರಿಕೆಯು ಹಲವು ಬಾರಿ ಸುದ್ದಿ ಪ್ರಕಟಿಸುವುದರ ಮೂಲಕ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದರು,ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಇಲ್ಲಿನ ಅಬಕಾರಿ ನಿರೀಕ್ಷಕ ಪದೆ ಪದೇ  ವಿಫಲವಾಗುತ್ತಿರುವುದು ನಾಚಿಕೆಗೇಡಿನ ಸಂಗತಿ.ಈ ಹಿಂದೆ ಸರ್ಕಾರದಿಂದ ಪರವಾನಿಗೆ ಪಡೆದಿರುವ ಬಹುತೇಕೆ ಮದ್ಯದ ಅಂಗಡಿಗಳು ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಮನಬಂದಂತೆ ವ್ಯಾಪಾರ ಮಾಡುತ್ತಿರುವ ಬಗ್ಗೆ “ನಾಯಕನ ನಡುಗೆ” ವಾರ ಪತ್ರಿಕೆಯು ಸುದ್ದಿ ಪ್ರಕಟಿಸುವುದರ ಮೂಲಕ ನಡೆಯುತ್ತಿರುವ ಅಕ್ರಮವು ಕಂಡರು ಕಾಣದ ಕುರುಡನಂತೆ ಗಾಡ ನಿದ್ರೆಗೆ ಜಾರಿರುವ ತಾಲೂಕಿನ ಅಬಕಾರಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿತ್ತು.ಅದರಲ್ಲೂ ನಗರ ಪ್ರದೇಶದಲ್ಲಿರುವ ಅಬಕಾರಿ ಕಾರ್ಯಾಲಯದ ಕೂದಲೆಯ ಹಂತರದಲ್ಲಿರುವ ಸಿಎಲ್ 2 ಪರವಾನಿಗೆ ಪಡೆದಿರುವ ಲಿಕ್ಕರ್ ಎಂಪೈರ್ ಮದ್ಯದ ಅಂಗಡಿ ಹಾಗೂ ಮಲೆಬೆನ್ನೂರು ನಗರದಲ್ಲಿ ಸಿಎಲ್ 2 ಪರವಾನಿಗೆ ಪಡೆದಿರುವ ಬಾಲಾಜಿ ವೈನ್ಸ್ ಮದ್ಯದ ಅಂಗಡಿಗಳು  ಅಬಕಾರಿ ನಿಯಮವನ್ನು ಉಲ್ಲಂಘಿಸಿ ಅಂಗಡಿಯ ಆವರಣದಲ್ಲಿ ಟೇಬಲ್ ಗಳ ವ್ಯವಸ್ಥೆ ಮಾಡಿಕೊಂಡು ಅಂಗಡಿಗೆ ಬರುವ ಗ್ರಾಹಕರಿಗೆ ಮದ್ಯಪಾನ ನೀಡುತ್ತಾ ಗಲಾಟೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿರುವ ಬಗ್ಗೆ ಸುದ್ದಿಯ ಮೂಲಕ ಮಾಹಿತಿ ನೀಡಿದರು,ತಪ್ಪಿತಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಬಕಾರಿ ಅಧಿಕಾರಿಗಳೇ ನಿಯಮ ಉಲ್ಲಂಘಿಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದೆ ಮೌನಕ್ಕೆ ಜಾರಿರುವುದು ಹತ್ತಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತಿದೆ.

ಈಗಾಗಲೇ ಹರಿಹರ ತಾಲೂಕಿನಾದ್ಯಂತ ಮೂವತ್ತೆಂಟು ಮದ್ಯದ ಅಂಗಡಿಯ ಮಾಲೀಕರು ಮದ್ಯಪಾನ ಮಾರಾಟ ಮಾಡಲು ಸರ್ಕಾರದಿಂದ ಅನುಮತಿ ಪಡೆದಿದ್ದು,ಸಿಎಲ್ 2 ಅನುಮತಿ ಮೇರೆಗೆ ಹದಿನಾರು ಅಂಗಡಿಗಳು.ಸಿಎಲ್ 7 ಅನುಮತಿ ಮೇರೆಗೆ ಮೂರು ಅಂಗಡಿಗಳು.ಸಿಎಲ್ 9 ಅನುಮತಿ ಮೇರೆಗೆ ಹದಿಮೂರು ಅಂಗಡಿಗಳು.ಸಿಎಲ್ 11 ಅನುಮತಿ ಮೇರೆಗೆ ಆರು ಅಂಗಡಿಗಳು ಪರವಾನಿಗೆ ಪಡೆದು ತಮ್ಮ ಕಟ್ಟಡಗಳಲ್ಲಿ ವ್ಯಾಪಾರಕ್ಕೆ ಮುಂದಾಗಿರುವುದು ಕಂಡುಕೊಂಡಿರುವ ವಿಷಯ.ಇನ್ನೂ ಸರ್ಕಾರವು,ಸಿಎಲ್ 2 ಪರವಾನಿಗೆ ನೀಡುವ ಮುಂಚಿತವಾಗಿ ಅಂಗಡಿಯ ಮಾಲೀಕರಿಗೆ ಸರ್ಕಾರ ನಿಗಧಿ ಪಡಿಸಿದ ಬೆಲೆಗೆ ಮದ್ಯ ಮಾರಾಟ ಮಾಡುವುದರ ಜೊತೆಗೆ ಅಂಗಡಿಯ ಆವರಣದಲ್ಲಿ ಯಾವುದೇ ರೀತಿಯ ಟೇಬಲ್ ಗಳ ವ್ಯವಸ್ಥೆಗಳನ್ನು ಕಲ್ಪಿಸದೆ ಕೇವಲ ಪಾರ್ಸಲ್ ರೂಪದಲ್ಲಿ ಮದ್ಯವನ್ನು ನೀಡಬೇಕು ಎನ್ನುವುದು ಸರ್ಕಾರ ಪರವಾನಿಗೆಯ ಪ್ರತಿಯಲ್ಲಿ ಸೂಚಿಸಿರುವ ಅಬಕಾರಿ ನಿಯಮದ ಸಾಲುಗಳಾಗಿರುತ್ತವೆ.ಆದರೆ ಸಿಎಲ್ 2 ಪರವಾನಿಗೆ ಪಡೆದಿರುವ ಅದೆಷ್ಟೋ ಅಂಗಡಿಗಳು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡದ ಆವರಣದಲ್ಲೇ ಟೇಬಲ್ ವ್ಯವಸ್ಥೆ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದ್ದರು,ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕಾದ ಅಬಕಾರಿ ಅಧಿಕಾರಿಗಳ ಮೌನವೇಕೆ?ಇನ್ನೂ ಸಿಎಲ್ 2 ಪರವಾನಿಗೆ ಪಡೆದಿರುವ ಅಂಗಡಿಗಳ ಮಾಲೀಕರ ಅಕ್ರಮ ಒಂದಡೆಯಾದರೆ,ಸಿಎಲ್ 9 ಪರವಾನಿಗೆ ಪಡೆದಿರುವ ಅದೆಷ್ಟೋ ಅಂಗಡಿಗಳು ತಮ್ಮ ಕಟ್ಟಡದ ಆವರಣದಲ್ಲಿ ಯಾವುದೇ ರೀತಿಯ ಅಡುಗೆ ಮನೆಗಳನ್ನು ನಿರ್ಮಿಸಿಕೊಳ್ಳದೆ ನೆಪ ಮಾತ್ರಕ್ಕೆ ಒಂದು ಕೋಣೆಯನ್ನು ರಚಿಸಿಕೊಂಡು ಬರುವ ಗ್ರಾಹಕರಿಗೆ ಉತ್ತಮ ಶೌಚಾಲಯಗಳನ್ನು ಕಲ್ಪಿಸದೆ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಮನಬಂದಂತೆ ವ್ಯಾಪಾರ ಮಾಡುತ್ತಿರುವುದು ಕಂಡರು ಕಾಣದ ಕುರುಡನಂತೆ ವರ್ತಿಸುತ್ತಿರುವ ಅಬಕಾರಿ ನಿರೀಕ್ಷಕ ಹಿಂದಿನ ಮರ್ಮವಾದರೂ ಏನು?ನಡೆಯುತ್ತಿರುವ ಅಕ್ರಮವನ್ನು ತಡೆದು ಜನರಿಗೆ ಮತ್ತು ಸೇವೆ ನೀಡಿದ ಸರ್ಕಾರಕ್ಕೆ ಉತ್ತಮ ಸೇವೆ ಸಲ್ಲಿಸುವುದು ಈ ಅಧಿಕಾರಿಯ ಕರ್ತವ್ಯವಾಗಿರುತ್ತದೆ.ಆದರೆ ಕಂಡರು ಕಾಣದ ಕುರುಡನ ಜಾಣ್ಮೆಯ ಕರ್ತವ್ಯದಲ್ಲಿ ಭಾಗಿಯಾಗಿರುವ ಈ ನಿರೀಕ್ಷಕ ಅಂಗಡಿಯ ಮಾಲೀಕರು ತಿಂಗಳಿಗೊಮ್ಮೆ ನೀಡುತ್ತಿರುವ ಪ್ರಸಾದಕ್ಕೆ ಶರಣಾಗಿರುವನೋ?ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

(ಹಳ್ಳಿಯ ಪೆಟ್ಟಿ ಅಂಗಡಿಯಲ್ಲಿ ಮದ್ಯಪಾನ ಸೇವಿಸುತ್ತಿರುವ ದೃಶ್ಯ &ಸಿಎಲ್ 2 ನಲ್ಲಿ ಟೇಬಲ್ ಹಾಕಿರುವ ದೃಶ್ಯ)

ಇನ್ನು,ಸರ್ಕಾರವು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಬಕಾರಿ ಇಲಾಖೆಯಲ್ಲಿ ಹತ್ತಾರು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರುವುದರ ಮೂಲಕ ಎಲ್ಲೆಂದರಲ್ಲಿ ಸೀಗುತ್ತಿದ್ದ ಮದ್ಯಕ್ಕೆ ಕಡಿವಾಣ ಉದ್ದೇಶದಿಂದ ಸರ್ಕಾರದ ಅಧೀನದಕ್ಕೆ ಬರುವ ಕರ್ನಾಟಕ ಲಿಕ್ಕರ್ ಲಿಮಿಟೆಡ್ ಎನ್ನುವ ಸಂಸ್ಥೆಯ ಮೂಲಕ ಮದ್ಯವನ್ನು ತಗೆದುಕೊಳ್ಳಬೇಕು ಎನ್ನುವ ಆದೇಶವನ್ನು ಜಾರಿಗೆ ತಂದಿರುತ್ತದೆ.ಸರ್ಕಾರದಿಂದ ಪರವಾನಿಗೆ ಪಡೆದಿರುವ ಅಂಗಡಿಯವರೇ ಮಾರಾಟ ಮಾಡಲು ಮದ್ಯವನ್ನು ಖರೀದಿಸಬೇಕಾದರೆ ಕರ್ನಾಟಕ ಲಿಕ್ಕರ್ ಸಂಸ್ಥೆಯ ಅಡಿಯಲ್ಲಿ ಮದ್ಯದ ಲೆಕ್ಕವನ್ನು ನೀಡಿ ಮದ್ಯವನ್ನು ಪಡೆಯಬೇಕು ಎನ್ನುವ ಆದೇಶವಿರುತ್ತದೆ.ಆದರೆ ಇಷ್ಟೊಂದು ಕಟ್ಟುನಿಟ್ಟಿನ ಕ್ರಮಗಳ ಸುತ್ತೋಲೆಯೊಳಗೆ ಅಂಗಡಿಯವರಿಗೆ ಕರ್ನಾಟಕ ಲಿಕ್ಕರ್ ಸಂಸ್ಥೆಯು ಮದ್ಯ ಮಾರಾಟ ಮಾಡಲು ಅವಕಾಶ ನೀಡುತ್ತಿರುವಾಗ,ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಗಳಿಗೆ ಅದ್ಯಾಗೆ?ಮದ್ಯವು ದೋರಕುತ್ತದೆ ಎನ್ನುವ ಮೂಲವನ್ನು ಹುಡುಕುತ್ತಾ ಹೋರಾಟ ಪತ್ರಿಕೆಗೆ ತಿಳಿದು ಬಂದ ಸತ್ಯವೆನೆಂದರೆ,ಸರ್ಕಾರದಿಂದ ಪರವಾನಿಗೆ ಪಡೆದಿರುವ ಅಂಗಡಿಯ ಮಾಲೀಕರೇ ಹೆಚ್ಚಿನ ಲಾಭಾಂಶಗಳಿಸುವ ಹುನ್ನಾರದಿಂದ ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಪ್ರಚೋದನೆ ನೀಡುತ್ತಿದ್ದಾರೆ ಎನ್ನುವುದು.ಈ ಕೂಡಲೇ ಹರಿಹರ ಅಬಕಾರಿ ನಿರೀಕ್ಷಕ ಶಿವರಾಜನ ಕೃಪಾಕಟಾಕ್ಷದಿಂದ ತಾಲೂಕಿನಾದ್ಯಂತ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವುದರ ಜೊತೆಗೆ ಈಗಾಗಲೇ ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಜನರಿಗೆ ಕೈಗೆಟಕುವ ರೀತಿಯಲ್ಲಿ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಲು ಪ್ರಚೋದನೆ ನೀಡುತ್ತಿರುವ ಅಂಗಡಿಗಳ ಪರವಾನಿಗೆಗಳನ್ನು ರದ್ದುಗೋಳಿಸಲು ಮುಂದಾಗುವುದು ಅಬಕಾರಿ ಆಯುಕ್ತರ ಕರ್ತವ್ಯವಾಗಿದೆ.

Spread the love

Leave a Reply

Your email address will not be published. Required fields are marked *