ಪ್ರಸ್ತುತ ರಾಜಕಾರಣದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಟಿಕೆ,ಟಿಪ್ಪಣಿಗಳನ್ನು ಮಾಡುತ್ತಾ,ರಾಜಕೀಯ ವ್ಯವಸ್ಥೆಯನ್ನೆ ಹದಗೆಡಿಸುತ್ತಿರುವುದು ಹೊಸದೇನಲ್ಲ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಕಗ್ಗಂಟಾಗಿರುವ ರಾಜ್ಯಧ್ಯಕ್ಷ ಬದಲಾವಣೆಯ ಕೂಗು ಸ್ವಪಕ್ಷಿಯರಾದ ಬಸವನಗೌಡ ಯತ್ನಾಳ್ ಬಣ ಮತ್ತು ವಿಜೆಯಂದ್ರ ಬಣದ ಪ್ರತಿಷ್ಠೆಯ ತಾರಕಕ್ಕೆ ಬಂದೊದಗಿದ್ದರೆ,ಇತ್ತ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆಯ ಕೂಗು ಪಕ್ಷವನ್ನು ಮುಜುಗರಕ್ಕೆ ಹಿಡು ಮಾಡುತ್ತಿರುವುದು ಕಂಡುಬಂದಿದೆ.ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಬಂದಿರುವ ಮುಡಾ ಹಗರಣದ ಆರೋಪದಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರಬಹುದು ಎನ್ನುವ ಮುಂದಾಲೋಚನೆಯಿಂದ ಪಕ್ಷದ ಕೆಲವರು ಬರಿದಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಟವಲ್ ಹಾಕಿಕೊಳ್ಳಲು ಮುಂದಾಗುತ್ತಿರುವುದು ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಇನ್ನು,ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ನಾನೇ ಎಂದು ಬಹಿರಂಗವಾಗಿ ಘೋಷಿಸಿಕೊಳ್ಳುತ್ತಿರುವುದು ಪಕ್ಷದ ಕೆಲ ಸಚಿವರ ಮುನಿಸುಗಳಿಗೆ ಕಾರಣವಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ನಾನೇ ಮುಂದಿನ ಸಿಎಂ ಎನ್ನುವ ಡಿಕೆಶಿಯ ಘೋಷಣೆ ಸ್ವಪಕ್ಷದ ಸಿದ್ದರಾಮಯ್ಯ ಬಣದ ಶಾಸಕ ಮತ್ತು ಸಚಿವರಿಗೆ ಮನಸ್ತಾಪಕ್ಕೆ ದಾರಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತಿರುವ ದೃಶ್ಯಗಳಾಗಿವೆ.ಅಂದು ಸರ್ಕಾರದ ಅಧೀನಕ್ಕೆ ಬರುವ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಬದಲಾವಣೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು,ಕೆ.ಏನ್.ರಾಜಣ್ಣ ಮತ್ತು ತಾವುಗಳು ಜೊತೆಗೂಡಿ ಅಧ್ಯಕ್ಷ ಸ್ಥಾನವನ್ನು ನಿರ್ಣಯ ಮಾಡಿ ಎಂದು ಡಿಕೆಶಿಗೆ ಸೂಚಿಸಿದ್ದರು.ಆದರೆ ಸಭೆಯಲ್ಲಿ ಆಸಿನರಾದ ಕೆ.ಏನ್.ರಾಜಣ್ಣ ಸಭೆಗೆ ಡಿಕೆಶಿ ಬರುತ್ತಿದ್ದ ಹಾಗೆ ಸಭೆಯಿಂದ ಹೊರ ನಡೆದರೂ.ರಾಜಣ್ಣನವರು ಏಕಾಏಕಿ ಸಭೆಯಿಂದ ನಿಮ್ಮನ್ನು ಮಾತನಾಡಿಸದೆ ಹೊರಗೆ ಹೋದ ಬಗ್ಗೆ ಪತ್ರಿಕಾ ಮಿತ್ರರು ಡಿಕೆಶಿಯನ್ನು ಪ್ರಶ್ನಿಸಿದಾಗ,ಅವರಿಗೆ ಅನಾರೋಗ್ಯದ ಸಮಸ್ಯೆ ಇದೆ ಆ ಕಾರಣದಿಂದ ಹೋದರು ಎನ್ನುವ ಮೂಲಕ ಪಕ್ಷದಲ್ಲಿರುವ ತೊಡಕುಗಳನ್ನು ಸಮರ್ಥಿಸಿಕೊಳ್ಳಲು ಮುಂದಾದರೆ.ಅಂದು ಅಧ್ಯಕ್ಷ ಸ್ಥಾನವನ್ನು ನಿರ್ಣಯ ಮಾಡಬೇಕಾದ ಸಭೆಯಿಂದ ಹೊರ ನಡೆದ ರಾಜಣ್ಣ ಮನೆಗೆ ಅಥವಾ ಇನ್ನಿತರೇ ಭಾಗಕ್ಕೆ ಹೋಗಿದ್ದಾರೆ ಏನು?ಸಮಸ್ಯೆ ಬರುತ್ತಿರಲಿಲ್ಲ.ಆದರೆ ಸತೀಶ ಜಾರಕಿಹೊಳೆ ಮನೆಯಲ್ಲಿ ನೆರವೇರಿದ್ದ ವಾಲ್ಮೀಕಿ ಸಮಾಜದ ಶಾಸಕರ,ಸಚಿವರ ಸಮ್ಮುಖದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪಾಲ್ಗೊಂಡಿರುವುದು ಪಕ್ಷದಲ್ಲಿ ಉಂಟಾಗಿರುವ ಬಿನ್ನಾಭಿಪ್ರಯಕ್ಕೆ ಸಾಕ್ಷಿಯಾಗಿದೆ.
ಅದು ಬಿಡಿ ನಮ್ಮ ರಾಜಕಾರಣಿಗಳು ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು ಎಲ್ಲಿಗೆ ಬೇಕಾದರೂ ಹೋಗುತ್ತಾರೆ,ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ನೀಡುತ್ತಾರೆ.ಆದರೆ ಈ ರಾಜಕಾರಣಿಗಳು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮೀಸಲು ಮುಂದಾಗದೆ ಒಬ್ಬರ ಮೇಲೆ ಮತ್ತೊಬ್ಬರು ಟಿಕೆ ಮಾಡುತ್ತಾ ರಾಜಕೀಯ ವ್ಯವಸ್ಥೆಗೆ ಕಳಂಕ ತರುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಇನ್ನು,ಈ ಬಾರಿ ನಡೆದ ರಾಜ್ಯದ ಅಧಿವೇಶನದಲ್ಲಿ ವಿರೋಧಪಕ್ಷದ ನಾಯಕ ಆರ್,ಅಶೋಕ ರಾಜ್ಯದ ಒಟ್ಟು ಸಾಲ 7.81 ಲಕ್ಷ ಕೋಟಿ.ಆದರೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬರ ಅವಧಿಯಲ್ಲಿ ಬರೋಬ್ಬರಿ 4.91ಲಕ್ಷ ಕೋಟಿ ಸಾಲ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ದುರಾಡಳಿತದವನ್ನು ಜನರ ಮುಂದೆ ತಂದಿಡುವ ಪ್ರಯತ್ನದಲ್ಲಿರುವಾಗಲೇ,ಇತ್ತ ಸಿದ್ದರಾಮಯ್ಯ 2014-15 ರಲ್ಲಿ ದೇಶದ ಸಾಲ 53.60 ಲಕ್ಷ ಕೋಟಿ ರೂಪಾಯಿ.ಆದರೆ ಈಗ 200 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಬಿಜೆಪಿ ಪಕ್ಷದ ದುರಾಡಳಿತವನ್ನು ಎತ್ತಿ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದ್ದರು.ಅದು ಏನೇ ಇರಲಿ,ಈ ರಾಜಕಾರಣಿಗಳು ಒಬ್ಬರ ಮೇಲೆ ಮತ್ತೊಬ್ಬರು ಟೀಕಿಸುವ ಬರದಲ್ಲಿ ಜನರ ಏಳಿಗೆಗೆ ಶ್ರಮೀಸಿರುವುದಾದರು ಏನು? ಇನ್ನೂ ಸಂವಿಧಾನದನ್ವಯ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರತಿಯೊಂದು ರಾಷ್ಟೀಯ ಪಕ್ಷಗಳು,ಜನರ ಏಳಿಗೆಗೆ ಶ್ರಮೀಸುವುದರ ಜೊತೆಗೆ ದೇಶದ ಅಭಿವೃದ್ಧಿಯತ್ತ ಮುಖ ಮಾಡುವುದು ಆ ಪಕ್ಷಗಳ ಅದ್ಯ ಕರ್ತವ್ಯವಾಗಿರುತ್ತದೆ.ಆದರೆ ನಮ್ಮ ರಾಜಕೀಯ ಪಕ್ಷಗಳು ಮಾತ್ರ ದೇಶದ ಮೇಲೆ ಸಾಲದ ಹೊರೆ ಏರುತ್ತಾ,ತಮ್ಮ ರಾಜಕೀಯ ಭವಿಷ್ಯದ ಜೊತೆಗೆ ಕುಟುಂಬಗಳು ಕೂತು ತಿಂದರು ಕರಗದಷ್ಟು ಆಸ್ತಿಗಳನ್ನ ಮಾಡಿಕೊಳ್ಳುತ್ತಿರುವುದು ಹೊಸದೆನಲ್ಲಾ?
ಇನ್ನು,ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ರಾಜ್ಯದಲ್ಲಿ ಜಾರಿಗೋಳಿಸಿರುವ ಭಾಗ್ಯಗಳನ್ನು ಈಡೇರಿಸುವ ಸಲುವಾಗಿ ಸಾಲ ಮಾಡಿದ್ದೇವೆ ಎನ್ನುವ ಕಾರಣ ನೀಡಿ ದಿನ ಬಳಸುವ ಸಾಮಗ್ರಿಗಳ ಮೇಲೆ ಇನ್ನಿಲ್ಲದ ತೇರಿಗೆಗಳನ್ನು ವಿಧೀಸುತ್ತ ರಾಜ್ಯದ ಜನರನ್ನು ಮತ್ತಷ್ಟು ಸಾಲದ ಸುಳಿಯಲ್ಲಿ ಸಿಲುಕಿಸುವಂತೆ ಮಾಡುತ್ತಿರುವುದು ರಾಜಕೀಯ ದುರಾಡಳಿತಕ್ಕೆ ಸಾಕ್ಷಿಯಾಗಿದೆ.ಈಗಾಗಲೇ ತಮ್ಮ ರಾಜಕೀಯ ಭವಿಷ್ಯದ ಹಿನ್ನಲೆಯಿಂದ ಈಗಿನ ರಾಜಕಾರಣಿಗಳು ದೇಶ ಮತ್ತು ರಾಜ್ಯದ ಮೇಲೆ ಸಾಲಗಳನ್ನು ಮಾಡುತ್ತಾ ಸ್ವತಂತ್ರವಾಗಿ ಬದುಕುತ್ತಿರುವ ಜನರಿಗೆ ಸ್ವಾತಂತ್ರವಿಲ್ಲದಂತೆ ಮಾಡುತ್ತಿರುವುದು ರಾಜಕೀಯ ಪಕ್ಷಗಳ ಕೆಟ್ಟ ಮನಸ್ಥಿತಿಗೆ ಕಾರಣವಾಗುತ್ತಿದೆ.ಈಗಾಗಲೇ ರಾಜ್ಯದಲ್ಲಿ ಘೋಷಣೆ ಮಾಡಿರುವ ಕೆಲವು ಭರವಸೆಗಳು ಜನರ ಜೀವನಕ್ಕೆ ಮಾರಕವಾಗಿದ್ದವೆ ಎನ್ನುವುದು ಕೆಲ ಹಿರಿಕರ ಅಭಿಪ್ರಾಯವಾದರೆ,ಇನ್ನು ಇಂತಹ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ದೇಶವು ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುವುದರಲ್ಲಿ ಯಾವುದೇ ಸಂಧೇಹವಿಲ್ಲ ಆದುದರಿಂದ ಅನಾವಶ್ಯವಾಗಿ ಜನರಿಗೆ ನೀಡುತ್ತಿರುವ ಭಾಗ್ಯಗಳನ್ನು ಕಡಿತಗೊಳಿಸಿ ದೇಶದಲ್ಲಿರುವ ಜನರಿಗೆ ಶಿಕ್ಷಣಕ್ಕೆ ಹೊತ್ತು ಕೊಟ್ಟರೆ ದೇಶವು ಪ್ರಗತಿಯತ್ತ ಸಾಗುತ್ತದೆ ಎನ್ನುವುದು ಸಂಶೋದಕರ ಅನಿಸಿಕೆಯಾಗಿದೆ.