ತುಮಕೂರು
ವರದಿ:ನಟರಾಜ್
ಕಳೆದ ತಿಂಗಳ ಸಂಚಿಕೆಯಲ್ಲಿ ತುಮಕೂರು ಜಿಲ್ಲೆ ಕೋರಟಗೆರೆ ತಾಲೂಕಿನ ವ್ಯಾಪ್ತಿಗೆ ಬರುವ ದಾಸಲಕುಂಟೆ ಗ್ರಾಮದಲ್ಲಿರುವ ಕುಡಿಯುವ ಶುದ್ದ ನೀರಿನ ಘಟಕಗಳಿಂದ ಗ್ರಾಮದ ಜನರಿಗೆ ಆಗುತ್ತಿರುವ ತೊಂದರೆಗಳಿಗೆ ಸಂಬಂಧಿಸಿದಂತೆ “ಗೃಹ ಸಚಿವರ ತವರು ಕ್ಷೇತ್ರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ” ಎಂಬ ಶೀರ್ಷಿಕೆಯಡಿಯಲ್ಲಿ ನಾಯಕನ ನಡುಗೆ ಪತ್ರಿಕೆಯು ಸುದ್ದಿ ಪ್ರಕಟಿಸಿತ್ತು.ಪ್ರಕಟಗೊಂಡ ಸುದ್ದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಕುರಂಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ದಾಸಲುಕುಂಟೆ ಗ್ರಾಮದಲ್ಲಿ ಅವವ್ಯಸ್ಥೆಯ ಹಂತಕ್ಕೆ ಬಂದಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ವೀಕ್ಷಣೆ ಮಾಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಆದೇಶಿಸಿತ್ತು.ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳಕ್ಕೆ ಧಾವಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕುರಂಕೋಟೆ ಪಂಚಾಯತಿಯ ಗ್ರಾಮಭಿವೃದ್ಧಿ ಅಧಿಕಾರಿಗಳು ಅವ್ಯವಸ್ಥೆಯ ಹಂತಕ್ಕೆ ಬಂದಿರುವ ಕುಡಿಯುವ ಶುದ್ದ ನೀರಿನ ಘಟಕದಿಂದ ಗ್ರಾಮದ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದರ ಮೂಲಕ ಘಟಕದ ನಿರ್ಮಾಣಕ್ಕೆ ಅನುದಾನವನ್ನು ತರುವ ಕೆಲಸಕ್ಕೆ ಮುಂದಾಗಿದ್ದರು.
ದಾಸಲುಕುಂಟೆ ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಈ ಹಿಂದೆ ಸರ್ಕಾರವು ಕುಡಿಯುವ ನೀರು ಸರಬರಾಜು ಇಲಾಖೆಯಡಿಯಲ್ಲಿ ಕುಡಿಯುವ ಶುದ್ದ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ,ಘಟಕಗಳ ನಿರ್ವಾಹಣೆಯ ಜವಾಬ್ದಾರಿಯನ್ನು ಸಂಬಂಧಪಟ್ಟ ಕುರಂಕೋಟೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಗೆ ನೀಡಿರುತ್ತದೆ.ಆದರೆ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನದಿಂದ ಶುದ್ದ ನೀರಿನ ಘಟಕಗಳು ದನದ ಕೊಟ್ಟಿಗೆಗಳಾಗಿ ಮಾರ್ಪಾಡಾಗಿರುವ ಹಿನ್ನಲೆಯಲ್ಲಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಸುಮಾರು ಮೂರರಿಂದ ನಾಲ್ಕು ಕಿಲೋ ಮೀಟರ್ ಹಂತರದಲ್ಲಿರುವ ಪಕ್ಕದ ಗ್ರಾಮಗಳಿಂದ ತರುವ ವ್ಯವಸ್ಥೆಯನ್ನು ಕಂಡು ಗೃಹ ಸಚಿವರ ಕ್ಷೇತ್ರದಲ್ಲಿಯೇ ಇಂತಹ ಪರಿಸ್ಥಿತಿ ಉದ್ಬವವಾದರೆ ಇನ್ನೂ ರಾಜ್ಯದ ಜನರ ಪಾಡೇನು?ಎನ್ನುವ ಅಂಶವನ್ನಿಟ್ಟುಕೊಂಡು ಅವ್ಯವಸ್ಥೆ ಹಂತಕ್ಕೆ ಬಂದಿರುವ ಕುಡಿಯುವ ಶುದ್ಧ ನೀರಿನ ಘಟಕಗಳನ್ನು ಮರು ನಿರ್ಮಾಣ ಮಾಡಿ ಗ್ರಾಮದ ಜನರಿಗೆ ಕುಡಿಯಲು ನೀರಿನ ಸೌಲಭ್ಯ ಕಲ್ಪಿಸುವಂತೆ ಪತ್ರಿಕೆಯು ಗಾಡ ನಿದ್ರೆಗೆ ಜಾರಿರುವ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿತ್ತು.ಸುದ್ದಿಯ ಬೆನ್ನಲ್ಲೇ ಶುದ್ಧ ನೀರಿನ ಘಟಕದ ಪರಿಶೀಲನೆಗೆ ಮುಂದಾದ ತಾಲೂಕು ದಂಡಾಧಿಕಾರಿ ಮಂಜುನಾಥ್ ರವರು ಬೇಸಿಗೆ ಕಾಲದ ಸಮಯದಲ್ಲಿ ಕುಡಿಯುವ ನೀರಿಗಾಗಿ ಜನರು ಪರಿದಾಡುತ್ತಿರುವ ಪರಿಸ್ಥಿತಿಯನ್ನು ಮನಗಂಡು ಆ ಕ್ಷಣವೇ ಬೇಜವಾಬ್ದಾರಿತನದ ಕರ್ತವ್ಯಕ್ಕೆ ಮುಂದಾಗಿರುವ ಗ್ರಾಮಪಂಚಾಯತಿ ಅಧಿಕಾರಿಗಳಿಗೆ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಪೂರೈಕೆಯಾಗುವಂತೆ ಮಾಡುವುದರ ಜೊತೆಗೆ ಘಟಕಕ್ಕೆ ತಗಲುವ ಮೊತ್ತದ ಎಷ್ಟಿಮೆಂಟ್ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದರು.
ತಾಲೂಕು ದಂಡಾಧಿಕಾರಿಗಳ ಸೂಚನೆಯ ಮೇರೆಗೆ ಗ್ರಾಮದಲ್ಲಿರುವ ಕುಡಿಯುವ ಶುದ್ಧ ನೀರಿನ ಘಟಕಗಳ ಮರು ನಿರ್ಮಾಣಕ್ಕೆ ಒಂದು ಲಕ್ಷದ ಐವತ್ತು ಸಾವಿರ ತಗಲುತ್ತೆ ಎನ್ನುವ ಮಾಹಿತಿ ಸಲ್ಲಿಸಿ,ದುರಸ್ತಿಯ ಕೆಲಸಕ್ಕೆ 2024-25ನೇ ಸಾಲಿನ 15 ನೇ ಹಣಕಾಸಿನಲ್ಲಿ ಪಂಚಾಯತಿಯಿಂದ 80000 ಸಾವಿರ ರೂ ಗಳ ಅನುದಾನ ನೀಡುತ್ತೇವೆ,ಇನ್ನೂಳಿದ ಅನುದಾನವನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬಿಡುಗಡೆಗೊಳಿಸುತ್ತೇವೆ ಎನ್ನುವುದನ್ನು ಪತ್ರಿಕೆಗೆ ಹಂಚಿಕೊಂಡಿರುತ್ತಾರೆ.ಈಗಾಗಲೇ ಪಂಚಾಯತಿಯ ಅನುದಾನದ ಮೊತ್ತದಲ್ಲಿ ಒಂದು ಶುದ್ದ ನೀರಿನ ಘಟಕದ ಮರು ನಿರ್ಮಾಣದ ದುರಸ್ತಿ ಕಾರ್ಯವನ್ನು ಮಾಡಿದ್ದು,ಇನ್ನೊಂದು ಘಟಕದ ದುರಸ್ತಿ ಕಾರ್ಯ ಮುಗಿಯುವವರೆಗೂ ಕುಡಿಯುವ ನೀರಿಗಾಗಿ ಮರು ನಿರ್ಮಾಣವಾಗಿರುವ ಘಟಕವನ್ನು ಉಪಯೋಗಿಸಿ ಎನ್ನುವ ಆಶ್ವಾಸನೆಯನ್ನು ಅಧಿಕಾರಿಗಳು ನೀಡಿರುತ್ತಾರೆ.ಆದರೆ ದುರಸ್ತಿ ಮಾಡುವ ಆಶ್ವಾಸನೆ ನೀಡಿ ತಿಂಗಳುಗಳೆ ಕಳೆದರೂ ಅವ್ಯವಸ್ಥೆ ಹಂತಕ್ಕೆ ಬಂದಿರುವ ಘಟಕವು ದುರಸ್ತಿಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.ಈ ಕೂಡಲೇ ಗೃಹ ಸಚಿವರು ಬೇಸಿಗೆ ಕಾಲದ ಸಮಯದಲ್ಲಿ ಜನರಿಗೆ ಹೆಚ್ಚಿನದಾಗಿ ನೀರಿನ ಅವಶ್ಯಕತೆ ಇರುವುದನ್ನು ಮನಗಂಡು ಈಗಾಗಲೇ ದಾಸಲಕುಂಟೆ ಗ್ರಾಮದಲ್ಲಿ ಇನ್ನು,ದುರಸ್ತಿಯಾಗದ ಇನ್ನೊಂದು ಶುದ್ದ ನೀರಿನ ಘಟಕವನ್ನು ಬಹು ಬೇಗನೆ ಮರು ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಗ್ರಾಮದಲ್ಲಿ ತಾಂಡವಾಡುತ್ತಿರುವ ನೀರಿನ ಹಾಹಕಾರಕ್ಕೆ ಮುಕ್ತಿ ದೋರಕಿಸಿಕೊಡಬೇಕೆನ್ನುವುದು ಗ್ರಾಮದ ಜನರ ಆಶಯವಾಗಿದೆ.