ಹಾವೇರಿ
ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಗೆ ಆಗಮಿಸಿದ್ದ ಉಪ ಲೋಕಾಯುಕ್ತರ ಆಗಮನದಿಂದ ಜಿಲ್ಲೆಯಲ್ಲಿ ಮರೆಯಾಗಿದ್ದ ಅದೆಷ್ಟೋ ಅಕ್ರಮಗಳು ಬಯಲಿಗೆ ಬರುವುದರ ಜೊತೆಗೆ ಅವಗಾಗಲೇ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆದಿದ್ದ ಅಕ್ರಮ ಮರಳು ಸಾಗಾಟಕ್ಕೂ ಸಹ ಮುಕ್ತಿ ದೋರಕಿತ್ತು.ಆದರೆ ಆಯುಕ್ತರ ಆಗಮನದಿಂದ ಕೊಂಚ ಮಟ್ಟಿಗೆ ಮುಕ್ತಿಯ ಹತಾಸೆಗೆ ಬಂದೊದಗಿದ್ದ ಅಕ್ರಮ ಮರಳು ದಂಧೆಕೋರರು ಇದೀಗ ಮತ್ತೆ ತಮ್ಮ ಹಳೆಯ ವರಸೆಯ ದಾರಿ ಹಿಡಿದಿರುವುದು ಇಲ್ಲಿನ ಜಿಲ್ಲಾಡಳಿತದ ವೈಪಲ್ಯಕ್ಕೆ ಕಾರಣವಾಗಿದೆ.ಈಗಾಗಲೇ ಜಿಲ್ಲೆಯ ವ್ಯಾಪ್ತಿಗೆ ಬರುವ ಗುತ್ತಲ,ರಟ್ಟಿಹಳ್ಳಿ,ಹಲಗೇರಿ,ರಾಣೆಬೆನ್ನೂರು ಗ್ರಾಮೀಣ ಭಾಗದ ಪೊಲೀಸ್ ಠಾಣೆಗಳ ಸರಹದ್ದಿಗೆ ಬರುವ ನದಿ ಪಾತ್ರದ ಗ್ರಾಮಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ದಂಧೆಯು ನಡೆಯುತ್ತಿರುವುದು ಕಂಡುಬಂದಿದ್ದು,ರಟ್ಟಿಹಳ್ಳಿ ತಾಲೂಕಿನ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ನೆಪ ಮಾತ್ರಕ್ಕೆ ರಟ್ಟಿಹಳ್ಳಿ ತಾಲೂಕಿನ ಶಂಕ್ರನಹಳ್ಳಿ,ಕಿರಿಗೇರಿ ಗ್ರಾಮದಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ್ದ ಸ್ವಲ್ಪ ಪ್ರಮಾಣದ ಮರಳನ್ನು ವಶಕ್ಕೆ ಪಡೆದು ಶಂಕ್ರನಹಳ್ಳಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆಗೆ ಬಳಸಿದ ಜೇಸಿಬಿಗಳು ಮತ್ತು ಇನ್ನಿತರೆ ಯಾವುದೇ ವಾಹನಗಳನ್ನು ವಶಕ್ಕೆ ಪಡೆಯದೆ ಕೇವಲ ಫೋಟೋ ಶೂಟ್ ಮಾಡಿಸಿಕೊಂಡಿರುವುದು ಒಂದಡೆಯಾದರೆ,ರಾಣೆಬೆನ್ನೂರು ತಾಲೂಕಿನ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳಿಗೆ ಅದ್ಯಾವ? ದೇವರ ದಿವ್ಯ ದೃಷ್ಟಿ ಬಿತ್ತೋ ಗೊತ್ತಿಲ್ಲ.ಹಲಗೇರಿ ಠಾಣೆಯ ವ್ಯಾಪ್ತಿಗೆ ಬರುವ ಕೋಟಿಹಾಳ ಗ್ರಾಮದ ಕಣಗಳಲ್ಲಿ,ಮನೆಗಳ ಹೊರ ಭಾಗದಲ್ಲಿ ಮತ್ತು ಜಮೀನುಗಳಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ ಸುಮಾರು ನೂರ ಐವತ್ತು ಮೆಟ್ರಿಕ್ ಟನ್ ಗಿಂತ ಹೆಚ್ಚಿನ ಮರಳನ್ನು ವಶಕ್ಕೆ ಪಡೆದಿರುವುದನ್ನು ಗಮನಿಸಿದರೆ ಎಲ್ಲೋ ಇಷ್ಟು ದಿನಗಳ ಕಾಲ ಗಾಡ ನಿದ್ರೆಗೆ ಜಾರಿದ ತಾಲೂಕಿನ ಟಾಸ್ಕ್ ಫೋರ್ಸ್ ನ ಅಧಿಕಾರಿಗಳು ನಿದ್ದೆಯಿಂದ ಮುಕ್ತಿ ಹೊಂದಿರುವಂತೆ ತೋರುತ್ತಿದೆ.
ಆದರೆ,ಇದೀಗ ಮತ್ತೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಚಿಕ್ಕಕುರುವತ್ತಿ,ಹಿರೇಬಿದರಿ,ಐರಣಿ,ಹರನಗಿರಿ ಇನ್ನೂ ಮುಂತಾದ ಗ್ರಾಮಗಳ ಪಕ್ಕದಲ್ಲಿ ಹರಿದಿರುವ ತುಂಗಾಭದ್ರೆಯ ಒಡಲಲ್ಲಿ ಅಡಗಿರುವ ಮರಳನ್ನು ಜೇಸಿಬಿ ಮತ್ತು ದೋಣಿಗಳ ಮುಖಾಂತರ ಅಗೆದು ಸರ್ಕಾರದ ಬೊಕ್ಕಸಕ್ಕೆ ಯಾವುದೇ ತೆರಿಗೆ ಭರಿಸದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಣ್ಣಿಗೆ ಎಟಕುವ ದೃಶ್ಯಗಳಾಗಿ ಕಂಡುಬರುತ್ತಿದ್ದರು ಅದ್ಯಾಕೆ?ತಾಲೂಕಿನ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ನಡೆಯುತ್ತಿರುವ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಮುಂದೆ ಬಾರದೇ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ನಡೆಯಾದರೂ ಏನು?ಇನ್ನು,ಕೋಟಿಹಾಳ ಗ್ರಾಮದಲ್ಲಿ ಅಕ್ರಮಕೋರರು ಅಕ್ರಮವಾಗಿ ಶೇಖರಣೆ ಮಾಡಿದ ಮರಳನ್ನು ವಶಕ್ಕೆ ಪಡೆಯುವಾಗ ತೋರಿದ ಕರ್ತವ್ಯ ನಿಷ್ಠೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಸರಹದ್ದಿಗೆ ಬರುವ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಮುಂದಾಗಿರುವ ವಾಹನಗಳ ಮೇಲೆ ಯಾಕಿಲ್ಲ?ಅಥವಾ ಗ್ರಾಮೀಣ ಭಾಗದ ಮರಳು ದಂಧೆಕೋರರು ನೀಡಿದ ಮಾಮೂಲಿಯನ್ನು ಕೋಟಿಹಾಳ ಗ್ರಾಮದ ಮರಳು ದಂಧೆಕೋರರು ನೀಡಲು ಹಿಂದೇಟು ಹಾಕಿದ್ದಕ್ಕೆ,ನಿಷ್ಠೆಯ ಕರ್ತವ್ಯಕ್ಕೆ ತಾಲೂಕಿನ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳು ಮುಂದಾದರಾ?ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಅದು ಬಿಡಿ ಹಲವು ದಿನಗಳಿಂದ ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಶಂಕರನಹಳ್ಳಿ ಪಕ್ಕದಲ್ಲಿ ಹರಿದಿರುವ ತುಂಗಾಭದ್ರ ನದಿಯ ಒಡಲಲ್ಲಿ ಅಡಗಿರುವ ಮರಳನ್ನು ಜೇಸಿಬಿಗಳ ಮುಖಾಂತರ ಅಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ ದಾನಮ್ಮನವರ್ ಮತ್ತು ಹಿರಿಯ ಭೂ ವಿಜ್ಞಾನಿ ನವೀನ್ ರವರ ಗಮನಕ್ಕೆ ತಂದಿರುತ್ತೇನೆ.ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಗಣಿ ಅಧಿಕಾರಿಗಳು ಕಿರಿಗೇರಿ ಗ್ರಾಮದಲ್ಲಿ ನದಿ ಪಾತ್ರದಲ್ಲಿ ಅಡಗಿರುವ ಮರಳನ್ನು ತೆಗೆಯಲು ಬಳಸಿದ ಪುಟ್ಟಿ ದೋಣಿಗಳನ್ನು ವಶಕ್ಕೆ ಪಡೆದು ದೋಣಿಗಳನ್ನು ಜಜ್ಜಿ ಹಾಕಿರುತ್ತಾರೆ.ಆದರೆ ಶಂಕ್ರನಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಬಳಸಿದ ವಾಹನಗಳನ್ನು ವಶಕ್ಕೆ ಪಡೆಯದೆ ನೆಪ ಮಾತ್ರಕ್ಕೆ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಲು ಹೋಗಿರುತ್ತೇವೆ ಎನ್ನುವ ಫೋಟೋ ಶೂಟ್ ಮುಖಾಂತರ ಬಿಲ್ದಪ್ ತೆಗೆದುಕೊಳ್ಳುತ್ತಿರುವ ಕಿರಿಯ ಭೂ ವಿಜ್ಞಾನಿಗಳು ಶಬ್ಬಿರ್ ಮತ್ತು ಅವಿನಾಶನ ಹಿನ್ನಲೆಯಾದರೂ ಏನು?
ಇನ್ನೂ ರಾಣೆಬೆನ್ನೂರು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ಬಗ್ಗೆ ಹಲವು ಬಾರಿ ಜಿಲ್ಲೆಯ ಪತ್ರಿಕಾ ಮಿತ್ರರು ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸುವುದರ ಮೂಲಕ ಜಿಲ್ಲೆಯ ಟಾಕ್ಸ್ ಫೋರ್ಸ್ ಸಮಿತಿಯ ಅಧಿಕಾರಿಗಳ ಗಮನಕ್ಕೆ ತರುವ ಕೆಲಸಕ್ಕೆ ಮುಂದಾಗಿದ್ದರು.ಆದರೆ ದಪ್ಪ ಚರ್ಮದ ಈ ನರಭಕ್ಷಕ ಅಧಿಕಾರಿಗಳು ಸುದ್ದಿ ಪ್ರಕಟಗೊಂಡ ಹಿನ್ನಲೆಯಿಂದ ಮುಂದಿನ ದಿನಗಳಲ್ಲಿ ತಮ್ಮ ಕರ್ತವ್ಯಕ್ಕೆ ಕುತ್ತು ಬರಬಾರದು ಎನ್ನುವ ಮುಂದಾಲೋಚನೆಯಿಂದ ಅ ಕ್ಷಣ ಮಾತ್ರಕ್ಕೆ ನಡೆಯುತ್ತಿರುವ ಅಕ್ರಮವನ್ನು ತಡೆಯುವಂತೆ ಜಾಣ್ಮೆಯ ನಾಟಕವನ್ನಾಡುತ್ತಾ ಕಾಲ ಕ್ರಮೇಣ ಮತ್ತೆ ಹಿಂಬದಿಯಿಂದ ಅಕ್ರಮ ಎಸಗಲು ಅಕ್ರಮಕೋರರಿಗೆ ಸಾಥ್ ನೀಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈ ಹಿಂದೆ ಐರಣಿ ಭಾಗದ ನದಿ ಪ್ರಾಂತ್ಯದಲ್ಲಿ ಜೇಸಿಬಿಗಳ ಮುಖಾಂತರ ಅಕ್ರಮವಾಗಿ ಮರಳನ್ನು ಅಗೆಯುತ್ತಿರುವ ದೃಶ್ಯದ ವಿಡಿಯೋವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುತ್ತೇನೆ.ನಾನು ನೀಡಿದ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿಗಳು,ಸ್ಥಳವನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಈ ಭಾಗದ ಕಂದಾಯ ನಿರೀಕ್ಷಕನಿಗೆ ಆದೇಶಿಸಿರುತ್ತಾರೆ.ಆದರೆ ಈ ಭಾಗದ ಕಂದಾಯ ನಿರೀಕ್ಷಕನಾಗಿರುವ ವಾಗೀಶ ಮಳಿಮಠ ಎನ್ನುವ ಅಧಿಕಾರಿಯು ಐರಣಿ ಸರ್ವೇ ನಂಬರ್ ನಲ್ಲಿ ಯಾವುದೇ ಅಕ್ರಮ ಮರಳು ಗಣಿಗಾರಿಕೆ ನಡೆದಿರುವುದಿಲ್ಲ.ಆ ಕಡೆ ಭಾಗವಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮ ನಡೆದಿರುವುದು ಕಂಡುಬರುತ್ತಿದೆ ಎನ್ನುವ ಮಾಹಿತಿ ನೀಡುವ ಮೂಲಕ ಜಿಲ್ಲಾಧಿಕಾರಿಗಳನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿರುವ ಈ ಅಧಿಕಾರಿಯು ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ನಾಯಕನ ನಡುಗೆ ಪತ್ರಿಕೆಯಲ್ಲಿ ಪ್ರಕಟಿಸುವುದರ ಮೂಲಕ ಈ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರಿಕೆ ಮನವಿ ಮಾಡಿತ್ತು.ಆದರೆ ಜಿಲ್ಲಾಧಿಕಾರಿಗಳಿಗೆ ನಡೆದಿರುವ ಅಕ್ರಮದ ಬಗ್ಗೆ ಸಾಕ್ಷಿ ಪೂರಕವಾಗಿ ಮಾಹಿತಿ ನೀಡಿದರು ಅದ್ಯಾಕೋ ಅಕ್ರಮಕ್ಕೆ ಸಾಥ್ ನೀಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ತಿಳಿಯದ ಯಕ್ಷ ಪ್ರಶ್ನೆಯಾಗಿದೆ.
ಇನ್ನು,ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದ ಬಗ್ಗೆ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ನವೀನ್ ರವರ ಗಮನಕ್ಕೆ ತಂದರೆ,ಈ ಅಧಿಕಾರಿ ಪದೆ ಪದೆ ನಮಗೆ ಹೇಳುತ್ತಿರಲ್ಲ ಪೊಲೀಸ್ ಇಲಾಖೆಯು ಹೇಳಿ ಎಂದು ಹೇಳುವ ಮಾತಿನಲ್ಲಿ ತಪ್ಪೇನಿಲ್ಲ.ಆದರೆ ಕಳ್ಳತನ ಮಾಡಿಸುವ ಚೋರರಿಗೆ,ಕಳ್ಳತನ ಮಾಡುತ್ತಿರುವ ಬಗ್ಗೆ ಹೇಳಿದರೆ ಅದ್ಯಾಗೆ?ಕಳ್ಳರನ್ನು ಹಿಡಿಯುತ್ತಾರೆ ನೀವೇ ಹೇಳಿ ಅಧಿಕಾರಿಗಳೇ.ಈಗಾಗಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟದಲ್ಲಿ ಭಾಗಿಯಾಗುವ ಟ್ರಾಕ್ಟರ್,ಟಿಪ್ಪರ್,ಜೇಸಿಬಿ,ತಿಂಗಳಿಗೆ ಇಂತಿಷ್ಟು ಮಾಮೂಲಿ ಫಿಕ್ಸ್ ಮಾಡುವುದು ಇದೆ ಪೊಲೀಸ್ ಇಲಾಖೆ ಎನ್ನುವುದು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿವೆ.ಇನ್ನೂ ಮುಂದಿನ ದಿನಗಳಲ್ಲಾದರೂ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಗ್ರಾಮಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡದ ಗ್ರಾಮದ ಬೀಟ್ ಪೊಲೀಸ್ ಹಾಗೂ ಗ್ರಾಮ ಲೆಕ್ಕಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡಾಗ ತಾನಾಗಿಯೇ ನಡೆಯುತ್ತಿರುವ ಅಕ್ರಮ ಮರಳು ಸಾಗಾಟವು ಕೋನೆಗೊಳ್ಳುತ್ತದೆ ಎನ್ನುವ ಅಂಶವನ್ನು ಅರಿತು ಈಗಾಗಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುವುದರ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ಸರಿ ಪಡಿಸಲು ಜಿಲ್ಲಾಧಿಕಾರಿಗಳು ಮುಂದಾಗುತ್ತಾರ ಅಂತ ಕಾದು ನೋಡಬೇಕಾಗಿದೆ.