ರಾಹುಲ್ಲನ ಅಕ್ರಮದಿಂದ ಸದ್ದಿಲ್ಲದೇ ತುಂಬುತ್ತಿದೆ ಶಾಸಕನ ಖಜಾನೆ!?

 

ರಾಣೆಬೆನ್ನೂರು:

ರಾಣೆಬೆನ್ನೂರು ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ದಂಧೆಯಲ್ಲಿ ರಾಹುಲ್ಲಾನ ಹೆಸರು ಕೇಳಿ ಬರುತ್ತಿರುವುದು ರಾಜಕೀಯ ವಲಯದಲ್ಲಿ ಇನ್ನಿಲ್ಲದ ಚರ್ಚೆಗೆ ಗ್ರಾಸವಾಗಿರುವ ಮಾತಾಗಿದೆ.ಪ್ರಸ್ತುತ ಹಾಲಿ ಶಾಸಕ ಪ್ರಕಾಶನ ಆಪ್ತವಲಯದಲ್ಲಿ,ಆಪ್ತ ಸಹಾಯಕನೆಂದು ಹೇಳಿಕೊಂಡು ಓಡಾಡುತ್ತಿರುವ ಈ ರಾಹುಲ್ಲಾ ಎನ್ನುವ ವ್ಯಕ್ತಿಯು ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ದಂಧೆಯ ಕೇಂದ್ರ ಬಿಂದುವೆಂಬಂತೆ ತೋರ್ಪಡಿಸಿಕೊಳ್ಳುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.ಮೂಲತಃ ಮೈಸೂರು ಭಾಗದವನಾದ ಈ ವ್ಯಕ್ತಿಯು ಶಾಸಕರ ಆಪ್ತ ವಲಯದಲ್ಲಿ,ಅಂದರೆ ಶಾಸಕರ ದಿನಚರಿ ಕಾರ್ಯಕ್ರಮಗಳನ್ನು ನೆನಪಿಗೆ ತರುವಂತ ಆಪ್ತನೆಂದು ಬಾವಿಸಬೇಡಿ,ತಾಲೂಕಿನಾಂದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಿಂದ ಸಂಗ್ರಹವಾಗುವ ಮಾಮೂಲಿಯನ್ನು ಕಲೆಕ್ಟ್ ಮಾಡಿಕೊಂಡು ಶಾಸಕರಿಗೆ ತಲುಪಿಸುವ ಆಪ್ತನೆನ್ನುವುದು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಮಾತುಗಳಾಗಿವೆ.

ಅದು ಏನೇ? ಇರಲಿ ಈ ರಾಹುಲ್ಲಾ ತಾಲೂಕಿನಲ್ಲಿ ಮಾಡುತ್ತಿರುವ ಇನ್ನಷ್ಟು ಘನ ಕಾರ್ಯಗಳ ಕರ್ಮದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೋಣ.ತಾಲೂಕಿನ ರೈತರಿಗೆ ವರದಾನವಾಗಿರುವ ತುಂಗಾಭದ್ರೆ ನದಿಯ ಒಡಲಲ್ಲಿ ಅಡಗಿರುವ ಮರಳನ್ನು ತಾಲೂಕಿನ ಮರಳುಚೋರರು ದೋಣಿ,ಮಷಿನ್ ಯಂತ್ರೋಪಕರಣ ಹಾಗೂ ಜೇಸಿಬಿಗಳ ಮುಖಾಂತರ ಅಗೆದು,ಸರ್ಕಾರಕ್ಕೆ ಯಾವುದೇ ತೆರಿಗೆ ಭರಿಸದೆ ರಾಜಾರೋಷವಾಗಿ ಟಿಪ್ಪರ್ ಗಳ ಮೂಲಕ ತಾಲೂಕಿನ ಮರಳು “ಟಾಸ್ಕ್ ಫೋರ್ಸ್” ಸಮಿತಿಯ ಅಧಿಕಾರಿಗಳ ಕಣ್ಣೆದುರಲ್ಲೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬರುತ್ತಿದ್ದರು “ಕಂಡರು ಕಾಣದ ಕುರುಡನಂತೆ” ವರ್ತಿಸುತ್ತಾ ಭ್ರಷ್ಟತನಕ್ಕೆ ಮುಂದಾಗಿರುವ ಅಧಿಕಾರಿಗಳಿಗೆ ಕರ್ತವ್ಯ ನಿಷ್ಠೆಯ ಬಗ್ಗೆ ಅರಿವು ಮೂಡಿಸುವ ಹಿತದೃಷ್ಟಿಯಿಂದ“ನಾಯಕನ ನಡುಗೆ”ಪತ್ರಿಕೆಯು ನಡೆಯುತ್ತಿರುವ ಅಕ್ರಮದ ಬಗ್ಗೆ ಸುದ್ದಿ ಪ್ರಕಟಿಸುವುದರ ಮೂಲಕ ಗಾಡ ನಿದ್ರೆಗೆ ಜಾರಿರುವ ಅಧಿಕಾರಿಗಳನ್ನು ನಿದ್ದೆಯಿಂದ ಎಚ್ಚರಿಸುವ ಕೆಲಸಕ್ಕೆ ಮುಂದಾಗಿರುವುದು ಸತ್ಯಕ್ಕೆ ಹತ್ತಿರವಾಗಿದೆ.ಆದರೆ ತಾಲೂಕು ಆಡಳಿತದ ದುರ್ದೈವದ ಸಂಗತಿ ಏನಂದರೆ?“ಟಾಸ್ಕ್ ಫೋರ್ಸ್” ಸಮಿಯಲ್ಲಿರುವ ದಪ್ಪ ಚರ್ಮದ ಈ ಭ್ರಷ್ಟ ಅಧಿಕಾರಿಗಳು,ನಡೆಯುತ್ತಿರುವ ಅಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಎಷ್ಟೇ ಬಾರಿ ಸುದ್ದಿ ಪ್ರಕಟಿಸಿರುವುದು ಗಮನಕ್ಕೆ ಬಂದಿದ್ದರು,ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಲು ಮುಂದೆ ಬಾರದೇ ಕುರುಡುತನದ ಕರ್ತವ್ಯಕ್ಕೆ ಮುಂದಾಗಿರುವುದು ವಿಷದಾಯಕ ಸಂಗತಿಯಾಗಿದೆ.

ಇನ್ನು,ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ಬಗ್ಗೆ ಪತ್ರಿಕಾ ಮಿತ್ರರು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಪ್ರಕಟಿಸುವುದರ ಮೂಲಕ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು ಅದ್ಯಾಕೋ? ಈ ಅಧಿಕಾರಿಗಳು ಸಹ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುವಂತೆ ಸೂಚಿಸಿ ಅಕ್ರಮಕ್ಕೆ ಸಾಥ್ ನೀಡುತ್ತಿರುವವರ ಮೇಲೆ ಅದ್ಯಾಕೆ ಸೂಕ್ತ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.ಇನ್ನು,ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ಜಾಲವನ್ನು ಬೆನ್ನತ್ತಿದ ಪತ್ರಿಕೆಗೆ ಸಾರ್ವಜನಿಕ ವಲಯದಿಂದ ಕೇಳಿ ಬಂದ ಮಾತುಗಳು ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ದಂಧೆಯ ಪೂರ್ತಿ ಜವಾಬ್ದಾರಿಯನ್ನು ಹೊತ್ತಿರುವುದು ಶಾಸಕನ ಆಪ್ತ ಸಹಾಯಕನಾಗಿರುವ ಈ ರಾಹುಲ್ಲಾ ಎನ್ನುವ ವ್ಯಕ್ತಿ.ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಲ್ಲಿ ರಾಜಕೀಯ ನಾಯಕರ ಕೈಗಳು ಸೇರ್ಪಡೆಗೊಂಡಿರುವುದರಿಂದ ಕಣ್ಣೆದುರಲ್ಲೇ ಅಕ್ರಮ ನಡೆಯುತ್ತಿರುವುದು ಕಾಣುತ್ತಿದ್ದರು ಮುಖ ಪ್ರೇಕ್ಷಕರಂತೆ ವರ್ತಿಸುವುದು ಅಧಿಕಾರಿಗಳಿಗೆ ಅನಿವಾರ್ಯವಾಗಿದೆ ಎನ್ನುವುದು.ಅದು ಏನೇ?ಇರಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕಾದವರು ಈ ಅಧಿಕಾರಿಗಳಲ್ಲವೇ?

ಈಗಾಗಲೇ ಹಲವು ದಿನಗಳಿಂದ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಲ್ಲಿ ಎತೆಚ್ಚಾಗಿ ಕೇಳಿ ಬರುತ್ತಿರುವ ಶಾಸಕನ ಆಪ್ತ ಸಹಾಯಕ ರಾಹುಲ್ಲಾ ಎನ್ನುವ ವ್ಯಕ್ತಿಯಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ಅರಿತು,ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುವುದರ ಜೊತೆಗೆ ದುರ್ಭಳಕೆಯಾಗುತ್ತಿರುವ ರಾಣೆಬೆನ್ನೂರು ಶಾಸಕರ ಹೆಸರಿನಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎನ್ನುವ ಅಂಶವನ್ನು ಮನಗಂಡು ಈಗಾಗಲೇ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಲ್ಲಿ ಭಾಗಿಯಾಗಿರುವ ವಾಹನಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಅವಶ್ಯಕವಾಗಿದೆ.

ಸಂಪಾದಕರು:ಹನುಮಂತಪ್ಪ .ಕರೂರು

Spread the love

Leave a Reply

Your email address will not be published. Required fields are marked *