ಸಾರ್ವಜನಿಕರಿಗೆ ಕಿರಿಕಿರಿ ತಂದ ಆಟೋ ಚಾಲಕರ ದುರ್ನಡತೆ

 

 

 

 

ಹರಿಹರ

ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬ ವಾಹನ ಸವಾರನು,ಸರ್ಕಾರವು ವಾಹನಗಳ ಕಾಯ್ದೆಯಡಿಯಲ್ಲಿ ರೂಪಿಸಿರುವ ಸಂಚಾರದ ನಿಯಮಗಳನ್ನು ಪಾಲಿಸುತ್ತಾ ಮತ್ತೊಬ್ಬರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ರಸ್ತೆಗಳಲ್ಲಿ ಸಂಚಾರಕ್ಕೆ ಮುಂದಾಗುವುದು ಆ ಚಾಲಕನ ಆದ್ಯ ಕರ್ತವ್ಯವಾಗಿರುತ್ತದೆ.ಒಂದು ವೇಳೆ ಈ ಚಾಲಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಮನಬಂದಂತೆ ವಾಹನಗಳನ್ನು ಸಂಚರಿಸುತ್ತಿರುವುದು ಕಂಡುಬಂದಲ್ಲಿ ಸಂಚಾರಿ ನಿಯಮದ ಉಲ್ಲಂಘನೆಗೆ ಒಳ ಪಡುವ ದಂಡವನ್ನು ವಸೂಲಿ ಮಾಡುವುದರ ಜೊತೆಗೆ ರಸ್ತೆ ನಿಯಯಮಗಳನ್ನು ಮೀರದಂತೆ ಸಂಚಾರಕ್ಕೆ ಮುಂದಾಗಬೇಕು ಎನ್ನುವ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಸಾರಿಗೆ ಮತ್ತು ಪೊಲೀಸ್ ಇಲಾಖೆಯು ಹೊತ್ತಿರುತ್ತದೆ.ಆದರೆ ಈಗಾಗಲೇ ಗಾಡ ನಿದ್ರೆಗೆ ಜಾರಿರುವ ದಾವಣಗೆರೆ ಜಿಲ್ಲೆಯ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ನಿದ್ದೆಯಲ್ಲಿ ತಲ್ಲೀನರಾಗಿರುವುದನ್ನು ಅರಿತ ಅದೆಷ್ಟೋ ಆಟೋ ಚಾಲಕರು ಸರ್ಕಾರ ವೀಧಿಸಿರುವ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಆಟೋಗಳಲ್ಲಿ ಮನಬಂದಂತೆ ಜನರನ್ನು ತುಂಬಿಕೊಂಡು ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತಂದೊಡ್ಡುವ ಕೆಲಸಕ್ಕೆ ಮುಂದಾಗಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಈಗಾಗಲೇ ಜನಸಾಮನ್ಯರ ಪ್ರಯಾಣಕ್ಕೆ ಅನುಕೂಲ ನೀಡುತ್ತೇವೆ ಎನ್ನುವ ನಾಟಕೀಯದ ಮುಖವಾಡ ಧರಿಸಿ ನೋಂದಣಿ ಪಡೆದಿರುವ ಅದೆಷ್ಟೋ ಆಟೋ ಮಾಲೀಕರು ತಮ್ಮ ಶ್ರೀಮಂತಿಕೆಯ ಲಾಭಕ್ಕಾಗಿ ಜನರ ಜೀವದ ಜೊತೆ ಆಟವಾಡುತ್ತಿರುವುದು ಇಲ್ಲಿನ ಜಿಲ್ಲಾಡಳಿತದ ದುರಾದಳಿತಕ್ಕೆ ಸಾಕ್ಷಿ ಎಂಬಂತೆ ತೋರುತ್ತಿದೆ.ಇನ್ನು,ದಿನ ಬೆಳಗಾದರೆ ಈ ಆಟೋ ಚಾಲಕ/ಮಾಲೀಕರು ಹರಿಹರ ನಗರ ಪ್ರದೇಶದಿಂದ ದಾವಣಗೆರೆ ನಗರಕ್ಕೆ ಆಟೋಗಳಲ್ಲಿ ಜನರನ್ನು ಕೂರಿಸಿಕೊಂಡು ತಮ್ಮ ದಿನ ನಿತ್ಯದ ಕಾಯಕಕ್ಕೆ ಮುಂದಾಗಿರುವುದು ಆಟೋ ಚಾಲಕರ ದುಡಿಮೆಯ ಸಮಯ ಪ್ರಜ್ಞೆಗೆ ಸಾಕ್ಷಿಯಾಗಿದೆ.ಈ ಚಾಲಕರು ಆಟೋಗಳಲ್ಲಿ ಜನರನ್ನು ಕೂರಿಸಿಕೊಂಡು ತಮ್ಮ ದುಡಿಮೆಯ ಉದ್ದೇಶದಿಂದ ಜನರು ತಲುಪಬೇಕಾದ ಜಾಗಕ್ಕೆ ತಲುಪಿಸುತ್ತಿರುವುದರ ಬಗ್ಗೆ ಪತ್ರಿಕೆಯದ್ದೇನೂ ತಕರಾರು ಇಲ್ಲ.ಆದರೆ ಆಟೋಗಳಲ್ಲಿ ಜನರನ್ನು ಹೊತ್ತೋಯ್ಯುತ್ತಿರುವ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸದೆ ಆಟೋಗಳಲ್ಲಿ ಮೂರು ಜನಕ್ಕಿಂತ ಹೆಚ್ಚಿನ ಜನರನ್ನು ಅಂದರೆ ಎಂಟರಿಂದ ಹತ್ತು ಜನರನ್ನು ಕೂರಿಸಿಕೊಂಡು ವೇಗದ ಮೀತಿಗಿಂತ ಹೆಚ್ಚಿನ ವೇಗದಲ್ಲಿ ಸಂಚಾರಕ್ಕೆ ಮುಂದಾಗಿರುವುದು ವಿಷದಾಯಕ ಸಂಗತಿ.ಈ ಚಾಲಕರು ಕೆಲವೊಮ್ಮೆ ಹತ್ತು ಜನಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಹೋಗುವುದು ಸಹ ಉಂಟು ಬಿಡಿ.ಈ ಚಾಲಕರ ಚಾಲನೆಯ ದುರ್ವರ್ತನೆಯಿಂದ ಸಂಚರಿಸುವ ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ಬರಬಹುದು ಎನ್ನುವ ಮುಂದಾಲೋಚನೆಯಿಂದ ಕಳೆದ ಸಂಚಿಕೆಯಲ್ಲಿ ನಾಯಕನ ನಡುಗೆ ಪತ್ರಿಕೆಯು ಸುದ್ದಿ ಪ್ರಕಟಿಸಿತ್ತು.ಸುದ್ದಿ ಪ್ರಕಟಗೊಂಡ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹರಿಹರ ನಗರ ಪ್ರದೇಶದಲ್ಲಿ ಜನರ ಪ್ರಯಾಣಕ್ಕೆ ಮುಂದಾಗಿರುವ ಆಟೋಗಳ ದಾಖಲಾತಿಗಳನ್ನು ಪರೀಕ್ಷಿಸಲು ಮುಂದಾಗಿರುವುದು ಒಂದಡೆ ಕೇಳಿಬಂದರೆ,ಇನ್ನೊಂದಡೆಯಲ್ಲಿ ಹರಿಹರ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ನಗರದಲ್ಲಿರುವ ಎಲ್ಲಾ ಆಟೋ ಚಾಲಕರನ್ನು ಠಾಣೆಗೆ ಕರೇಹಿಸಿ ರಸ್ತೆ ಸಂಚಾರದ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಆಟೋಗಳನ್ನು ಚಲಾಹಿಸಬೇಕು ಎನ್ನುವ ತಿಳಿ ಹೇಳುವ ಮೂಲಕ ಚಾಲಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ವಿಷಯ.

ಆದರೆ,ತಾಲೂಕಿನ ಜನರ ದುರ್ದೈವವೋ ಅಥವಾ ಅಧಿಕಾರಿಗಳ ನಿರ್ಲಕ್ಷತನೋವೊ ಗೊತ್ತಿಲ್ಲ,ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಜನರ ಪ್ರಾಣಕ್ಕೆ ಕುತ್ತು ತಂದೊಡ್ಡುತ್ತಿರುವ ಆಟೋಗಳು ಸಂಚರಿಸುವ ರಸ್ತೆ ಮಾರ್ಗದ ಸಂಪೂರ್ಣ ಮಾಹಿತಿಯನ್ನು ಸುದ್ದಿಯ ಮುಖಾಂತರ ನೀಡಿದರು ಅದ್ಯಾಕೆ ಈ ಅಧಿಕಾರಿಗಳು ರಸ್ತೆ ಸಂಚಾರದ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಆಟೋ ಚಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳದೆ,ನಿಯಮ ಉಲ್ಲಂಘಿಸದೆ ಚಾಲನೆ ಮಾಡುತ್ತಿರುವ ಚಾಲಕರಿಗೆ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವುದರ ಹಿನ್ನಲೆಯಾದರೂ ಏನು?ದಿನ ಬೆಳಗಾದರೆ ಕೆಲಸಗಳ ನೀಮಿತ್ತ ನೂರಾರು ಜನರು ಹರಿಹರ ನಗರದಿಂದ ದಾವಣಗೆರೆ ನಗರಕ್ಕೆ ತೇರಳುವುದು ಸರ್ವೇಸಾಮಾನ್ಯ.ಕೆಲವರು ಸರ್ಕಾರಿ ಬಸ್ಸುಗಳಲ್ಲಿ ತೇರಳಿದರೆ ಇನ್ನೂ ಕೆಲವರು ಆಟೋಗಳಲ್ಲಿ ತೇರಳುವುದು ಇಲ್ಲಿನ ಜನರಿಗೆ ಅನಿವಾರ್ಯವಾಗಿದೆ.ಆದರೆ ಜನರ ಕೆಲಸಕ್ಕೆ ತೆರಳುವ ಅವಸರದ ಸಮಯವನ್ನೇ ಬಂಡವಾಳ ಮಾಡಿಕೊಂಡಿರುವ ಆಟೋ ಚಾಲಕರು ಹೆಚ್ಚಿನ ಹಣದ ದುರಾಸೆಯಿಂದ ಆಟೋಗಳಲ್ಲಿ ಮೀತಿಗಿಂತ ಹೆಚ್ಚಿನ ಜನರನ್ನು ಕೂರಿಸಿಕೊಂಡು ಬಸ್ಸುಗಳ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಆಟೋಗಳನ್ನು ಚಲಾಹಿಸಿಕೊಂಡು ಬರುತ್ತಿರುವುದು ಕಾಣುತ್ತಿದ್ದರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳ ಹಿಂದಿನ ರಹಸ್ಯವನ್ನು ತಿಳಿಯಲು ಮುಂದಾದ ಪತ್ರಿಕೆಗೆ ಸಾರ್ವಜನಿಕ ವಲಯದಿಂದ ಕೇಳಿ ಬಂದ ಮಾತುಗಳು ಈ ಆಟೋ ಚಾಲಕರು ಮಾಮೂಲಿ ರೂಪದಲ್ಲಿ ಅಧಿಕಾರಿಗಳಿಗೆ ಹಣವನ್ನು ನೀಡುತ್ತಾರೆ ಈ ಕಾರಣಕ್ಕೆ ಅಧಿಕಾರಿಗಳು ಆಟೋಗಳಲ್ಲಿ ಎಷ್ಟೇ ಜನರನ್ನು ತುಂಬಿಕೊಂಡು ಸ್ಪೀಡಾಗಿ ಹೋಗುತ್ತಿರುವುದು ಕಾಣುತ್ತಿದ್ದರು ಕುರುಡನ ಮೌನ ವಹಿಸಿದ್ದಾರೆ ಎನ್ನುವುದು.ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿರುವ ಮಾತುಗಳು ಸತ್ಯವೆಂಬುವುದು ನಮ್ಮ ಮಾತಲ್ಲ.ಆದರೆ ಈ ಅಧಿಕಾರಿಗಳು ಹರಿಹರ ನಗರದಿಂದ ದಾವಣಗೆರೆ ನಗರಕ್ಕೆ ಸಂಚಾರಿ ನಿಯಮಗಳನ್ನು ಮೀರಿ ಹೆಚ್ಚಿನ ಜನರನ್ನು ಹೊತ್ತೋಯ್ಯುತ್ತಿರುವ ಆಟೋ ಚಾಲಕರ ದುರ್ನಡತೆಯ ಚಾಲನೆಗೆ ಕಡಿವಾಣ ಹಾಕುವ ಬದಲು,ನಗರ ಪ್ರದೇಶದಲ್ಲಿ ಹೊಟ್ಟೆ ಪಾಡಿಗೆ ಸಿಟಿ ಬಾಡಿಗೆ ಮಾಡುತ್ತಿರುವ ಆಟೋ ಚಾಲಕರಿಗೆ ಸಂಚಾರದ ನಿಯಮಗಳ ಬಗ್ಗೆ ತಿಳಿ ಹೇಳಲು ಅದ್ಯಾಕೆ ಮುಂದಾದರೋ ಎನ್ನುವುದೇ ಕುತೂಹಲಕ್ಕೆ ಕಾರಣವಾದ ಪ್ರಶ್ನೆಯಾಗಿದೆ.

ಇನ್ನು,ಮೋಟಾರು ವಾಹನ ಕಾಯ್ದೆಯ 1988 ರ ಪ್ರಕಾರ ನೋಂದಣಿ ಪಡೆದ ವಾಹನದ ಮಾಲೀಕನು ಸಾರಿಗೆ ಇಲಾಖೆಯು ನಿಗಧಿ ಪಡಿಸಿರುವ ತೂಕಕ್ಕಿಂತ ಹೆಚ್ಚಿನ ತೂಕವನ್ನು ವಾಹನಗಳಲ್ಲಿ ಹಾಕಿ ಸಾಗಾಟಕೆ ಮುಂದಾಗಬಾರದು.ಇದೆ ನಿಟ್ಟಿನಲ್ಲಿ  ಪಡೆದಿರುವ ನೋಂದಣಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎನ್ನುವ ಸಾಲುಗಳನ್ನು ವಾಹನ ನೋಂದಣಿಗೆ ಮುಂದಾದ ಪ್ರತಿಯೊಬ್ಬ ಮಾಲೀಕನಿಗೆ ಸೂಚಿಸಿರುತ್ತದೆ.ಆದರೆ ಜಿಲ್ಲೆಯಲ್ಲಿರುವ ಅದೆಷ್ಟೋ ಆಟೋಗಳ ಮಾಲೀಕರು,ತಮ್ಮ ಆಟೋಗಳ ಎಲ್,ಐ,ಸಿ ವಿಮೆಗಳ ಕಟ್ಟು ಬಾಕಿ ಇಟ್ಟಿರುವುದು ಒಂದಡೆ ಕೇಳಿ ಬಂದರೆ,ಇನ್ನೂ ಅದೆಷ್ಟೋ ಆಟೋಗಳ ಚಾಲಕರ ಚಾಲನೆಯ ಪರವಾನಿಗೆ ಪಡೆಯದೆ ಆಟೋ ಚಾಲನೆಗೆ ಮುಂದಾಗಿರುವುದು ಇನ್ನೊಂದಡೆಯಲ್ಲಿ ಕೇಳಿ ಬಂದಿರುವ ಮಾತುಗಳಾಗಿವೆ.ಅದು ಏನೇ ಇರಲಿ,ಜನರ ಜೀವಕ್ಕೆ ಹಾನಿ ಉಂಟಾಗುವ ಮಟ್ಟದಲ್ಲಿ ಜನರನ್ನು ಕೊಂಡೊಯ್ಯುತ್ತಿರುವ ಆಟೋಗಳ ಸಂಚಾರಕ್ಕೆ ಕಡಿವಾಣ ಹಾಕುವುದರ ಜೊತೆಗೆ ಜಿಲ್ಲೆಯ ಜನರಿಗೆ ಉತ್ತಮ ಸಂಚಾರದ ವ್ಯವಸ್ಥೆ ಕಲ್ಪಿಸಿಕೋಡುವುದು ಜಿಲ್ಲಾಧಿಕಾರಿಗಳ ಕರ್ತವ್ಯವಾಗಿದೆ.

Spread the love

Leave a Reply

Your email address will not be published. Required fields are marked *