ನಕಲಿ ವೈದ್ಯರ ಕಳ್ಳಾಟ,ಆರೋಗ್ಯ ಇಲಾಖೆಯ ಮಳ್ಳಾಟ

 

 

ವಿಜಯನಗರ

ಅದ್ಯಾಕೋ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಒಂದಾಲ್ಲ,ಒಂದು ಪ್ರಕರಣಗಳು ಜಾರಿಗೆ ಬರುತ್ತಿರುವುದು ನಮ್ಮ ಸರ್ಕಾರದ ವೈಪಲ್ಯವೆಂದರೆ ತಪ್ಪಾಗಲಾರದು.ಇತ್ತೀಚಿಗೆ ರಾಜ್ಯದ ಜನರು ನಕಲಿ ಔಷಧಿಗಳನ್ನು ಸೇವಿಸಿ ಕೆಲವರು ಆಸ್ಪತ್ರೆಗೆ ದಾಖಲಾದರೆ ಇನ್ನೂ ಕೆಲವರು ಸಾವನ್ನಪ್ಪಿದ್ದಾರೆ ಬಿಡಿ.ಈ ನಕಲಿ ಔಷಧೀಯ ಮಾರಾಟದಿಂದ ರಾಜ್ಯದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಅರಿತ ಆರೋಗ್ಯ ಸಚಿವರು ರಾಜ್ಯದಲ್ಲಿ ನಕಲಿ ಔಷಧಿಗಳ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಕಲಿ ಔಷಧಿಗಳ ಮಾರಾಟಕ್ಕೆ ಮುಂದಾಗುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ನಿರ್ಧಾರವನ್ನು ಕೈಗೊಂಡಿರುತ್ತಾರೆ.ಆದರೆ ನಕಲಿ ಔಷಧಿಗಳ ಮಾರಾಟಕ್ಕಿಂತ ಹೆಚ್ಚಿನದಾಗಿ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವುದು ಕಂಡುಬರುತ್ತಿದೆ.ಈಗಾಗಲೇ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ನಕಲಿ ವೈದ್ಯರ ಹಾವಳಿಯು ಎಲ್ಲೆಡೆ ಕಂಡುಬರುತ್ತಿದ್ದು,ಈ ವೈದ್ಯರ ಹಾವಳಿಂದ ತಾಲೂಕಿನ ಜನರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ.

ಈಗಾಗಲೇ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಆಂದ್ರಪ್ರದೇಶದಿಂದ ಬಂದಿರುವ ನಕಲಿ ವೈದ್ಯನಾಗಿರುವ  ಸೋಮಶೇಖರ ಎನ್ನುವ ವ್ಯಕ್ತಿಯು ಯಾವುದೇ ವೈದ್ಯಕೀಯ ಪದವಿ ಪಡೆಯದೆ ತಾಲೂಕಿನಾದ್ಯಂತ ಜನರ ಮನೆ,ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿರುವುದರ ಜೊತೆಗೆ ಸ್ವರಾಜ್ಯದ ತನ್ನ ಬಳಗವನ್ನು ಕರ್ನಾಟಕ ರಾಜ್ಯದಲ್ಲಿ ನಕಲಿ ವೈದ್ಯರನ್ನಾಗಿ ಮಾಡುತ್ತಿರುವ ಬಗ್ಗೆ ಸುದ್ದಿ ಪ್ರಕಟಿಸುವುದರ ಮೂಲಕ ಜಿಲ್ಲಾ ಆರೋಗ್ಯಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ಪತ್ರಿಕೆಯು ಮಾಡಿತ್ತು.ಆದರೆ ಸುದ್ದಿ ಪ್ರಕಟಗೊಂಡ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿಗಳು ನಡೆಯುತ್ತಿರುವ ಅಕ್ರಮ ನಮ್ಮ ಗಮನಕ್ಕೆ ಈಗಾಗಲೇ ಬಂದಿದೆ ಎಷ್ಟೇ ಹುಡುಕಿದರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ ಕೂಡಲೇ ಈ ನಕಲಿ ವೈದ್ಯನ ಮೇಲೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲೆ ಮಾಡಿ ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗುತ್ತೇವೆ ಎನ್ನುವ ಮಾಹಿತಿಯನ್ನು ಪತ್ರಿಕೆಗೆ ಹಂಚಿಕೊಂಡಿರುತ್ತಾರೆ.ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳಿರುವ ಮಾತುಗಳೆಲ್ಲವೂ ಸತ್ಯಕ್ಕೆ ಹತ್ತಿರ ಎನ್ನುವ ಅಂಶವನ್ನು ಸ್ವತಃ ಈ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ.

ಆದರೆ ತಾಲೂಕಿನಾದ್ಯಂತ ರಾಜಾರೋಷವಾಗಿ ಚಿಕಿತ್ಸೆಯ ನೆಪದಲ್ಲಿ ತಿರುಗಾಡುತ್ತಾ ಜನರಿಗೆ ಇನ್ನಿಲ್ಲದ ಔಷಧಿಗಳನ್ನು ನೀಡುತ್ತಾ ಜನರ ಜೀವಕ್ಕೆ ಕುತ್ತು ತಂದೊಡ್ಡುವ ಕೆಲಸಕ್ಕೆ ಮುಂದಾಗಿರುವ ಈ ಸೋಮಶೇಖರ ಜನಸಾಮಾನ್ಯರ ಕಣ್ಣಿಂಚನಲ್ಲಿ ಓಡಾಡುತ್ತಿರುವುದು ಕಂಡುಬರುತ್ತಿದ್ದರು ಅದ್ಯಾಕೆ? ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ ಎನ್ನುವ ಅರ್ಥಹೀನಾ ಉತ್ತರವನ್ನು ನೀಡುತ್ತಿದ್ದಾರೋ ಗೊತ್ತಿಲ್ಲ.ಇನ್ನು,ಕೈಗೆ ಸಿಗದ ಸೋಮಶೇಖರನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಹುಡುಕಿಕೊಡುವಂತೆ ಪೊಲೀಸ್ ಇಲಾಖೆಗೆ ತಿಳಿಸುತ್ತೇವೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿರುವ ಜಿಲ್ಲಾ ಆರೋಗ್ಯ ಅಧಿಕಾರಿಗಳೇ ನಿಮ್ಮ ಇಲಾಖೆಯ ಕೈಗೆ ಸಿಗದ ರೀತಿ ಓಡಾಡುತ್ತಿರುವ ಸೋಮಶೇಖರ ಪೊಲೀಸ್ ಇಲಾಖೆಯ ಕೈಗೂ ಸಿಕ್ಕಿಲ್ಲವಾ ಅಥವಾ ನಡೆಯುತ್ತಿರುವ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕದೆ,ಈ ನಕಲಿ ವೈದ್ಯರು ದುಡಿಮೆಯಲ್ಲಿ ತಮಗೂ ಸಮ ಪಾಲು ಇದೆಯಾ? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಈ ಕೂಡಲೇ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ರಾಜಾರೋಷವಾಗಿ ಮನೆ,ಮನೆಗೆ ತೆರಳಿ ಮನಸಾಹಿಚ್ಚೆಬಂದಂತೆ ಚಿಕೆತ್ಸೆ ನೀಡುತ್ತಿರುವ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕುವುದರ ಜೊತೆಗೆ ಈಗಾಗಲೇ ನಡೆಯುತ್ತಿರುವ ಅಕ್ರಮ ಕಂಡುಬಂದಿದ್ದರು ಆಕ್ರಮಕ್ಕೆ ಕಡಿವಾಣ ಹಾಕದೆ ಕುಂಟು ನೆಪ ಹೇಳಿಕೊಂಡು ತಾಲೂಕಿನ ಜನಸಾಮಾನ್ಯರ ಜೀವಕ್ಕೆ ಸಂಚಕಾರ ತಂಡೋದ್ದಳು ಸಹಾಯ ಮಾಡುತ್ತಿರುವ ತಾಲೂಕು ಆರೋಗ್ಯ ಅಧಿಕಾರಿಯ ಸೂಕ್ತ ಕ್ರಮ ಕೈಗೊಂಡು ಹೊರ ರಾಜ್ಯದಿಂದ ವೈದ್ಯರ ವೇಷ ಧರಿಸಿ ಬಂದಿರುವ ಅಂದ್ರಪ್ರದೇಶದ ನಕಲಿ ವೈದ್ಯರನ್ನು ಕರ್ನಾಟಕ ಗಡಿಯಿಂದ ಮುಕ್ತಿಗೊಳಿಸಿ ತಾಲೂಕಿನ ಜನರ ಆರೋಗ್ಯವನ್ನು ಕಾಪಾಡುವುದು ತಮ್ಮ ಕರ್ತವ್ಯವಾಗಿದೆ.

 

Spread the love

Leave a Reply

Your email address will not be published. Required fields are marked *