ವಿಜಯನಗರ:ನಕಲಿ ವೈದ್ಯ ಡಿಎಚ್ಒ ಶಂಕ್ರಣ್ಣನ ಸಂಬಂಧಿಕನೆ?

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಹೋರ ರಾಜ್ಯದಿಂದ ಬಂದಿರುವ ನಕಲಿ ವೈದ್ಯರ ಹಾವಳಿಯಿಂದ ತಾಲೂಕಿನ ಜನರು ಜೀವದ ಹಂಗನ್ನು ತೊರೆದು ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ನಾಯಕನ ನಡುಗೆ ಪತ್ರಿಕೆಯು ಹಲವು ಬಾರಿ ಸುದ್ದಿ ಪ್ರಕಟಿಸುವುದರ ಮೂಲಕ ಗಾಡ ನಿದ್ರೆಗೆ ಜಾರಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಿದ್ದೆಯಿಂದ ಎಚ್ಚರಿಸುವ ಕೆಲಸವನ್ನು ಮಾಡಿದ್ದರು,ಜಿಲ್ಲೆಯ ಆರೋಗ್ಯ ಅಧಿಕಾರಿ ಶಂಕ್ರಣ್ಣ ಮಾತ್ರ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕಲು ಮುಂದೆ ಬಾರದೆ ಕುಂಟು ನೇಪ ಹೇಳುತ್ತಾ! ನಕಲಿ ವೈದ್ಯರು ಚಿಕಿತ್ಸೆಯ ನೇಪದಲ್ಲಿ ಜನಸಾಮಾನ್ಯರಿಂದ ಸುಲಿಗೆ ಮಾಡುತ್ತಿರುವ ಸಂಧಾಯದ ಮೊತ್ತದಲ್ಲಿ ಸಮಪಾಲು ಪಡೆದುಕೊಳ್ಳುವಂತೆ ಬಿಂಭಿಸಿಕೋಳ್ಳುತ್ತಿರುವುದು?ನಾಚಿಕೆಗೇಡಿನ ಸಂಗತಿಯಾಗಿದೆ.

ಈ ಹಿಂದಿನ ಸಂಚಿಕೆಯಲ್ಲಿ ಹೋರ ರಾಜ್ಯವಾದ ಆಂದ್ರಪ್ರದೇಶದಿಂದ ಬಂದ ಕೆಲವು ವ್ಯಕ್ತಿಗಳು ವೈದ್ಯಕೀಯ ಶಿಕ್ಷಣದಲ್ಲಿ ಯಾವುದೇ ಉನ್ನತ ಪದವಿಯನ್ನು ಪಡೆಯದೇ,ಕೇವಲ ಪ್ರಾಥಮಿಕ ಶಿಕ್ಷಣದ ಆಧಾರದ ಮೇಲೆ ತಾಲೂಕಿನ ಜನರಿಗೆ ವೈದ್ಯರೆಂದು ಬಿಂಭಿಸಿಕೊಳ್ಳುತ್ತಾ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸುದ್ದಿ ಪ್ರಕಟಿಸುವುದರ ಮೂಲಕ ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿರುವ ಶಂಕರ್ ನಾಯಕ್ ರವ ಗಮನಕ್ಕೆ ತಂದಿರುತ್ತೇವೆ.ತಕ್ಷಣವೇ ಕರ್ತವ್ಯದ ಜಾಗುರಕತೆಯಿಂದ ಈ ಅಧಿಕಾರಿ ಹೌದು!ಆಂದ್ರಪ್ರದೇಶದಿಂದ ಬಂದಿರುವ ಕೆಲವು ವ್ಯಕ್ತಿಗಳು ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಮನೆ,ಮನೆಗೆ ತೆರಳಿ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ನಮಗೂ ಬಂದಿದೆ.ಆದರೆ ನಾವು ಎಷ್ಟೇ ಪ್ರಯತ್ನ ಪಟ್ಟರು ಈ ನಕಲಿ ವೈದ್ಯರು ನಮ್ಮ ಕೈಗೆ ಸಿಗುತ್ತಿಲ್ಲ.ಆದುದರಿಂದ ಈ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿರುವ ಸೋಮಶೇಖರ ಮತ್ತು ಇನ್ನೂಳಿದ ಸಹಚರರ ಮೇಲೆ ದೂರು ನೀಡಿ,ತದನಂತರ ಅಕ್ರಮದಲ್ಲಿ ತೊಡಗಿರುವ ಈ ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆಯ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುತ್ತೇವೆ ಎನ್ನುವ ಉತ್ತರವನ್ನು ನೀಡಿರುವುದು ಅಧಿಕಾರಿಗಳಿಗೆ ಸೇವೆಯ ಮೇಲಿರುವ ನಿಷ್ಠೆಗೆ ಸಾಕ್ಷಿಯಾಗಿದೆ.ಆದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎನ್ನುವ ಉತ್ತರವನ್ನು ನೀಡಿ ಅನೇಕ ದಿನಗಳು ಕಳೆದರು ಈ ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಲು ಅದ್ಯಾಕೆ?ಹಿಂದೇಟು ಹಾಕುತ್ತಿರುವರೋ ಗೊತ್ತಿಲ್ಲ.

ಇನ್ನು,ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ,ಸರ್ಕಾರವು ನಾನ ಕಟ್ಟುಪಾಡುಗಳನ್ನು ನೀಡಿ ಸೇವೆ ಸಲ್ಲಿಸುವಂತೆ ಸೂಚಿಸಿರುತ್ತದೆ.ಉದಾಹರಣೆಗೆ ನೋಡುವುದಾದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಬಂದಿರುವ ರೋಗಿಗಳ ಹತ್ತಿರ ಸಹಬಾಳ್ವೆಯಿಂದ ಸಂಬಂಧಿಕರಂತೆ ನಡೆದುಕೊಳ್ಳುವುದು ವೈದ್ಯರಿಗೆ ನೀಡಿರುವ ಷರತ್ತುಗಳಲ್ಲಿ ಒಂದಾಗಿರುತ್ತದೆ.ಆದರೆ ಹೋರ ರಾಜ್ಯವಾದ ಆಂದ್ರಪ್ರದೇಶದಿಂದ ವಿಜಯನಗರ ಜಿಲ್ಲೆಯೋಳಕ್ಕೆ ನುಸಲಿರುವ ಸುಮಾರು ಮೂವತ್ತರಿಂದ ನಲವತ್ತು ಜನರು ವೈದ್ಯಕೀಯ ಶಿಕ್ಷಣದಲ್ಲಿ ಯಾವುದೇ ಪದವಿ ಪಡೆಯದೇ ಸೋಮಶೇಖರ ಅಧೀನದಲ್ಲಿರುವ ಯಾವುದೋ ಒಂದು ಲ್ಯಾಬ್ ನಲ್ಲಿ ವಿದ್ಯಾಭ್ಯಾಸ ಪಡೆದು ಎಂ.ಬಿ.ಬಿ.ಎಸ್. ವೈದ್ಯರೆಂದು ಹೇಳಿಕೊಳ್ಳುತ್ತಾ ತಾಲೂಕಿನ ಜನರ ಜೀವಕ್ಕೆ ಮಾರಕವಾಗುವಂತ ಚಿಕಿತ್ಸೆ ಮತ್ತು ಮಾತ್ರೆಗಳನ್ನು ನೀಡುತ್ತಿರುವುದು ಕಾಣುತ್ತಿದ್ದರು ತಾಲೂಕಿನ ವೈದ್ಯಾಧಿಕಾರಿ ಪ್ರವೀಣ ಮಾತ್ರ “ಕಂಡರು ಕಾಣದ ಕುರುಡನಂತೆ” ವರ್ತಿಸುತ್ತಾ ನಕಲಿ ವೈದ್ಯರು ನೀಡುವ ತಿಂಗಳ ಪ್ರಸಾದಕ್ಕೆ ಶರಣಾಗಿರುವುದು ಮೇಲ್ನೋಟಕ್ಕೆ ಕಂಡುಕೊಂಡಿರುವ ವಿಷಯವಾಗಿದೆ.ಇನ್ನು ರಾಜಾರೋಷವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ನಕಲಿ ವೈದ್ಯರ ಹಾವಳಿಯಿಂದ ತಾಲೂಕಿನ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸುದ್ದಿ ಪ್ರಕಟಿಸಿ ಗಮನಕ್ಕೆ ತಂದಿದ್ದರು ದಪ್ಪ ಚರ್ಮದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಲು ಮುಂದೆ ಬಾರದ ಮುಖ ಪ್ರೇಕ್ಷಕರಂತೆ ವರ್ತಿಸುತ್ತಿರುವ ಹಿನ್ನಲೆಯನ್ನು ಅರಿತ ಪತ್ರಿಕಾ ತಂಡವು,ನಕಲಿ ವೈದ್ಯರ ಜಾಲದ ಬಲೆಯೊಳಗೆ ಇಣುಕಿದಾಗ ಸಾರ್ವಜನಿಕರಿಂದ ಪತ್ರಿಕಾ ತಂಡಕ್ಕೆ ಒದಗಿ ಬಂದ ಮಾತುಗಳು “ಈಗಾಗಲೇ ಅನೇಕ ವರ್ಷಗಳಿಂದ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಬಿಡು ಬಿಟ್ಟುಕೊಂಡಿರುವ ಈ ಸೋಮಶೇಖರ ಎನ್ನುವ ನಕಲಿ ವೈದ್ಯ.ತನ್ನ ನಕಲಿ ವೈದ್ಯಕೀಯ ರಂಗಕ್ಕೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ತಾಲೂಕಿನ ಕೆಲವು ಕೆಲಸಕ್ಕೆ ಬಾರದ ಚೆಲಗಳಿಗೆ ಹಣವನ್ನು ನೀಡಿ ತನ್ನ ನಕಲಿ ಚಿಕಿತ್ಸೆಯ ವಿರುದ್ದ ಯಾರಾದರು ಹೋರಾಟಕ್ಕೆ ಸಜ್ಜಾದರೆ ಅಂತಹವರ ವಿರುದ್ದ ಈ ಚೆಲಗಳನ್ನು ಹರಿಹಾಯಲು ಬಿಡುತ್ತಾನಂತೆ.ಇಷ್ಟೇ ಅಲ್ಲದೆ,ತನ್ನ ನಕಲಿ ಚಿಕಿತ್ಸೆಗೆ ಅಡ್ಡಿಯಾಗದಂತೆ ತಾಲೂಕಿನ ವೈದ್ಯಾಧಿಕಾರಿ ಮತ್ತು ಶಾಸಕನಿಗೂ ಮಾಮೂಲಿ ನೀಡುತ್ತಾನೆ ಎನ್ನುವುದು.ಸಾರ್ವಜನಿಕರ ಮಾತುಗಳಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಅಡಗಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ ಬಿಡಿ.

ಆದರೆ ಜನರ ಜೀವನಕ್ಕೆ ಮಾರಕವಾಗಿರುವ ಈ ಸೋಮಶೇಖರ ಮತ್ತು ಸಹಚರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತದ ಕತ್ಯವ್ಯವಲ್ಲವೇ?ಈ ಕೂಡಲೇ ಆಂದ್ರಪ್ರದೇಶದಿಂದ ಜಿಲ್ಲೆಯ ಗಡಿಯೊಳಕ್ಕೆ ಅಕ್ರಮವಾಗಿ ನುಸಳಿಕೊಂಡು ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಮನೆ,ಮನೆಗೆ ತೆರಳಿ ಜನರ ಜೀವಕ್ಕೆ ಮಾರಕವಾಗುವ ಚಿಕಿತ್ಸೆ ನೀಡುತ್ತಿರುವ ಸೋಮಶೇಖರ ಮತ್ತು ಸಹಚರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದುದರ ಜೊತೆಗೆ ಸಾಕಿಕೊಂಡಿರುವ ಚೆಲಗಳಿಂದ ನಡೆಯುತ್ತಿರುವ ಅಕ್ರಮ ಕಂಡರು ಕಾಣದ ರೀತಿ ಮೌನವಹಿಸುಂತೆ ಜನರಲ್ಲಿ ಮೂಡಿರುವ ಭಯವನ್ನು ಹೋಗಲಾಡಿಸುವುದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಶ್ಯಕವಾಗಿದೆ.

Spread the love

Leave a Reply

Your email address will not be published. Required fields are marked *