ಕವೆಲೆತ್ತು
ರಾಣೆಬೆನ್ನೂರು ತಾಲೂಕಿನ ಕವಲೆತ್ತು ಗ್ರಾಮ ಪಂಚಾಯತಿ ಗ್ರಾಮಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಮೆಗೌಡ ಎನ್ನುವ ಅಧಿಕಾರಿಯು,ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಹಲವು ಅಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ನರೇಗಾ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಕಾಮಗಾರಿಗೆ ತಗಲುವ ಮೊತ್ತವನ್ನು ಪಲಾನುಭವಿಗಳಿಗೆ ನೀಡದೆ ಅನ್ಯತ ವ್ಯಕ್ತಿಗಳ ಖಾತೆಗೆ ಜಮಾ ಮಾಡಿಕೊಳ್ಳುವುದರ ಮೂಲಕ ಭ್ರಷ್ಟಾಚಾರದಲ್ಲಿ ತೋಡಗಿದ್ದಾರೆ ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.2022-23 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಕವಲೆತ್ತು ಗ್ರಾಮದ ಪಕ್ಕಿರಮ್ಮ ಮಲ್ಲೇಶಪ್ಪ ಹೊಳೆಸೀರಿಗೇರಿ.ಯಲ್ಲಪ್ಪ ಸಿದ್ದಪ್ಪ ಬನ್ನಿಕೋಡು.ಮಂಜಪ್ಪ ಹನುಮಂತಪ್ಪ ಹೊನ್ನಕ್ಕಳವರು.ಶಿವಮೂರ್ತೆಪ್ಪ ಎಸ್.ಕೆ.ಎನ್ನುವ ವ್ಯಕ್ತಿಗಳು ದನದಕೊಟ್ಟಿಗೆ ಮತ್ತು ಕುರಿ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ.ಈ ನಾಲ್ಕೇ ಜನರು ಮಾತ್ರ ದನದ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎನ್ನುವುದು ಪತ್ರಿಕೆ ಅನಿಸಿಕೆ ಅಲ್ಲ.ಬಹುತೇಕ ಜನರು ಈ ನರೇಗಾ ಯೋಜನೆಯಡಿಯಲ್ಲಿ ದನದ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಂಡು,ನಿರ್ಮಾಣಕ್ಕೆ ಬೇಕಾದ ಮೊತ್ತವನ್ನು ಸಹ ಪಡೆದಿರುತ್ತಾರೆ.ಆದರೆ ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಈ ನಾಲ್ಕು ಪಲಾನುಭವಿಗಳು ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡು ಅನೇಕ ವರ್ಷಗಳು ಕಳೆದರೂ ಪಲಾನುಭವಿಗಳಿಗೆ ಸರ್ಕಾರದಿಂದ ದೋರಕಬೇಕಾದ ಅನುದಾನದ ಮೊತ್ತವು ದೋರಕದಿರುವುದು ಪಂಚಾಯತಿಯ ದುರಾಡಳಿತಕ್ಕೆ ಸಾಕ್ಷಿಯಾಗಿದೆ.
ಆಗಿನ ಕೇಂದ್ರ ಸರ್ಕಾರವು ರೈತರಿಗೆ ಮತ್ತು ಜನರಿಗೆ ಅನುಕೂಲಕರವಾಗಲೆಂದೇ ದೇಶದಾದ್ಯಂತ ನರೇಗಾ ಎಂಬ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಬಡ ಜನರ ನೆಮ್ಮದಿಯ ಜೀವನಕ್ಕೆ ದಾರಿಯಾಗಿತ್ತು.ಈ ಯೋಜನೆಯ ಮೂಲ ಉದ್ದೇಶ ಯಾರಾದರೂ ವ್ಯಕ್ತಿಗಳು ಮನೆ ನಿರ್ಮಾಣ,ದನದ ಕೊಟ್ಟಿಗೆ ನಿರ್ಮಾಣ ಅಥವಾ ತಮ್ಮ ಜಮೀನುಗಳನ್ನು ತಮತಟ್ಟು ಮಾಡಿಕೊಳ್ಳುವ ಕೆಲಸಕ್ಕೆ ತಾವು ದುಡಿದ ಅಲ್ಪಸ್ವಲ್ಪ ಹಣವನ್ನು ವ್ಯರ್ಥ ಮಾಡಿಕೊಂಡು ಜೀವನ ಸಾಗಿಸಲು ಹಣದ ಕೋರತೆಯಿಂದ ಬೀದಿಗೆ ಬರುತ್ತಿರುವ ಸನ್ನಿವೇಶಗಳನ್ನು ಅರಿತ ಆಗಿನ ಕೇಂದ್ರ ಸರ್ಕಾರವು ವೈಯಕ್ತಿಕ ಕಾಮಾಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೇರವಿನ ಮೂಲಕ ಜನರ ಜೀವನಕ್ಕೆ ದಾರಿಯಾಗಿರುವುದು ಸಂತಸದ ಸಂಗತಿ.ಇನ್ನೂ ಈ ಯೋಜನೆಯ ಸೌಲಭ್ಯ ಪಡೆಯಬೇಕಾದ ಪಲಾನುಭವಿಗಳು,ಗ್ರಾಮಗಳ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ತಾವು ನಿರ್ಮಾಣ ಮಾಡುವ ಕಾಮಗಾರಿಯ ಹೆಸರನ್ನು ನೋಂದಾಹಿಸಿ ತದನಂತರ ಕಾಮಗಾರಿಗೆ ತಗಲುವ ಮೊತ್ತವನ್ನು ಕೂಲಿ ರೂಪದಲ್ಲಿ ಪಡೆಯುವುದು.ಆದರೆ ರಾಜ್ಯದಲ್ಲಿರುವ ಅದೆಷ್ಟೋ ಗ್ರಾಮ ಪಂಚಾಯತಿಯ ಅಧ್ಯಕ್ಷ,ಗ್ರಾಮಭಿವೃದ್ದಿ ಅಧಿಕಾರಿ ಮತ್ತು ಪಂಚಾಯತಿಯ ತಾಂತ್ರಿಕ ಇಂಜಿನಿಯರ್ ಗಳ ಲಂಚಾವತಾರದಿಂದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಯೋಜನೆಯು ಸಮರ್ಪಕ ರೀತಿಯಲ್ಲಿ ಜನರಿಗೆ ದೋರಕದೆ ಬಂಡವಾಳ ಶಾಹಿಗಳ ಮುಖಾಂತರ ಅಧಿಕಾರಿಗಳ ಜೇಬು ತುಂಬಿಸುವ ಯೋಜನೆಯಾಗಿರುವುದು ಪಂಚಾಯತ್ ರಾಜ್ ಇಲಾಖೆಯಲ್ಲಿರುವ ದೌರ್ಬಲ್ಯವೆಂದರೆ ತಪ್ಪಾಗಲಾರದು.ಇದೀಗ ಇಂತಹದೇ ಮಾದರಿಯಲ್ಲಿ ಕವಲೆತ್ತು ಗ್ರಾಮ ಪಂಚಾತಿಯ ಆಡಳಿತ ಮಂಡಳಿ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಇನ್ನೂ ಈ ಪಂಚಾಯತಿ ವ್ಯಾಪ್ತಿಗೆ ಬರುವ ಕವಲೆತ್ತು ಮತ್ತು ಇಂದಿರಾ ಕಾಲೋನಿಯ ಬಹುತೇಕ ಜನರು ನರೇಗಾ ಯೋಜನೆಯಡಿಯಲ್ಲಿ ಹಲವು ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳುವುದರ ಮೂಲಕ ಕಾಮಗಾರಿಗಳಿಗೆ ತಗಲುವ ಅನುದಾನದ ಮೊತ್ತವನ್ನು ಪಡೆದಿದ್ದರೆ,ಇನ್ನು ಕೆಲವರು ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡಿ ಅನೇಕ ವರ್ಷಗಳು ಕಳೆದರೂ ಕಾಮಗಾರಿಗೆ ತಗಲುವ ಅನುದಾನದ ಮೊತ್ತವನ್ನು ಪಡೆಯದೆ,ಪಂಚಾಯತಿ ಆಡಳಿತ ಮಂಡಳಿಗೆ ಮಲತಾಯಿ ಮಕ್ಕಳಂತೆ ಬಿಂಬಿಸುತ್ತಿರುವುದು ವಿಷದಾಯಕ ಸಂಗತಿ.ಇನ್ನು,ಈ ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿಯಲ್ಲಿ ಹಲವು ಕಾಮಗಾರಿಗಳು ನಿರ್ಮಾಣಗೊಂಡಿರುತ್ತವೆ.ಕೆಲವು ಅಕ್ರಮದ ಹಾದಿಯಲ್ಲಿ ನಿರ್ಮಾಣ ಹಂತ ಕಂಡಿದ್ದರೆ,ಇನ್ನು ಕೆಲವು ಸಕ್ರಮದ ಹಾದಿಯಲ್ಲಿ ನಿರ್ಮಾಣ ಹಂತದಲ್ಲಿ ಪೂರ್ಣಗೊಂಡಿರುತ್ತವೆ.ಸಕ್ರಮ ಮತ್ತು ಅಕ್ರಮದ ಹಾದಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಸುವುದರ ಮೂಲಕ ಅಕ್ರಮ ಹಾದಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಪಂಚಾಯತಿ ಅಧಿಕಾರಿಗಳು ತಿಂದು,ತೇಗಿರುವ ಪ್ರಸಾದದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೋಣ.ಆದರೆ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಬಹುತೇಕ ಕಾಮಗಾರಿಗಳಿಗೆ ತಗಲುವ ಸರ್ಕಾರದ ಅನುದಾನದ ಮೊತ್ತವನ್ನು ಇಲ್ಲಿನ ಅಧಿಕಾರ ವರ್ಗವು ಬಿಡುಗಡೆಗೋಳಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಸತ್ಯವಾಗಿದೆ.
ಆದರೆ ನರೇಗಾ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಬಹುತೇಕ ಪಲಾನುಭವಿಗಳಿಗೆ ಕಾಮಗಾರಿಗೆ ತಗಲುವ ಮೊತ್ತವನ್ನು ಬಿಡುಗಡೆಗೊಳಿಸಿರುವ ಪಂಚಾಯತಿ ಅಧಿಕಾರ ವರ್ಗವು,ಈ ನಾಲ್ಕು ಪಲಾನುಭವಿಗಳು ಈಗಾಗಲೇ ದನದ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಂಡು ಅನೇಕ ವರ್ಷಗಳು ಕಳೆದರು,ಕಟ್ಟಡಗಳ ನಿರ್ಮಾಣಕ್ಕೆ ತಗಲುವ ಮೊತ್ತವನ್ನು ಬಿಡುಗಡೆಗೊಳಿಸದೆ ಗುತ್ತಿಗೆದಾರನ ಮೇಲೆ ಕುಂಟು ನೆಪವನ್ನು ಹೇಳುತ್ತಾ ಕರ್ತವ್ಯ ಲೋಪಕ್ಕೆ ಮುಂದಾಗಿರುವ ಅಧಿಕಾರ ವರ್ಗದ ಹಿಂದಿನ ನಡೆಯ ಮಾಹಿತಿಯನ್ನು ಸಂಗ್ರಹಿಸಲು ಮುಂದಾದ ಪತ್ರಿಕೆಗೆ ಸಾರ್ವಜನಿಕ ವಲಯದಿಂದ ಕೇಳಿ ಬಂದ ಮಾತುಗಳು ಅನುದಾನದ ಮೊತ್ತವು ಬಿಡುಗಡೆಯಾಗದೆ ಅತೃಪ್ತರಾಗಿರುವ ಪಲಾನುಭವಿಗಳು ಇಲ್ಲಿನ ಅಧಿಕಾರ ಮಂಡಳಿಗೆ ಸೂಕ್ತ ರೀತಿಯಲ್ಲಿ ಪರ್ಸಂಟೆಜ್ ನೀಡದಿರುವ ಕಾರಣಕ್ಕೆ ಪಲಾನುಭವಿಗಳಿಗೆ ಸಿಗಬೇಕಾದ ಮೊತ್ತಕ್ಕೆ ಪಂಚಾಯತಿಯ ಅಧಿಕಾರ ವರ್ಗವು ಅಡ್ಡಿಗಾಲು ಹಾಕಿದೆ ಎನ್ನುವುದು.ಸಾರ್ವಜನಿಕರ ಮಾತಿನಲ್ಲಿ ಆದೇಷ್ಟರ ಮಟ್ಟಿಗೆ ಸತ್ಯ ಅಡಗಿದೆ ಎನ್ನುವುದನ್ನು ಅಧಿಕಾರಿಗಳೆ ಅರ್ಥಹಿಸಿಕೊಳ್ಳುವುದು ಸೂಕ್ತವಾಗಿದೆ.ಏಕೆಂದರೆ?ಕಳ್ಳದಾರಿಯಲ್ಲಿ ನಡೆದಿರುವ ವ್ಯವಹಾರದ ಮಾಹಿತಿ ಮಾತ್ರ ಸಾರ್ವಜನಿಕರಿಗೆ ಗೋತ್ತಾಗಿರುತ್ತದೆ.ಆದರೆ ಎಷ್ಟರ ಅಂಕಿ ಸಂಖ್ಯೆಯಲ್ಲಿ ನಡೆದಿದೆ ಎನ್ನುವುದು ಅಧಿಕಾರಿಗಳಿಗೆ ಮತ್ತು ಅಕ್ರಮದ ಹಾದಿಯಲ್ಲಿ ಕಾಮಗಾರಿ ನಿರ್ಮಾಣ ಮಾಡಿರುವ ವ್ಯಕ್ತಿಗಳಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತಿರುವುದಿಲ್ಲ.ನರೇಗಾ ಯೋಜನೆಯಡಿಯಲ್ಲಿ ಈ ಪಂಚಾಯತಿಯ ಅಧಿಕಾರಿಗಳು ಮಾತ್ರ ಪರ್ಸಂಟೆಜ್ ತಗೆದುಕೊಳ್ಳುತ್ತಾರೆ ಎನ್ನುವುದು ನಮ್ಮ ಮಾತಲ್ಲ.ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿ ಅಧಿಕಾರ ವರ್ಗದವರು ನರೇಗಾ ಯೋಜನೆಯ ಷರತ್ತುಗಳನ್ನೇ ಬಂಡವಾಳ ಮಾಡಿಕೊಂಡು ಜೇಬುಗಳನ್ನು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ದನದ ಕೊಟ್ಟಿಗೆಗಳನ್ನು ನಿರ್ಮಾಣ ಮಾಡಿಕೊಂಡು ಅನೇಕ ವರ್ಷಗಳು ಕಳೆದರೂ ಸರ್ಕಾರದ ಅನುದಾನದ ಮೊತ್ತವನ್ನು ಪಡೆಯದೆ ಜೀವನದಲ್ಲಿ ಕಂಗಾಲಾಗಿರುವ ಪಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ಕಾಮಗಾರಿಗೆ ತಗಲುವ ಮೊತ್ತವನ್ನು ಬಿಡುಗಡೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ,ಈಗಾಗಲೇ ಪಂಚಾಯತಿಯಲ್ಲಿ ಗ್ರಾಮಭಿವೃದ್ಧಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಮೇಗೌಡ ಎನ್ನುವ ಅಧಿಕಾರಿಯು ದಾಖಲೆಗಳಲ್ಲಿ ಪಲಾನುಭವಿಗಳ ರುಜು ಪಡೆಯದೆ ಅನ್ಯತಾ ವ್ಯಕ್ತಿಗಳ ರುಜು ಮೇರೆಗೆ ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮಾತುಗಳ ಆದರದ ಮೇರೆಗೆ ಪಂಚಾಯತಿ ಕಾರ್ಯಾಲಯದಲ್ಲಿರುವ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ತನಿಖೆಯನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡದ ಗ್ರಾಮಭಿವೃದ್ಧಿ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತು ಮಾಡುವುದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವಶ್ಯಕವಾಗಿದೆ.