ರಾಣೆಬೆನ್ನೂರು
ರಾಣೆಬೆನ್ನೂರು ನಗರವು ಒಂದಾಲ್ಲ,ಒಂದು ಸುದ್ದಿಯ ಮೂಲಕ ಮುನ್ನುಡಿಗೆ ಬರುತ್ತಿರುವುದು ಹೊಸದೆನಲ್ಲಾ!ಕೆಲವು ಸುದ್ದಿಗಳು ರಾಜಕೀಯ ಮತ್ತಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಕಿರು ಪರಿಚಯದ ಮೂಲಕ ತಾಲೂಕಿನ ಕೀರ್ತಿಗೆ ಕಾರಣವಾಗಿದ್ದರೆ,ಇನ್ನು ಬಹುತೇಕೆ ಸುದ್ದಿಗಳು ತಾಲೂಕಿನಾದ್ಯಂತ ವ್ಯಾಪಿಸಿರುವ ಅಕ್ರಮ ಮರಳು ಸಾಗಾಟ,ಜನರ ಜೀವನಕ್ಕೆ ಮಾರಕವಾಗುವ ಮಟ್ಕಾ ಜೂಜಾಟ,ಅಲ್ಲಲ್ಲಿ ಜಮೀನುಗಳ ಮತ್ತು ಬಯಲು ಪ್ರದೇಶಗಳ ಪೋದೆಗಳಲ್ಲಿ ಕಾಣುತ್ತಿರುವ ಅಂದರ್ ಬಾಹರ್ ಇಸ್ಪೀಟ್ ಜೂಜಾಟಗಳ ತಾಲೂಕಿನ ಅಪಕೀರ್ತಿಗೆ ಕಾಣವಾಗಿವೆ.ಅದು ಬಿಡಿ,ತಾಲೂಕಿನ ಆಡಳಿತ ವ್ಯವಸ್ಥೆ ಹೇಗೆ?ಇರುತ್ತೋ ಹಾಗೆ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಸಾರವಾಗುವುದು ಸರ್ವೇ ಸಾಮಾನ್ಯ.ಈಗಾಗಲೇ ಹಲವು ದಿನಗಳಿಂದ ತಾಲೂಕಿನಾದ್ಯಂತ ವ್ಯಾಪಿಸಿರುವ ಮಟ್ಕಾ ಎಂಬ ಜೂಜಾಟದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿರುವ ಬೆನ್ನಲ್ಲೇ ಇದೀಗ ನಗರ ಪ್ರದೇಶದಲ್ಲಿ ಐಪಿಎಲ್ ಬೆಟ್ಟಿಂಗ್ ಜೂಜಾಟವು ಬೆಳಕಿಗೆ ಬಂದಿರುವುದು ತಾಲೂಕಿನ ದುರಾಡಳಿತಕ್ಕೆ ಸಾಕ್ಷಿಯಾಗಿದೆ.
ಈಗಾಗಲೇ ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೇಟ್ ಪಂದ್ಯಾವಳಿಗಳಿಂದ ಜನರ ಮನಸ್ಸಿಗೆ ಉಲ್ಲಾಸಕರ ವಾತಾವರಣ ಉಂಟು ಮಾಡಿದೆ.ಆದರೆ ಅದೆಷ್ಟೋ ಕ್ರೀಡಾ ಪ್ರೇಮಿಗಳ ಪ್ರೀತಿಯ ಕ್ರೀಡೆಯಾದ ಕ್ರಿಕೇಟ್ ಪಂದ್ಯಾವಳಿಯ ಆಟಗಳನ್ನೇ ಬಂಡವಾಳ ಮಾಡಿಕೊಂಡಿರುವ ತಾಲೂಕಿನ ಪ್ರತಿಷ್ಠಿತ ಯುವ ರಾಜಕಾರಣಿಗಳೆಂದು ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿಗಳು ಜನರಿಗೆ ಹಣದ ಆಮೇಶಗಳನ್ನು ತೋರಿಸಿ,ನೀವು ಹಣ ಕಟ್ಟುವ ತಂಡವು ಪಂದ್ಯದಲ್ಲಿ ಗೆದ್ದರೆ ಇಂತಿಷ್ಟು ಪರ್ಸೆಂಟೆಜ್ ತಗೆದುಕೊಂಡು ನೀವು ಕಟ್ಟಿದ ಹಣಕ್ಕೆ ಪ್ರತಿಯಾಗಿ ಗೆದ್ದ ಹಣವನ್ನು ನೀಡುತ್ತೇವೆ ಎನ್ನುವ ಮಾಯಾ ಜಾಲದ ಮೂಲಕ ಯುವ ಪೀಳಿಗೆಯ ಯುವಕರನ್ನು ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗುವಂತೆ ಪ್ರೇರಬ್ಬಿಸುವುದು ತಾಲೂಕಿನ ಬೆಟ್ಟಿಂಗ್ ದಂಧೆಕೋರರ ಅನಿಷ್ಟ ಪದ್ದತಿಯಾಗಿದೆ.ಇನ್ನೂ ರಾಣೆಬೆನ್ನೂರು ನಗರದ ವಾಸಿ ದಿಲೀಪ್ ಮತ್ತು ವಾಗೀಶ ಎನ್ನುವ ವ್ಯಕ್ತಿಗಳು ಬೆಟ್ಟಿಂಗ್ ಆಡಬೇಕೆಂದು ಬಯಸುವ ಯುವಕರಿಗೆ ಬೆಟ್ಟಿಂಗ್ ಜಾಲದ ಬಗ್ಗೆ ಯಾರಿಗೂ ಮಾಹಿತಿ ಬಾರದಂತೆ ಪೋನಿನ ಮುಖಾಂತರ ಬೆಸುಗೆ ಬಗೆಯುವುದರ ಮೂಲಕ ಬೆಟ್ಟಿಂಗ್ ದಂಧೆಯಲ್ಲಿ ದುಮುಕುವಂತೆ ಮಾಡುತ್ತಿದ್ದಾರೆ.ದುರ್ದೈವವೇನಂದರೆ ಈ ಬೆಟ್ಟಿಂಗ್ ಜೂಜಾಟದಲ್ಲಿ ಬಹುತೇಕ ಕಾಲೇಜು ವಿದ್ಯಾರ್ಥಿಗಳು ದುಮಕಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಇನ್ನೂ ಈ ವ್ಯಕ್ತಿಗಳು ಮಾತ್ರ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಬೇಡಿ ಮುಂದಿನ ಸಂಚಿಕೆಯಲ್ಲಿ ಈ ವ್ಯಕ್ತಿಗಳನ್ನು ಮುಂದೆ ಬಿಟ್ಟು ಹಿಂಬದಿಯಿಂದ ಜೂಜಾಟಕ್ಕೆ ಕುಮ್ಮಕ್ಕು ನೀಡುತ್ತಿರುವ “ಕಿಂಗ್ ಪಿನ್” ಯುವ ರಾಜಕಾರಣಿಯ ಮುಖ ಪರಿಚಯವನ್ನು ಮಾಡುವ ಪ್ರಯತ್ನವನ್ನು ಮಾಡೋಣ.ನಗರ ಪ್ರದೇಶದಲ್ಲಿ ಬೆಟ್ಟಿಂಗ್ ನ್ನೇ ದಂಧೆಯನ್ನಾಗಿ ಪರಿವರ್ತನೆ ಮಾಡಿಕೊಂಡಿರುವ ಬೆಟ್ಟಿಂಗ್ ಘಾತುಕರು,ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಶುರುವಾದರೆ ಸಾಕು ಬೆಟ್ಟಿಂಗ್ ಆಡುವ ಯುವಕರನ್ನು ಹುಡುಕಿ,ಹುಡುಕಿ ಬೆಟ್ಟಿಂಗ್ ಜೂಜಾಟದಲ್ಲಿ ದುಮುಕುವಂತೆ ಮಾಡಿ ಅವರು ಬೆಟ್ಟಿಂಗ್ ದಂಧೆಯಲ್ಲಿ ಕಟ್ಟಿ ಗೆದ್ದ ಹಣದಲ್ಲಿ ಪರ್ಸೆಂಟೆಜ್ ಪಡೆದುಕೊಳ್ಳುತ್ತಾ ಸಿರಿವಂತರಾಗುವುದು ಈ ದಂಧೆಕೋರರ ನೀಚ ಮನಸ್ಥಿತಿಗೆ ಕಾರಣವಾಗಿದೆ.ಸರ್ಕಾರವು ಈಗಾಗಲೇ ಜನಸಾಮಾನ್ಯರ ಜೀವನಕ್ಕೆ ಮಾರಾಕವಾಗುವ ಜೂಜಾಟಗಳನ್ನು ನಿಷೇಧಿಸುವುದರ ಜೊತೆಗೆ ಇಂಥಹ ಜೂಜಾಟದಲ್ಲಿ ಭಾಗಿಯಾದವರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ನೀಡಿರುತ್ತದೆ.ಆದರೆ ನಗರ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ಎಂಬ ಜೂಜಾಟದ ಮೂಲಕ ಯುವಕರ,ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವಾಗಿರುವ ದಂಧೆಕೋರರ ಚಲವಲನಗಳು ಕಂಡು ಬರುತ್ತಿದ್ದರು ಕಂಡರು ಕಾಣದ ಕುರುಡನಂತೆ ಅದ್ಯಾಕೆ?ಪೊಲೀಸ್ ಇಲಾಖೆಯು ಮೌನವಹಿಸಿದೆ ಎನ್ನುವುದೇ ತಿಳಿಯದ ಯಕ್ಷ ಪ್ರಶ್ನೆಯಾಗಿದೆ.
ಇನ್ನು,ತಾಲೂಕಿನಾದ್ಯಂತ ಯುವಕರಿಗೆ ಬೆಟ್ಟಿಂಗ್ ದಂಧೆಯ ಮುಖಾಂತರ ಬಹು ಬೇಗನೆ ಹಣಗಳಿಸಬಹುದು ಎನ್ನುವ ದುರಾಸೆಗೆ ತಳ್ಳುವ ಮುಖಾಂತರ ಬೆಟ್ಟಿಂಗ್ ಜೂಜಾಟವನ್ನು ಮೇನ್ನೆಡಿಸಿಕೊಂಡು ಹೋಗುತ್ತಿರುವ ಈ ಘಾತುಕರ ತಂಡವು ಕಾಲೇಜಿಗೆ ಹೋಗುವ ಹುಡುಗರನ್ನೆ ಟಾರ್ಗೆಟ್ ಮಾಡಿಕೊಳ್ಳುತ್ತಾ ಕಳ್ಳ ದಾರಿಯ ಮುಖಾಂತರ ಹಣಗಳಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಈ ಕೂಡಲೇ ರಾಣೆಬೆನ್ನೂರು ನಗರದಲ್ಲಿ ಪೋನಿನ ಮುಖಾಂತರ ಜಾಣ್ಮೆಯ ಜೂಜಾಟಕ್ಕೆ ಪ್ರಚೋದನೆ ನೀಡುತ್ತಿರುವ ದಂಧೆಕೊರರಿಂದ ಯುವ ಪೀಳಿಗೆಯನ್ನು ಕಾಪಾಡಿ,ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡುತ್ತಿರುವ ಬೆಟ್ಟಿಂಗ್ ಘಾತುಕರ ಮುಷ್ಟಿಯಿಂದ ಯುವಕರನ್ನು ಕಾಪಾಡುವುದರ ಜೊತೆಗೆ ಜೂಜಾಟಕ್ಕೆ ಪ್ರಚೋದನೆ ನೀಡುತ್ತಿರುವ ಬೆಟ್ಟಿಂಗ್ ಘಾತುಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ತಾಲೂಕಿನಲ್ಲಿ ಮನೆ ಮಾಡಿರುವ ಕ್ರಿಕೇಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವುದು ಪೊಲೀಸ್ ಇಲಾಖೆಗೆ ಅನಿವಾರ್ಯವಾಗಿದೆ.