ಅದ್ಯಾಕೋ ಇತ್ತೀಚಿನ ದಿನಮಾನಗಳಲ್ಲಿ ಜನರ ಸೇವೆ ಮಾಡುವ ಅಧಿಕಾರಿಗಳೇ ಜನರನ್ನು ಕಿತ್ತು ತಿನ್ನುವ ಭಕ್ಷಕರಾಗಿರುವುದು ವಿಷದಾಯಕ ಸಂಗತಿಯಾಗಿದೆ.ಇದೀಗ ಇಂತಹದೊಂದು ಘಟನೆ ಬೆಳೆಕಿಗೆ ಬಂದಿರುವುದು ರಾಣೆಬೆನ್ನೂರು ತಾಲೂಕಿನ ಪೊಲೀಸ್ ಇಲಾಖೆಯಲ್ಲಿ.ತಾಲೂಕಿನ ಪೊಲೀಸ್ ಉಪ ಅಧೀಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಬೋಜಣ್ಣನವರು ಎನ್ನುವ ಅಧಿಕಾರಿಯೂ ಐವತ್ತು ಸಾವಿರ(50,000)ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು,ಹಾವೇರಿ ಲೋಕಾಯುಕ್ತ ಅಧಿಕಾರಿಗಳಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ.
ನಗರ ಪ್ರದೇಶದ ನಿವಾಸಿ ಶ್ರೀ ವಿಜಯಲಕ್ಷ್ಮಿ ಕೆ.ಪಿ.ಎನ್ನುವ ಮಹಿಳೆಯು 2023-24 ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿಯಿಂದ ಮಂಡಳಿಯಿಂದ ಮನೆ ಮಂಜೂರಾತಿಯನ್ನು ಪಡೆದು ಮನೆ ನಿರ್ಮಾಣ ಕಾರ್ಯವನ್ನು ಹಮ್ಮಿಕೊಂಡಿರುತ್ತಾರೆ.ಆದರೆ ಪಕ್ಕದ ಮನೆಯವರಾದ ಗಣೇಶ ಅರ್ಕಚಾರಿ ಮತ್ತು ಕುಟುಂಬದವರಿಗೆ ನಿರ್ಮಾಣ ಹಂತದ ಮನೆಯ ಸಂಬಂಧ ತಕರಾರು ಉಂಟಾಗಿರುವ ಹಿನ್ನಲೆಯಲ್ಲಿ ನೊಂದ ವಿಜಯಲಕ್ಷಿಯು ನಗರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿಕೊಡುವಂತೆ ನಗರದ ಪೊಲೀಸ್ ಉಪ ಅಧೀಕ್ಷಕ ಕಚೇರಿಯ ಮೊರೆ ಹೋಗಿರುತ್ತಾಳೆ.ಪೊಲೀಸ್ ಉಪ ಅಧೀಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ ಬೋಜಣ್ಣನವರು ಎನ್ನುವ ಅಧಿಕಾರಿಯೂ,ನೊಂದ ಸಂತಸ್ತ್ರೆ ಮಹಿಳೆಯ ಕಷ್ಟವನ್ನು ಅರಿಯದೆ “ನಿನ್ನ ಮನೆಯ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಐವತ್ತು ಸಾವಿರ(50,000)ರೂಪಾಯಿಗಳನ್ನು ಲಂಚವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದು,ನಿರಾಶ್ರಿತಳಾದ ಮಹಿಳೆಯು ಕಾನೂನಿನ ಅರಿವುದು ತೋಚದೆ ಮಾರ್ಚ್ 19 ರಂದು ಬೇಡಿಕೆ ಇಟ್ಟ ಲಂಚದ ಹಣವನ್ನು ನೀಡಿರುತ್ತಾಳೆ.ಸಮಸ್ಯೆ ಬಗೆಹರಿಸುವಂತೆ ಹಣವನ್ನು ನೀಡಿದರು ಸಮಸ್ಯೆ ಬಗೆಹರಿಯದ ಕಾರಣ ಅಧಿಕಾರಿಗಳನ್ನು ಪ್ರಶ್ನೆಸಿದಾಗ,ಕೊಟ್ಟಿರುವ ಲಂಚದ ಹಣವನ್ನು ರವೀಂದ್ರಗೌಡ ಪಾಟೀಲ ಎನ್ನುವ ವ್ಯಕ್ತಿಯಿಂದ ವಾಪಸ್ ನೀಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಅಂಶಗಳನ್ನು ಉಲ್ಲೇಖಿಸಿ ನ್ಯಾಯ ದೋರಕಿಸಿ ಕೊಡುವಂತೆ ಲೋಕಾಯುಕ್ತ ಕಛೇರಿ.ಹಾವೇರಿ ಇವರಿಗೆ ದೂರು ನೀಡಿರುತ್ತಾಳೆ.ದೂರನ್ನು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಸಾಕ್ಷಿ ಪೂರಕವಾಗಿ ಮಾತನಾಡಿದ ಆಡಿಯೋಗಳ ಪರಿಶೀಲನೆ ಮೇರೆಗೆ ಪೊಲೀಸ್ ಉಪ ಅಧೀಕ್ಷಕ ಗಿರೀಶ್ ಬೋಜಣ್ಣನವರನ್ನು ತನಿಖೆಗೆ ಸಹಕರಿಸುವಂತೆ ಕೋರಿರುತ್ತಾರೆ.ಆದರೆ ಲೋಕಾಯುಕ್ತರ ತನಿಖೆಗೆ ಸಹಕರಿಸಿದ ಗಿರೀಶ ಬೋಜಣ್ಣನವರ ಹಿನ್ನಲೆಯನ್ನು ಅರಿತ ಅಧಿಕಾರಿಗಳು ಅಧಿಕಾರಿಯ ಮನೆಯ ಪಂಚನಾಮ ಮಾಡಿಕೊಂಡು ಬಂದಿರುತ್ತಾರೆ.
ಈಗಾಗಲೇ ನಮ್ಮ ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲಿ ಒಂದು ಅತ್ಯುನ್ನತ ಸ್ಥಾನ ದೋರಕಿರುವುದು ಹೆಮ್ಮೆಯ ಸಾಧನೆ.ಜನರಿಗೆ ತೊಂದರೆಯಾದಾಗ ಮೊದಲು ಬರುವುದು ಪೊಲೀಸ್ ಇಲಾಖೆ.ಆದರೆ ಇಂತಹ ಇಲಾಖೆಯಲ್ಲಿ ಸೇವೆಗೆ ಮುಂದಾಗಿ,ಜನರಿಗೆ ರಕ್ಷಣೆ ನೀಡಬೇಕಾದ ಅಧಿಕಾರಿಗಳೇ!ಜನರನ್ನು ಕಿತ್ತು ತಿನ್ನುವ ಭಕ್ಷಕರಾದರೇ! ಆರಕ್ಷಕ ಎನ್ನುವ ನಾಮಕ್ಕೆ ಸಿಗುವ ಬೆಲೆಯಾದರು ಏನು?ತಾಲೂಕಿನಲ್ಲಿ ಈ ಪೊಲೀಸ್ ಉಪ ಅಧೀಕ್ಷಕ ಮಾತ್ರ ಇಂಥಹ ಅಕ್ರಮಗಳಲ್ಲಿ ತೊಡಗಿಕೊಂಡಿದ್ದಾನೆ ಎನ್ನುವುದು ನಮ್ಮೆಲ್ಲರ ತಪ್ಪು ಭಾವನೆ.ತಾಲೂಕಿನ ಬಹುತೇಕ ಅಧಿಕಾರಿಗಳು ಅನೇಕ ರೀತಿಯ ಅಕ್ರಮ ದಂಧೆಗಳನ್ನು ನಡೆಸುವುದರ ಮೂಲಕ ಮಾಮೂಲಿ ರೂಪದಲ್ಲಿ ಲಂಚವನ್ನು ಪಡೆಯುತ್ತಿದ್ದಾರೆ ಎನ್ನುವುದು ತಾಲೂಕಿನಲ್ಲೆಡೆ ಕೇಳಿ ಬರುತ್ತಿರುವ ಮಾತುಗಳಾಗಿವೆ.ಈಗಾಗಲೇ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಗಮನ ಹರಿಸಿ,ಅಕ್ರಮಕ್ಕೆ ಸಾಥ್ ನೀಡುತ್ತಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದು ಲೋಕಾಯುಕ್ತ ಇಲಾಖೆಗೆ ಸೂಕ್ತವಾಗಿದೆ.