ಲೋಕಾಯುಕ್ತ ವೀರಪ್ಪನ ಕಣ್ಣಿಗೆ ಕಾಣದಂತೆ ಮರೆಮಾಚಿಸಿದ ಅಕ್ರಮ ಮರಳು

 

 

 

ಹಾವೇರಿ

ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯ ಭ್ರಷ್ಟಾಚಾರದ ತನಿಖೆಗೆ ಮುಂದಾದ ಕರ್ನಾಟಕ ಲೋಕಾಯುಕ್ತ ಇಲಾಖೆಯ ಉಪ ಆಯುಕ್ತ ಬಿ.ವೀರಪ್ಪನವರ ದೀಡಿರ್ ಬೇಟಿಯಿಂದ,ಜಿಲ್ಲೆಯ ತೆರೆ ಮರೆಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಯಲಿಗೆ ಎಳೆಯುವ ಪ್ರಯತ್ನಕ್ಕೆ ಲೋಕಾಯುಕ್ತ ಇಲಾಖೆಯು ಮುಂದಾಗಿರುವುದು ಇಲಾಖೆಯ ನಿಷ್ಠತೆಗೆ ಕಾರಣವಾಗಿದೆ.ಇನ್ನೂ ಲೋಕಾಯುಕ್ತರ ತನಿಖೆಯ ಚುರುಕತೆಯಿಂದ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡಿದ ಭ್ರಷ್ಟ ಅಧಿಕಾರಿಗಳ ಮುಖಕ್ಕೆ ಸಗಣಿ ಎರಚುವಂತಾಗಿರುವುದಂತು ಸತ್ಯಕ್ಕೆ ಹತ್ತಿರ.ಈಗಾಗಲೇ ಉಪ ಲೋಕಾಯುಕ್ತ ಬಿ.ವೀರಪ್ಪನವರ ಕಾರ್ಯಾಚರಣೆಯಿಂದ ಜಿಲ್ಲೆಯ ಸಾರ್ವಜನಿಕ ಸಾರಿಗೆ ಬಸ್ ನಿಲ್ದಾಣದ ಶೌಚಾಲಯ ಮತ್ತು ಪಾರ್ಕಿಂಗ್ ಜಾಗಗಳಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿಗೆ ಹಣವನ್ನು ವಸೂಲಿ ಮಾಡುತ್ತಿರುವುದು ಒಂದಡೆ ಕಂಡುಬಂದರೆ,ಬ್ಯಾಡಗಿ ಪಟ್ಟಣದ ಮೆಣಸಿಕಾಯಿ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಆಗುತ್ತಿರುವ ಮೋಸದ ಜಾಲದ ಸುಳಿವು ಮತ್ತು ದಲ್ಲಾಳಿಗಳ ಕಮಿಷನ್ ಇನ್ನೊಂದು ಭಾಗವಾಗಿ ಲೋಕಾಯುಕ್ತ ಗಮನಕ್ಕೆ ಬರುತ್ತಿದ್ದಂತೆ,ಸಾರಿಗೆ ಇಲಾಖೆ ದಾಖಲೆಗಳ ಪರಿಶೀಲನೆಗೆ ಮುಂದಾದ ಉಪ ಲೋಕಾಯುಕ್ತರಿಗೆ ಇಲಾಖೆಯಲ್ಲಿರುವ ದಾಖಲೆಗಳನ್ನು ಬಗೆದಷ್ಟು,ಹಲವು ವರ್ಷಗಳಿಂದ ಭ್ರಷ್ಟಾಚಾರದ ಪರಿಮಳದ ವಾಸನೆಯನ್ನು ಹೊರ ಬಿಡದೆ ದಾಖಲೆಗಳಲ್ಲಿ ಅಡಗಿರುವ ಭ್ರಷ್ಟಾಚಾರದ ಪರಿಮಳ ಗಮ್ಮೆನ್ನುವ ಸುಗಂಧವನ್ನು ಹೊರ ಸೂಸಲು ಮುಂದಾಗಿತ್ತು.ಆದರೆ ದಾಖಲೆಗಳಲ್ಲಿ ಅಡಗಿರುವ ಭ್ರಷ್ಟತೆಗಿಂದ ಪ್ರಪಂಚದ ಜ್ಞಾನವನ್ನು ಅರಿಯದ ಮಕ್ಕಳನ್ನು ಶಾಲೆಗೆ ಹೊತ್ತೋಯ್ಯುವ ಬಸ್ ಗಳ ಪಿಟ್ ನೆಸ್ ಅವಧಿ ಸಹ ಮುಗಿದಿದ್ದರು,ಅದೇ ಬಸ್ಸುಗಳಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿರುವ ಶಾಲೆಗಳ ದುರಾಡಳಿತದಿಂದ ಕೆಂಡಾಮಂಡಲವಾದ ಉಪ ಲೋಕಾಯುಕ್ತರು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಳ್ಳುವುದಂತು ಸತ್ಯ.ಇನ್ನೂ ಜಿಲ್ಲೆಗೆ ಆಗಮಿಸಿರುವ ಲೋಕಾಯುಕ್ತರ ಕಾರ್ಯಾಚರಣೆಯ ಸಮಯದಲ್ಲಿ ಅಧಿಕಾರಿಗಳ ನಿರ್ಲಕ್ಷತೆನೋ! ದುರಾಡಳಿತವೋ ಗೊತ್ತಿಲ್ಲ ಸರ್ಕಾರದ ಗಮನಕ್ಕೆ ಬಾರದಂತೆ ಮಾಸಿ ಹೋಗಿರುವ ಅದೆಷ್ಟೋ ಅಕ್ರಮಗಳು ಬಯಲಿಗೆ ಬಂದಿದ್ದಂತು ಸತ್ಯಕ್ಕೆ ಹತ್ತಿರ.ಆದರೆ ರೈತರಿಗೆ,ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತನಿಖೆ ನಡೆಸಿದ ಉಪ ಲೋಕಾಯುಕ್ತರು ಅದ್ಯಾಕೆ?ಸರ್ಕಾರದ ಖಜಾನೆಗೆ ದೊಡ್ಡ ಪ್ರಮಾಣದಲ್ಲಿ ಆಧಾಯವನ್ನು ತಂದುಕೊಡುತ್ತಿರುವ ಗಣಿ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಲಿಲ್ಲ ಎನ್ನುವುದೇ ಜಿಲ್ಲೆಯ ಜನರಿಗೆ ಯಕ್ಷ ಪ್ರಶ್ನೆಯಾಗಿದೆ.
ಅವಗಾಗಲೇ ಜಿಲ್ಲೆಯಲ್ಲಿರುವ ಮರಳು ಟಾಸ್ಕ ಫೋರ್ಸ್ ಸಮಿತಿಯ ಕರಿನೇರಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು,ಈ ಅಕ್ರಮ ಮರಳು ಸಾಗಾಟದ ದೃಶ್ಯಗಳನ್ನು ಜಿಲ್ಲೆಯ ಜನರು ಮತ್ತು ನಗರ ಪ್ರದೇಶದಲ್ಲಿ ಕಣ್ಣಗಾವಲಿಗೆ ಅಳವಡಿಸಿರುವ ಸಿ.ಸಿ.ಕ್ಯಾಮರಗಳು ತಮ್ಮ ಕಣ್ಣಂಚಿನಲ್ಲೇ ಸೆರೆ ಹಿಡಿದಿರುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸತ್ಯಾಂಶವಾಗಿದೆ.ಅದರಲ್ಲೂ ರಾಣೆಬೆನ್ನೂರು ಮತ್ತು ಹಾವೇರಿ ತಾಲೂಕಿನಲ್ಲಿರುವ ಮರಳು ಚೋರರು ರೈತರ ಜೀವನಾಡಿಯಾಗಿರುವ ತುಂಗಾಭದ್ರ ನದಿಯ ಒಡಲಲ್ಲಿ ಅಡಗಿರುವ ಮರಳು ಎಂಬ ಖನಿಜ ಸಂಪತ್ತನ್ನು ರಾತ್ರಿ ವೇಳೆಯಲ್ಲಿ ದೋಣಿ ಮತ್ತು ಜೇಸಿಬಿ ಗಳ ಮುಖಾಂತರ ಅಗೆದು ಸರ್ಕಾರದ ಬೊಕ್ಕಸಕ್ಕೆ ಯಾವುದೇ ತೇರಿಗೆ ಭರಿಸದೆ ರೈತರು ಬೇಳೆಗಳಿಗೆ ನೀರಿನ ಸೌಲಭ್ಯಕ್ಕಾಗಿ ಅಳವಡಿಸಿರುವ ಪೈಪುಗಳನ್ನು ಹಾಳು ಮಾಡಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಅನೇಕ ಬಾರಿ ನಾಯಕನ ನಡುಗೆ ಪತ್ರಿಕೆಯು ಸುದ್ದಿ ಪ್ರಕಟಿಸುವ ಮೂಲಕ ನಿದ್ರಾವಸ್ಥೆಗೆ ಜಾರಿರುವ ಟಾಕ್ಸ್ ಫೋರ್ಸ್ ಸಮಿತಿಯ ಅಧಿಕಾರಿಗಳನ್ನು ನಿದ್ರೆಯಿಂದ ಬಡಿದೆಬ್ಬಿಸಲು ಮುಂದಾಗಿತ್ತು.ಆದರೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಕ್ಷಣ ಮಾತ್ರಕ್ಕೆ ಅಕ್ರಮವಾಗಿ ಶೇಖರಣೆ ಮಾಡಿದ ಸ್ವಲ್ಪ ಪ್ರಮಾಣದ ಮರಳನ್ನು ವಶಕ್ಕೆ ಪಡೆದು ಅಕ್ರಮ ಮರಳು ಸಾಗಾಟದಲ್ಲಿ ಭಾಗಿಯಾಗಿರುವ ವಾಹನಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದೆ ಕೇವಲ ದಂಡವನ್ನು ವಿಧಿಸುವ ನಾಟಕವನ್ನಾಡುತ್ತಾ ಅಕ್ರಮಕೋರರು ನೀಡುವ ತಿಂಗಳ ಮಾಮೂಲಿಗೆ ಶರಣಾಗಿ ಮತ್ತೆ ಹಿಂಬಾಗಿಲಿನಿಂದ ಅಕ್ರಮ ಮರಳು ಸಾಗಾಟ ಮಾಡಲು ಪ್ರಚೋದನೆ ನೀಡುತ್ತಿರುವುದು ಈ ಮರಳು ಟಾಸ್ಕ್ ಫೋರ್ಸ್ ಸಮಿತಿಯ ಕರ್ತವ್ಯ ಭ್ರಷ್ಟತೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.ಅದು ಏನೇ ಇರಲಿ ಉಪ್ಪು ತಿಂದವನು ನೀರು ಕುಡಿಯಲೆ ಬೇಕು ಎನ್ನುವ ಗಾದೆ ಅನುಸಾರವಾಗಿ ತಪ್ಪು ಮಾಡಿದವನು ಮುಂದಿನ ದಿನಗಳಲ್ಲಿ ಶಿಕ್ಷೆ ಅನುಭವಿಸಲೇಬೇಕು.ಆದರೆ ಜಿಲ್ಲಾಡಳಿತಕ್ಕೆ ಇದೆ ಫೆಬ್ರುವರಿ ತಿಂಗಳ ಹನ್ನೆರಡನೇ ತಾರೀಖಿನಿಂದ ಹದಿನಾಲ್ಕನೇ ತಾರೀಖಿನವರೆಗೂ ಜಿಲ್ಲಾದ್ಯಂತ ಪ್ರವಾಸ ಕೈಗೊಳ್ಳುವುದರ ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ತನಿಖೆಗೆ ಆಗಮಿಸುತ್ತಿರುವ ಉಪ ಲೋಕಾಯುಕ್ತರ ಆಗಮನದ ವಿಷಯ ತಿಳಿಯುತಿದ್ದಂತೆ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೇಳೆದಿರುವ ಅಕ್ರಮ ಮರಳು ಸಾಗಾಟದ ದಂಧೆಯಿಂದ ತಮ್ಮ ಕುರ್ಚಿಗೆ ಕುತ್ತು ಒದಗಬಹುದು ಎನ್ನುವ ಜಾಣ್ಮೆಯ ನಡೆಯಿಂದ “ಈ ಮರಳುಚೋರರಿಗೆ ಲೋಕಾಯುಕ್ತರು ಬಂದು ವಾಪಸ್ ಹೋಗುವವರೆಗೂ ನದಿ ಪಾತ್ರದಲ್ಲಿ ಯಾವುದೇ ಕುರುವುಗಳು ಸಿಗದಂತೆ ಅಕ್ರಮ ಮರಳು ದಂಧೆಯನ್ನು ಸ್ಥಗಿತಗೋಳಿಸುವಂತೆ ಮೊದಲನೇ ವಾರದಲ್ಲಿಯೇ ಸೂಚಿಸಿರುವುದು ಅಧಿಕಾರಿಗಳ ಭ್ರಷ್ಟ ದುರಾಡಳಿತಕ್ಕೆ ಸಾಕ್ಷಿಯಾಗಿದೆ.

 

 

 

 ಈಗಾಗಲೇ ಉಪ ಲೋಕಾಯುಕ್ತರ ಆಗಮನಕ್ಕಿಂತ ಮುಂಚಿತವಾಗಿ ಜಿಲ್ಲೆಯ ಗುತ್ತಲ,ಹಲಗೇರಿ,ಕುಮಾರಪಟ್ಟಣಂ,ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಗಳ ಸರಹದ್ದಿಗೆ ಬರುವ ತುಂಗಾಭದ್ರ ನದಿ ಪಾತ್ರದ ಪಕ್ಕದ ಬಹುತೇಕ ಗ್ರಾಮಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು,ಈ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟದಲ್ಲಿ ರಾಣೆಬೆನ್ನೂರು ಶಾಸಕನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಹುಲ್ಲಾ ಎನ್ನುವ ಆಸಾಮಿ,ನಾನು ರಾಣೆಬೆನ್ನೂರು ಶಾಸಕನ ಆಪ್ತ ಎಂದು ಬಿಂಬಿಸಿಕೊಳ್ಳುತ್ತಾ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟದಲ್ಲಿ ತೊಡಗಿಸಿಕೊಳ್ಳುವ ವಾಹನಗಳಿಗೆ ತಿಂಗಳಿಗೆ ಇಂತಿಷ್ಟು ಮಾಮೂಲಿ ಫಿಕ್ಸ್ ಮಾಡಿಕೊಂಡು ಗಣಿಗಾರಿಕೆ ನಡೆಯುವ ವ್ಯಾಪ್ತಿಗೆ ಬರುವ ಠಾಣೆಯ ಪೊಲೀಸ್ ಅಧಿಕಾರಿಗಳ ಮೂಲಕ ಹಪ್ತ ವಸೂಲಿ ಮಾಡಿಕೊಂಡು ಶಾಸಕನಿಗೆ ತಲುಪಿಸುತ್ತಿದ್ದಾನೆ ಎನ್ನುವ ಮಾತುಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಪ್ರತಿಧ್ವನಿಸುತ್ತಿರುವ ಮಾತುಗಳಾಗಿವೆ.ಸಾರ್ವಜನಿಕ ವಲಯದಲ್ಲಿ ಪ್ರತಿಧ್ವನಿಸುತ್ತಿರುವ ಮಾತುಗಳಲ್ಲಿ ಎಷ್ಟರ ಮಟ್ಟಿಗೆ ಸತ್ಯ ಅಡಗಿದೆ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.ಆದರೆ ಶಾಸಕನ ಆಪ್ತನಾಗಿರುವ ಈ ರಾಹುಲ್ಲಾ ಎನ್ನುವ ವ್ಯಕ್ತಿಯು ಅಕ್ರಮ ಮರಳು ಸಾಗಾಟದ ಜವಾಬ್ದಾರಿ ಹೊತ್ತು ಮುನ್ನೆಡಿಸಿಕೊಂಡು ಬರುತ್ತಿರುವ ಬಗ್ಗೆ ಅನೇಕ ಪತ್ರಿಕಾ ಮಿತ್ರರು ಸುದ್ದಿ ಪ್ರಕಟೀಸುವುದರ ಮೂಲಕ ಶಾಸಕರ ಗಮನಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದರು,ಅದ್ಯಾಕೋ ಶಾಸಕರು ತಮ್ಮ ಹೆಸರನ್ನು ದುರ್ಭಳಕೆ ಮಾಡಿಕೊಳ್ಳುತ್ತಿರುವ ಈ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳದೆ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕದೆ ಕಣ್ಣಿದ್ದು ಕುರುಡರಾಗಿರುವ ಹಿನ್ನಲೆಯಾದರೂ ಏನು?

 

 

ಜಿಲ್ಲೆಗೆ ಆಗಮಿಸಿದ ಲೋಕಾಯುಕ್ತರ ಕಾರ್ಯಾಚರಣೆಯಿಂದ ಸಾರಿಗೆ ಇಲಾಖೆ,ಬಸ್ ನಿಲ್ದಾಣ ಮತ್ತು ಮೆಣಸಿನ ಕಾಯಿ ಮಾರುಕಟ್ಟೆಯಲ್ಲಿ ನಡೆಯುವ ಅಕ್ರಮಗಳು ಬಯಲಿಗೆ ಬಂದಿರುವುದು ಜಿಲ್ಲೆಯ ಜನರಲ್ಲಿ ಸಂತಸವನ್ನು ವ್ಯಕ್ತ ಪಡಿಸಿದೆ.ಆದರೆ ಲೋಕಾಯುಕ್ತರ ಕಾರ್ಯಾಚರಣೆ ವೇಳೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಅಕ್ರಮಗಳಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟಕ್ಕಿಂತ,ದುಪ್ಪಟ್ಟು ನಷ್ಟವಾಗುತ್ತಿರುವುದು ಈ ಅಕ್ರಮ ಮರಳು ಸಾಗಾಟದ ದಂಧೆಯಿಂದ ಎನ್ನುವ ಅಂಶವನ್ನು ಅರಿತು ರಾಣೆಬೆನ್ನೂರು ನಗರ ಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ಕುಮಾರಪಟ್ಟಣಂ ವೃತ್ತದಲ್ಲಿ ಸಾರ್ವಜನಿಕವಾಗಿ ಅಳವಡಿಸಿರುವ ಸಿ,ಸಿ,ಕ್ಯಾಮರಗಳ ದೃಶ್ಯಾವಳಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಒಮ್ಮೆ ಪರೀಕ್ಷಿಸಿದಾಗ ತಾಲೂಕು ಮಟ್ಟದ ಅಧಿಕಾರಿಗಳ ಕರಿನೇರಳಲ್ಲಿ ನಡೆದಿರುವ ಅಕ್ರಮ ಮರಳು ಸಾಗಾಟದಿಂದ ಸರ್ಕಾರಕ್ಕೆ ಆಗಿರುವ ನಷ್ಟದ ಬಗ್ಗೆ ಇನ್ನಷ್ಟು ಪುರಾವೆಗಳು ದೋರಯುತ್ತಿದ್ದವು ಎನ್ನುವುದು ಸಾರ್ವಜನಿಕರ ಆಕ್ರೋಶದ ಮಾತಾಗಿದೆ.ಮುಂದಿನ ದಿನಗಳಲ್ಲಾದರು ಮತ್ತೊಮ್ಮೆ ಜಿಲ್ಲೆಗೆ ಆಗಮಿಸಿ ನಗರ ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಗಳ ವೀಕ್ಷಣೆ ಜೊತೆಗೆ ಸರ್ಕಾರದ ಅಧೀನದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದಿರುವ ಹಟ್ಟಿ ಗೋಲ್ಡ್ ಮೈನಿಂಗ್ ರಾಯಚೂರು ಈ ಕಂಪನಿಯ ಗಣಿಗಾರಿಕೆ ಅವಧಿಯಿಂದ ಪ್ರಸ್ತುತವರೆಗೂ ಗುತ್ತಿಗೆ ಪಾಯಿಂಟ್ ನಲ್ಲಿರುವ ಸಿಸಿ ಕ್ಯಾಮರಗಳನ್ನು ಒಮ್ಮೆ ಪರಿಶೀಲನೆ ಮಾಡಿ ಅಕ್ರಮ ಮರಳು ಸಾಗಾಟದಲ್ಲಿ ಭಾಗಿಯಾಗಿರುವ ಜಿಲ್ಲೆಯ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.

ಸಂಪಾದಕರು:ಹನುಮಂತಪ್ಪ .ಕರೂರು

Spread the love

Leave a Reply

Your email address will not be published. Required fields are marked *